Chandan Mishra Murder : ಪಾಟಲಿಪುತ್ರದಲ್ಲಿನ ಗೂಂಡಾ ಚಂದನ್ ಮಿಶ್ರಾರ ಕೊಲೆ ಪ್ರಕರಣ; 4 ಜನರ ಬಂಧನ

ಪಾಟಲಿಪುತ್ರ (ಬಿಹಾರ) – ಇಲ್ಲಿನ ಪಾರಸ್ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಗೂಂಡಾ ಚಂದನ್ ಮಿಶ್ರಾನನ್ನು ಗುಂಡಿಕ್ಕಿ ಹತ್ಯೆ ಮಾಡಿದ ಪ್ರಕರಣದಲ್ಲಿ ಪೊಲೀಸರು ಕೋಲಕಾತಾದಲ್ಲಿ ದಾಳಿ ನಡೆಸಿ ತೌಸಿಫ್ ಖಾನ್ ಅಲಿಯಾಸ್ ಬಾದ್‌ಷಾ, ನಿಶು ಖಾನ್, ಹರ್ಷ ಅಲಿಯಾಸ್ ಹರೀಶ ಕುಮಾರ್ ಮತ್ತು ಭೀಮ ಕುಮಾರ್ ಅವರನ್ನು ಬಂಧಿಸಿದ್ದಾರೆ. ಇದರೊಂದಿಗೆ ಓರ್ವ ಮಹಿಳೆಯನ್ನು ಸಹ ವಶಕ್ಕೆ ಪಡೆಯಲಾಗಿದೆ. ಈ ದಾಳಿಯ ಸಮಯದಲ್ಲಿ ಪೊಲೀಸರು ಮತ್ತು ಆರೋಪಿಗಳ ನಡುವೆ ಗುಂಡಿನ ಚಕಮಕಿ ನಡೆದಿದ್ದು, ಇದರಲ್ಲಿ ಓರ್ವ ಆರೋಪಿ ಗಾಯಗೊಂಡಿದ್ದಾನೆ. ಪೊಲೀಸರು ಕೆಲವು ಶಂಕಿತರನ್ನು ಸಹ ವಶಕ್ಕೆ ಪಡೆದು ಅವರ ವಿಚಾರಣೆ ನಡೆಸುತ್ತಿದ್ದಾರೆ.