Sanatn Rashtra Shanka Naad : ವಿಧಾನ ಪರಿಷತ್ ಸಭಾಪತಿ ಶ್ರೀ. ರಾಮ ಶಿಂದೆ ಅವರಿಗೆ ‘ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಅಠಾವಲೆ ಅವರ ಸಂಕ್ಷಿಪ್ತ ಚರಿತ್ರೆ’ ಗ್ರಂಥ ಉಡುಗೊರೆ !

ಎಡದಿಂದ ಶ್ರೀ. ಅರವಿಂದ ಪಾನಸರೆ, ಶ್ರೀ. ಸುನೀಲ್ ಘನವಟ್ ಮತ್ತು ಸಭಾಪತಿ ಶ್ರೀ. ರಾಮ ಶಿಂದೆ

ಮುಂಬಯಿ, ಜುಲೈ 16 (ವಾರ್ತೆ) – ಸನಾತನ ಸಂಸ್ಥೆಗೆ 25 ವರ್ಷ ಪೂರ್ಣಗೊಂಡಿರುವ ನಿಮಿತ್ತ ಮತ್ತು ಸನಾತನ ಸಂಸ್ಥೆಯ ಸಂಸ್ಥಾಪಕ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಅಠಾವಲೆ ಅವರ 83ನೇ ಹುಟ್ಟುಹಬ್ಬದ ನಿಮಿತ್ತ ಸನಾತನ ಸಂಸ್ಥೆಯ ವತಿಯಿಂದ ಗೋವಾದಲ್ಲಿ ಇತ್ತೀಚೆಗೆ ಸನಾತನ ರಾಷ್ಟ್ರ ಶಂಖನಾದ ಮಹೋತ್ಸವವನ್ನು ಆಯೋಜಿಸಲಾಗಿತ್ತು. ಈ ನಿಮಿತ್ತ ಆಯೋಜಿಸಲಾಗಿದ್ದ ಶತಚಂಡಿ ಯಾಗ ಮತ್ತು ಮಹಾಧನ್ವಂತರಿ ಯಾಗದ ಪ್ರಸಾದವನ್ನು ಹಿಂದೂ ಜನಜಾಗೃತಿ ಸಮಿತಿಯ ಮಹಾರಾಷ್ಟ್ರ ಮತ್ತು ಛತ್ತೀಸ್‌ಗಢ ರಾಜ್ಯಗಳ ಸಂಘಟಕ ಶ್ರೀ. ಸುನೀಲ ಘನವಟ್ ಅವರು ವಿಧಾನ ಪರಿಷತ್ ಸಭಾಪತಿ ಶ್ರೀ. ರಾಮ ಶಿಂದೆ ಅವರಿಗೆ ನೀಡಿದರು.

ಈ ಸಮಯದಲ್ಲಿ ಸುನೀಲ ಘನವಟ್ ಅವರು ಶ್ರೀ. ರಾಮ ಶಿಂದೆ ಅವರಿಗೆ ಶ್ರೀ ಬಾಲಾಜಿಯ ಬೆಳ್ಳಿ ಮೂರ್ತಿ ಮತ್ತು ‘ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಅಠಾವಲೆ ಅವರ ಸಂಕ್ಷಿಪ್ತ ಜೀವನಚರಿತ್ರೆ’ ಗ್ರಂಥವನ್ನು ಉಡುಗೊರೆಯಾಗಿ ನೀಡಿದರು. ಈ ಸಂದರ್ಭದಲ್ಲಿ ದೈನಿಕ ‘ಸನಾತನ ಪ್ರಭಾತ’ದ ಪ್ರತಿನಿಧಿ ಶ್ರೀ. ಅರವಿಂದ ಪಾನಸರೆ ಕೂಡ ಉಪಸ್ಥಿತರಿದ್ದರು.