ಮಾಹಿತಿ ಹಕ್ಕು ಕಾಯ್ದೆಯಿಂದ ಮಾಹಿತಿ ಬಹಿರಂಗ!

ನವದೆಹಲಿ – ಮಾಹಿತಿ ಹಕ್ಕು ಕಾಯಿದೆಯಡಿ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ ನೀಡಿದ ಮಾಹಿತಿಯ ಪ್ರಕಾರ, ಕಳೆದ 5 ವರ್ಷಗಳಲ್ಲಿ ಭಾರತದಲ್ಲಿ 65 ವಿಮಾನಗಳ ಇಂಜಿನ್ ಗಳು ಟೇಕ್ ಆಫ್ ಸಮಯದಲ್ಲಿ ಅಥವಾ ಗಾಳಿಯಲ್ಲಿರುವಾಗ ಸ್ಥಗಿತಗೊಂಡಿವೆ. ಅಂದರೆ, ಪ್ರತಿ ತಿಂಗಳು ಕನಿಷ್ಠ ಒಂದು ವಿಮಾನದ ಇಂಜಿನ್ ಸ್ಥಗಿತಗೊಳ್ಳುತ್ತದೆ. ಈ ಎಲ್ಲಾ ಪ್ರಕರಣಗಳಲ್ಲಿ, ಪೈಲಟ್‌ಗಳು ಒಂದೇ ಇಂಜಿನ್ ನಲ್ಲಿ ವಿಮಾನವನ್ನು ಇಳಿಸಲು ಮತ್ತು ಹತ್ತಿರದ ವಿಮಾನ ನಿಲ್ದಾಣವನ್ನು ತಲುಪಲು ಸಾಧ್ಯವಾಯಿತು.

ಈ ಮಾಹಿತಿಯಲ್ಲಿ, ಜನವರಿ 1, 2024 ರಿಂದ ಮೇ 31, 2025 ರವರೆಗಿನ 17 ತಿಂಗಳಲ್ಲಿ 11 ವಿಮಾನಗಳಿಂದ ‘ಮೇಡೇ’ ಕರೆಗಳು ಬಂದಿವೆ ಎಂದು ಹೇಳಲಾಗಿದೆ. ಇದರಲ್ಲಿ ತಾಂತ್ರಿಕ ದೋಷದ ಬಗ್ಗೆ ಮಾಹಿತಿ ನೀಡಿ ತುರ್ತು ಪರಿಸ್ಥಿತಿಯಲ್ಲಿ ವಿಮಾನವನ್ನು ಇಳಿಸಲು ಮನವಿ ಮಾಡಲಾಗಿತ್ತು. ಇವುಗಳಲ್ಲಿ 4 ವಿಮಾನಗಳು ಭಾಗ್ಯನಗರದಲ್ಲಿ ಇಳಿದಿವೆ.
‘ಮೇಡೇ ಕಾಲ್’ ಎಂದರೇನು?

‘ಮೇಡೇ’ ಎಂಬುದು ಫ್ರೆಂಚ್ ಭಾಷೆಯ ಪದವಾಗಿದೆ. ಇದರ ಅರ್ಥ ‘ನನ್ನನ್ನು ಉಳಿಸಿ’ ಎಂದರ್ಥ. ಈ ಕರೆಯನ್ನು ಸಾಮಾನ್ಯವಾಗಿ ರೇಡಿಯೊ ಮೂಲಕ ವಿಮಾನಯಾನ ನಿಯಂತ್ರಣ ಕೊಠಡಿಗೆ ಅಥವಾ ಹತ್ತಿರದ ಇತರ ವಿಮಾನ ನಿಲ್ದಾಣಗಳಿಗೆ ಕಳುಹಿಸಲಾಗುತ್ತದೆ. ಇದನ್ನು ತುರ್ತು ಪರಿಸ್ಥಿತಿಯನ್ನು ನಿಭಾಯಿಸಲು ತಕ್ಷಣದ ಸಹಾಯವನ್ನು ಕೋರಲು ಬಳಸಲಾಗುತ್ತದೆ.
ಸಂಪಾದಕೀಯ ನಿಲುವುಇದು ಹೀಗೆಯೇ ಆಗುತ್ತಿದ್ದರೆ, ಇದಕ್ಕೆ ಪರಿಹಾರ ಏಕೆ ಕಂಡುಹಿಡಿಯಲಿಲ್ಲ? ಈ ಮಾಹಿತಿಯೂ ಹೊರಬರಬೇಕು! |
Kerala HC on Waqf : ಕೇರಳ ಹೈಕೋರ್ಟ್ನಿಂದ ರಾಜ್ಯ ವಕ್ಫ್ ಮಂಡಳಿಗೆ ನೀತಿ ನಿರ್ಧಾರಗಳನ್ನು ತೆಗೆದುಕೊಳ್ಳದಂತೆ ತಡೆ
ಬದರಿನಾಥ ದೇವಸ್ಥಾನದ ದೇಣಿಗೆ ಹಣ ಕಳ್ಳತನ ಪ್ರಕರಣ; ದೇವಸ್ಥಾನದ ಮಾಜಿ ಅಧಿಕಾರಿಯ ಬಂಧನ : Badrinath Temple Arrest
‘ಹಿಂದಿ ಮತ್ತು ಉರ್ದು ಭಾರತದ ಭಾಷೆಗಳು, ಆದರೆ ಸಂಸ್ಕೃತ ಹೊರಗಿನಿಂದ ಬಂದಿದೆಯಂತೆ!’ : Congress MP Mohammad Javed
ಮಾಫಿಯಾಗಳನ್ನು ನರಕಕ್ಕೆ ಅಥವಾ ಜೈಲಿಗೆ ಕಳುಹಿಸುತ್ತೇನೆ ! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ : CM Yogi Adityanath
‘ಶ್ರೀಕೃಷ್ಣ ಮುಸಲ್ಮಾನರಾಗಿದ್ದರು ಮತ್ತು ದಿನಕ್ಕೆ ೫ ಬಾರಿ ನಮಾಜ್ ಮಾಡುತ್ತಿದ್ದರಂತೆ!’– Maulana Jarjis Ansari
ವಂಚನೆ ಅಥವಾ ಬ್ಲ್ಯಾಕ್ ಮೇಲ್ ಮೂಲಕ ದೈಹಿಕ ಸಂಬಂಧವಾದರೆ, ಅದನ್ನು ‘ಬಲಾತ್ಕಾರ’ ಎಂದು ಪರಿಗಣಿಸಲಾಗುವುದು! – ಮದ್ರಾಸ್ ಉಚ್ಚ ನ್ಯಾಯಾಲಯ