Operation Sindoor : ಕದನ ವಿರಾಮಕ್ಕಾಗಿ ಪಾಕಿಸ್ತಾನವೇ ಭಾರತದ ಬಳಿ ಅಂಗಲಾಚಿತ್ತು! – ಪಾಕ್ ಸಂಸ್ಥೆಯ ವರದಿ

ಟ್ರಂಪ್ ಮಧ್ಯಸ್ಥಿಕೆ ಇರಲಿಲ್ಲ!

ನವದೆಹಲಿ – ‘ಆಪರೇಷನ್ ಸಿಂದೂರ್’ ಕಾರ್ಯಾಚರಣೆಯ ಅವಧಿಯಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವೆ 4 ದಿನಗಳ ಕಾಲ ಸಂಘರ್ಷ ನಡೆಯಿತು. ಭಾರತದಿಂದ ನಿರಂತರವಾಗಿ ದೊಡ್ಡ ಪ್ರಮಾಣದಲ್ಲಿ ನಡೆಯುತ್ತಿದ್ದ ಆಕ್ರಮಣಗಳಿಂದಾಗಿ, ಅಂತಿಮವಾಗಿ ಮೇ 10 ರಂದು ಪಾಕಿಸ್ತಾನ ಸೇನೆಯು ಕದನ ವಿರಾಮದ ಪ್ರಸ್ತಾವನೆಯನ್ನು ಮುಂದಿಟ್ಟಿತ್ತು. ಇದಕ್ಕೆ ಭಾರತವು ತನ್ನ ಷರತ್ತುಗಳ ಮೇಲೆ ಕದನ ವಿರಾಮವನ್ನು ಒಪ್ಪಿಕೊಂಡಿತು ಎಂದು ಪಾಕಿಸ್ತಾನದ ಥಿಂಕ್ ಟ್ಯಾಂಕ್ ‘ಪಾಕಿಸ್ತಾನ್-ಚೈನಾ ಇನ್‌ಸ್ಟಿಟ್ಯೂಟ್’ ಹೇಳಿದೆ.

1. ಇದರಿಂದಾಗಿ ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಉಭಯ ದೇಶಗಳ ನಡುವೆ ಮಧ್ಯಸ್ಥಿಕೆ ವಹಿಸಿದ್ದರು ಎಂಬ ಹೇಳಿಕೆಯು ಸುಳ್ಳಾಗಿದೆ. ಇದು ಅಮೆರಿಕಾದ ಪ್ರತಿಷ್ಠೆಗೆ ಗಂಭೀರ ಧಕ್ಕೆ ಉಂಟುಮಾಡಿದೆ.

2. ‘ದಕ್ಷಿಣ ಏಷ್ಯಾಕ್ಕೆ ಹೊಸ ರೂಪ ನೀಡುವ 16 ಗಂಟೆಗಳು’ ಎಂಬ ಶೀರ್ಷಿಕೆಯಡಿ ಈ ವರದಿಯನ್ನು ಪ್ರಕಟಿಸಲಾಗಿದೆ.

3. ಈ ವರದಿಯಿಂದ ‘ಆಪರೇಷನ್ ಸಿಂದೂರ್’ ಕಾರ್ಯಾಚರಣೆಯಲ್ಲಿ ಯಾವುದೇ ಮೂರನೇ ಪಕ್ಷದ ಪಾಲ್ಗೊಳ್ಳುವಿಕೆ ಇರಲಿಲ್ಲ. ಪಾಕಿಸ್ತಾನವೇ ನೇರವಾಗಿ ಸಂಪರ್ಕ ಸಾಧಿಸಿತ್ತು ಮತ್ತು ಭಾರತವು ಕದನ ವಿರಾಮವನ್ನು ಒಪ್ಪಿಕೊಂಡಿತು’ ಎಂಬ ಭಾರತದ ವಾದವನ್ನು ಇನ್ನಷ್ಟು ಬಲಪಡಿಸಿದೆ.

ಟ್ರಂಪ್ ವಿರುದ್ಧ ಈ ರೀತಿ ಚಾಟಿ ಬೀಸಲಾಗಿದೆ!

ವರದಿಯಲ್ಲಿ ಹೀಗೂ ಹೇಳಲಾಗಿದೆ ಏನೆಂದರೆ, ಅಮೆರಿಕಕ್ಕೆ ದಕ್ಷಿಣ ಏಷ್ಯಾದಲ್ಲಿ ಪ್ರಾಬಲ್ಯ ಸಾಧಿಸುವಲ್ಲಿ ಟ್ರಂಪ್ ವಿಫಲರಾದರು. ಅಮೆರಿಕಾ ಮಿತ್ರ ರಾಷ್ಟ್ರವಾದ ಭಾರತವನ್ನು ಬೆಂಬಲಿಸುವ ಬದಲು, ಈ ವಿಷಯದಲ್ಲಿ ಮಧ್ಯಸ್ಥಿಕೆ ವಹಿಸುವ ನಿಲುವನ್ನು ತೆಗೆದುಕೊಂಡಿತು. ಟ್ರಂಪ್ ಅವರ ಈ ಘೋಷಣೆಯು ಒಂದು ರಾಜತಾಂತ್ರಿಕ ತಪ್ಪಾಗಿತ್ತು. ಇದರ ಜೊತೆಗೆ, ಪಾಕಿಸ್ತಾನದ ಪ್ರಶಂಸೆ ಮತ್ತು ಕಾಶ್ಮೀರ ವಿಷಯದಲ್ಲಿ ಮಧ್ಯಸ್ಥಿಕೆಯ ಕುರಿತಾದ ಹೇಳಿಕೆಗಳಿಂದಾಗಿ ಅಮೆರಿಕಾ ಅರಿವಿಲ್ಲದೆ ಚೀನಾದ ಪ್ರಭಾವವನ್ನು ಹೆಚ್ಚಿಸಿತು. ಇದು ‘ಜಾಗತಿಕ ನಾಯಕ’ರಾಗಿ ಟ್ರಂಪ್ ಅವರ ವರ್ಚಸ್ಸನ್ನು ಮಸುಕುಗೊಳಿಸಿತು.

ಸಂಪಾದಕೀಯ ನಿಲುವು

ಸ್ವಾರ್ಥದಿಂದ ತುಂಬಿರುವ ಅಮೆರಿಕಾ ಮತ್ತು ಅದರ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಅವಕಾಶವಾದಿತನವನ್ನು ಈಗ ಪಾಕಿಸ್ತಾನದ ಸಂಸ್ಥೆಯೇ ತೋರಿಸಿದೆ. ಭಾರತ ಸರಕಾರಕ್ಕೆ ಇದು ಚೆನ್ನಾಗಿ ತಿಳಿದಿದೆ!