
ಜುನ್ನರ್ (ಪುಣೆ), ಜುಲೈ ೧೦ (ವರದಿ) – ಜುನ್ನರ್ ತಾಲೂಕಿನ ಕಾಂದಳಿಯಲ್ಲಿ (ಪುಣೆ ಜಿಲ್ಲೆ) ಇರುವ ಆಶ್ರಮದಲ್ಲಿ ‘ಶ್ರೀ ರಾಮಚಂದ್ರ ದೇವ ಟ್ರಸ್ಟ್ ಏವಂ ಪ.ಪೂ. ಭಕ್ತರಾಜ ಮಹಾರಾಜ ಸಮಾಧಿ ಟ್ರಸ್ಟ್’ ವತಿಯಿಂದ ಜುಲೈ ೯ ಮತ್ತು ೧೦ ರಂದು ಗುರುಪೂರ್ಣಿಮಾ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಪ.ಪೂ. ಭಕ್ತರಾಜ ಮಹಾರಾಜರ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು. ಜುಲೈ ೯ ರಂದು ರಾತ್ರಿ ೯ ರಿಂದ ಮಧ್ಯರಾತ್ರಿ ೨ ರವರೆಗೆ ಭಕ್ತರು ಪ.ಪೂ. ಬಾಬಾರವರ ಭಜನೆಗಳನ್ನು ಹಾಡಿದರು. ಜುಲೈ ೧೦ ರಂದು ಬೆಳಿಗ್ಗೆ ೯ ರಿಂದ ೧೦ ರವರೆಗೆ ಪ.ಪೂ. ಬಾಬಾರವರ ಸಮಾಧಿಗೆ ಅಭಿಷೇಕ ಮಾಡಲಾಯಿತು. ಅಭಿಷೇಕವನ್ನು ಸೂರತ್‌ನ ಶ್ರೀ. ನಿಖಿಲ ಪಾಟ್ಕರ್ ಅವರು ಮಾಡಿದರು. ಆ ಸಮಯದಲ್ಲಿ ಶ್ರೀ. ಅತ್ರೆ ಮತ್ತು ಶ್ರೀ. ನಿಖಿಲ ಕುಲಕರ್ಣಿ ಅವರು ಪೌರೋಹಿತ್ಯ ಮಾಡಿದರು. ನಂತರ ಸತ್ಯನಾರಾಯಣ ಪೂಜೆ ನಡೆಯಿತು. ಶ್ರೀ. ಚಂದ್ರಮೋಹನ ಭಾವಸಾರ ಮತ್ತು ಸೌ. ಪ್ರತಿಭಾ ಚಂ. ಭಾವಸಾವರ್ (ಜಳಗಾಂವ) ಅವರು ಸತ್ಯನಾರಾಯಣ ಪೂಜೆಯ ಯಜಮಾನರಾಗಿದ್ದರು, ಮತ್ತು ಶ್ರೀ. ರವಿ ಪೇಠಕರ ಅವರು ಪೂಜೆಯ ಪೌರೋಹಿತ್ಯ ಮಾಡಿದರು. ಬೆಳಿಗ್ಗೆ ೧೧ ರಿಂದ ೧೨ ರವರೆಗೆ ನಾಶಿಕ್‌ನ ‘ಪ.ಪೂ. ಶಂಕರ ಮಹಾರಾಜ ಭಜನಿ ಮಂಡಳಿ’ಯ ಭಜನೆ ಸೇವೆ ನಡೆಯಿತು. ಕಾರ್ಯಕ್ರಮವು ಮಹಾಪ್ರಸಾದದೊಂದಿಗೆ ಸಮಾಪ್ತಗೊಂಡಿತು.
ರಾಜಸ್ಥಾನದ ಜೈಲಿನಲ್ಲಿ ಜುಲೈ ೨೨ ರಂದು ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಕೈದಿಗಳ ವಿವಾಹವಾಗಲಿದೆ ! : Rajasthan Jail Marriage
‘ಡಾಬರ್’ ಕಂಪನಿಯ ಮೋಸಂಬಿ ಜ್ಯೂಸ್ ಪ್ಯಾಕ್ ನಲ್ಲಿ ಕಪ್ಪು ಪಾಚಿ !
ರೈಲ್ವೆಯ ವಾತಾನುಕೂಲಿತ ಬೋಗಿಗಳಿಂದ ಚಾದರ, ಹೊದಿಕೆ ಮತ್ತು ಟವೆಲ್ ಕಳ್ಳತನದ ಘಟನೆಗಳಲ್ಲಿ ಏರಿಕೆ!
ಇಂಗ್ಲಿಷ್ ಭಾಷೆಯನ್ನು ಭಾರತದ ಸ್ಥಳೀಯ ಭಾಷೆ ಎಂದು ಪರಿಗಣಿಸಬಹುದೇ? – ಸುಪ್ರೀಂ ಕೋರ್ಟ್ ಪ್ರಶ್ನೆ
ನಮ್ಮ ಮತ್ತು ಭಾರತದ ಡಿ.ಎನ್.ಎ. ಒಂದೇ! – Afghanistan Minister
ಹಿಂದೂಗಳ ತೀವ್ರ ವಿರೋಧದ ನಂತರ ಕಲಾವಿದೆಯಿಂದ ಕ್ಷಮೆಯಾಚನೆ!