
ಇಂದೋರ್ (ಮಧ್ಯಪ್ರದೇಶ) – ಪ.ಪೂ. ಶ್ರೀ ಅನಂತಾನಂದ ಸಾಯೀಶ, ಪ.ಪೂ. ಭಕ್ತರಾಜ ಮಹಾರಾಜ ಮತ್ತು ಪ.ಪೂ. ರಾಮಾನಂದ ಮಹಾರಾಜ ಈ ತ್ರಿಮೂರ್ತಿಗಳ ಶ್ರೀ ಗುರುಪೂರ್ಣಿಮಾ ಮಹೋತ್ಸವವನ್ನು ಜುಲೈ ೯ ಮತ್ತು ೧೦ ರಂದು ನಗರದ ವಿಜ್ಞಾನನಗರದಲ್ಲಿರುವ ಭಕ್ತವಾತ್ಸಲ್ಯಾಶ್ರಮದ ಎದುರಿನ ನವನೀತ ಗಾರ್ಡನ್‌ನಲ್ಲಿ ಆಚರಿಸಲಾಯಿತು. ಸುಮಾರು ೧ ಸಾವಿರದ ೨೦೦ ಜನರು ಇದರ ಲಾಭ ಪಡೆದರು. ‘ಶ್ರೀ ಸದ್ಗುರು ಅನಂತಾನಂದ ಸಾಯೀಶ ಶೈಕ್ಷಣಿಕ ಏವಂ ಪಾರಮಾರ್ಥಿಕ ಸೇವಾ ಟ್ರಸ್ಟ್ ಇಂದೋರ್’ ಮಾರ್ಗದರ್ಶನದಲ್ಲಿ ಈ ಮಹೋತ್ಸವವನ್ನು ಆಚರಿಸಲಾಯಿತು. ಈ ಸಂದರ್ಭದಲ್ಲಿ ಟ್ರಸ್ಟ್‌ನ ಅಧ್ಯಕ್ಷ ಶ್ರೀ. ಶರದ ಬಾಪಟ, ಉಪಾಧ್ಯಕ್ಷ ಶ್ರೀ ರಾಜೇಂದ್ರ ಭವರಾಸ್ಕರ, ಇತರ ಟ್ರಸ್ಟಿಗಳು, ಹಾಗೆಯೇ ಡಾ. (ಸೌ.) ಕುಂದಾ ಜಯಂತ ಆಠವಲೆ ಮತ್ತು ಭಕ್ತರ ಉಪಸ್ಥಿತಿಯಲ್ಲಿ ಈ ಕಾರ್ಯಕ್ರಮ ನಡೆಯಿತು.

೧. ಜುಲೈ ೯ ರಂದು ಸಂಜೆ ೫ ಗಂಟೆಗೆ ಕಥಕ್ ಸ್ಟುಡಿಯೋದ ನಿರ್ದೇಶಕಿ ಶ್ರೀಮತಿ ದಮಯಂತಿ ಭಾಟಿಯಾ ನಿರಸ್ವಾರ್ ಮತ್ತು ಸಹಾಯಕರು ರಾಮಾಯಣದ ನಾಟಕ ಪ್ರಸ್ತುತಪಡಿಸಿದರು. ಕು. ದಿಶಾ ಸುಪೇಕರ್ ಶಾಸ್ತ್ರೀಯ ಸಂಗೀತ ಪ್ರಸ್ತುತಪಡಿಸಿದರು. ರಾತ್ರಿ ೧೦ ಗಂಟೆಗೆ, ಪ.ಪೂ. ಭಕ್ತರಾಜ ಮಹಾರಾಜರ ಸ್ವ-ರಚಿತ ಭಜನೆಗಳನ್ನು ಶ್ರೀ. ದೀಪಕ್ ಬೀಡವಾಯಿ, ವಕೀಲ. ಜಯಂತ ಬೋರ್ಕರ್ ಮತ್ತಿತರ ಭಕ್ತರು ಪ್ರಸ್ತುತಪಡಿಸಿದರು.
೨. ಜುಲೈ ೧೦ ರಂದು ಬೆಳಿಗ್ಗೆ ೧೦ ಗಂಟೆಗೆ ಪ.ಪೂ. ಶ್ರೀ ಅನಂತಾನಂದ ಸಾಯೀಶ, ಪ.ಪೂ. ಭಕ್ತರಾಜ ಮಹಾರಾಜ ಮತ್ತು ಪ.ಪೂ. ರಾಮಾನಂದ ಮಹಾರಾಜರ ಪಾದುಕೆಗಳ ಪೂಜೆ ನಡೆಯಿತು. ಇದರ ನಂತರ, ಶ್ರೀ. ನಾನಾ ಪಡವಲ್ ಮತ್ತು ಸಹಾಯಕ ಭಕ್ತರ ಭಜನೆ, ನಂತರ ದರ್ಶನ ಕಾರ್ಯಕ್ರಮ ಮತ್ತು ಭಂಡಾರ ನಡೆಸಲಾಯಿತು.
ಶ್ರೀರಾಮಮಂದಿರವನ್ನು ಬಾಂಬ್ನಿಂದ ಸ್ಫೋಟಿಸಲು ಸಂಚು ರೂಪಿಸಿದ್ದ ಸುಹೇಲ್ ದಾವಣಗೆರೆಯಿಂದ ಬಂಧನ
ದೆಹಲಿಯ ಮುಸಲ್ಮಾನ ಬಹುಸಂಖ್ಯಾತ ಸೀಲಂಪುರದಲ್ಲಿ ಮುಸಲ್ಮಾನರಿಂದ 16 ವರ್ಷದ ಹಿಂದೂ ಹುಡುಗನ ಬರ್ಬರ ಹತ್ಯೆ
ಹಿಂದೂಬಹುಸಂಖ್ಯಾತ ಭಾರತದಲ್ಲಿ ‘ಹಿಂದೂ’ ಆಗಿರುವುದಕ್ಕೆ ಎದುರಾದ ಆಘಾತಗಳು !
ಪಾಸ್ಪೋರ್ಟ್ನಿಂದ ಪೌರತ್ವ ಸಾಬೀತಾಗುವುದಿಲ್ಲ! – ಕೇಂದ್ರ ಸರಕಾರ
ಮಹಿಳಾ ಸದಸ್ಯರ ಸಮಿತಿಯ ಮೂಲಕ ಲೈಂಗಿಕ ಶೋಷಣೆ ವಿರೋಧಿ ಕಾಯ್ದೆಗಳ ಮರುಪರಿಶೀಲನೆ ನಡೆಸಬೇಕು!
ಯುರೋಪಿಯನ್ ದೇಶಗಳಂತೆ ಭಾರತದ ಮಕ್ಕಳಲ್ಲೂ ಸ್ಥೂಲಕಾಯದ ಅಪಾಯ ಹೆಚ್ಚುತ್ತಿದೆ!