Sanatan Sanstha : ದೇಶಾದ್ಯಂತ 77 ಕಡೆಗಳಲ್ಲಿ ‘ಗುರುಪೂರ್ಣಿಮೆ ಮಹೋತ್ಸವ’ ಭಕ್ತಿಪೂರ್ವಕ ವಾತಾವರಣದಲ್ಲಿ ಆಚರಣೆ!

ಮುಂಬಯಿ – ಗುರುಪೂರ್ಣಿಮೆ ಎಂದರೆ ಗುರುಗಳಿಗೆ ಕೃತಜ್ಞತೆ ಸಲ್ಲಿಸುವ ಮತ್ತು ಗುರುಸೇವೆಗೆ ಸಂಕಲ್ಪ ಮಾಡುವ ದಿನ! ಭಾರತದ ಪ್ರಮುಖ ವೈಶಿಷ್ಟ್ಯವೆಂದರೆ ಗುರು-ಶಿಷ್ಯ ಪರಂಪರೆ! ಈ ದೈವಿಕ ಪರಂಪರೆಯು ಕೇವಲ ಗುರು ಮತ್ತು ಶಿಷ್ಯ, ಆಧ್ಯಾತ್ಮ ಮತ್ತು ಮೋಕ್ಷಕ್ಕೆ ಮಾತ್ರ ಸೀಮಿತವಾಗಿಲ್ಲ, ಬದಲಿಗೆ ವಿಶ್ವ ಕಲ್ಯಾಣಕ್ಕಾಗಿ ಹರಿಯುತ್ತದೆ. ಗುರು-ಶಿಷ್ಯ ಪರಂಪರೆಯು ಕೇವಲ ಶಿಷ್ಯನ ಜೀವನದ ಕಲ್ಯಾಣವನ್ನು ಮಾಡಿಲ್ಲ, ಬದಲಾಗಿ ಧರ್ಮ ಸಂಸ್ಥಾಪನೆ ಮತ್ತು ರಾಷ್ಟ್ರ ರಕ್ಷಣೆಯ ಕಾರ್ಯವನ್ನೂ ಮಾಡಿದೆ. ಇದೇ ಉದ್ದೇಶವನ್ನು ಗಮನದಲ್ಲಿಟ್ಟುಕೊಂಡು, ಪ್ರತಿ ವರ್ಷ ಸನಾತನ ಸಂಸ್ಥೆಯ ವತಿಯಿಂದ ಗುರುಪೂರ್ಣಿಮೆ ಮಹೋತ್ಸವಗಳನ್ನು ಆಯೋಜಿಸಲಾಗುತ್ತದೆ. ಗುರುಪೂರ್ಣಿಮೆಯ ದಿನದಂದು ಗುರುತತ್ತ್ವವು 1 ಸಾವಿರ ಪಟ್ಟು ಹೆಚ್ಚು ಕಾರ್ಯನಿರತವಾಗಿರುವುದರಿಂದ, ಈ ದಿನದಂದು ಮಹೋತ್ಸವದ ಮೂಲಕ ಗುರುಗಳಿಗೆ ಕೃತಜ್ಞತೆ ವ್ಯಕ್ತಪಡಿಸಲಾಗುತ್ತದೆ. ಈ ಬಾರಿ ಜುಲೈ 10 ರಂದು ಸನಾತನ ಸಂಸ್ಥೆಯ ವತಿಯಿಂದ ದೇಶಾದ್ಯಂತ 77 ಕಡೆಗಳಲ್ಲಿ ‘ಗುರುಪೂರ್ಣಿಮೆ ಮಹೋತ್ಸವ’ ಭಕ್ತಿಪೂರ್ವಕ ವಾತಾವರಣದಲ್ಲಿ ಆಚರಿಸಲಾಯಿತು. ಇದರಲ್ಲಿ ಮರಾಠಿ ಭಾಷೆಯಲ್ಲಿ 64 ಕಡೆಗಳಲ್ಲಿ, ಹಿಂದಿ ಭಾಷೆಯಲ್ಲಿ 8, ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿ ತಲಾ 2, ಹಾಗೂ ಗುಜರಾತಿ ಭಾಷೆಯಲ್ಲಿ ಒಂದು ಕಡೆ ಗುರುಪೂರ್ಣಿಮೆ ಮಹೋತ್ಸವವನ್ನು ಆಚರಿಸಲಾಯಿತು. ಈ ಸಮಯದಲ್ಲಿ ಸಾಧಕರು ಚೈತನ್ಯದಲ್ಲಿ ಮಿಂದೆದ್ದರು. ಗುರುಗಳ ಕೃಪೆಯನ್ನು ಅನುಭವಿಸಿ ಅವರು ಭಾವುಕರಾದರು.


ಗುರುಪೂರ್ಣಿಮೆಯ ನಿಮಿತ್ತ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಅವರಿಗೆ ಶ್ರೀಸತ್‌ಶಕ್ತಿ (ಸೌ.) ಬಿಂದಾ ನಿಲೇಶ ಸಿಂಗಬಾಳ ಅವರಿಂದ ಔಕ್ಷಣ!

ರಾಮನಾಥಿ (ಗೋವಾ): ಮಹರ್ಷಿಗಳು ನಾಡಿಪಟ್ಟಿಗಳಲ್ಲಿ ಉಲ್ಲೇಖಿಸಿರುವಂತೆ, ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಅವರ ಆಧ್ಯಾತ್ಮಿಕ ಉತ್ತರಾಧಿಕಾರಿಗಳಲ್ಲಿ ಒಬ್ಬರಾದ ಶ್ರೀಸತ್‌ಶಕ್ತಿ (ಸೌ.) ಬಿಂದಾ ನಿಲೇಶ ಸಿಂಗಬಾಳ ಅವರು ಗುರುಪೂರ್ಣಿಮೆಯ ದಿನ, ಅಂದರೆ ಜುಲೈ 10, 2025ರ ರಂದು ಅವರಿಗೆ ಆರತಿಯನ್ನು ಬೆಳಗಿದರು. ಈ ಆರತಿಯ ಸಮಯದಲ್ಲಿ ಸನಾತನ ಪುರೋಹಿತ ಪಾಠಶಾಲೆಯ ಶ್ರೀ. ಅಮರ ಜೋಶಿ ಮತ್ತು ಶ್ರೀ. ಸಿದ್ಧೇಶ ಕರಂದೀಕರ್ ಅವರು ವೇದ ಮಂತ್ರಗಳನ್ನು ಪಠಿಸಿದರು.

ಕೆಲವು ಕಡೆಗಳಲ್ಲಿ ಸನಾತನ ಸಂಸ್ಥೆಯ ಮಾರ್ಗದರ್ಶನದಂತೆ ಸಾಧನೆ ಮಾಡುವ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಹಾಗೂ ರಾಷ್ಟ್ರ ಮತ್ತು ಧರ್ಮಕ್ಕಾಗಿ ಕಾರ್ಯನಿರ್ವಹಿಸುತ್ತಿರುವ ಹಿಂದುತ್ವನಿಷ್ಠರು, ರಾಷ್ಟ್ರಪ್ರೇಮಿಗಳನ್ನು ಸನ್ಮಾನಿಸಲಾಯಿತು. ಸತಾರಾದಲ್ಲಿ ಬ್ರಿಗೇಡಿಯರ್ ಹೇಮಂತ್ ಮಹಾಜನ್ (ನಿವೃತ್ತ), ಹಾಗೂ ಕೊಲ್ಲಾಪುರದಲ್ಲಿ ‘ಅಸತ್ಯಮೇವ ಜಯತೆ’ ಪುಸ್ತಕದ ಲೇಖಕ ಶ್ರೀ ಅಭಜಿತ ಜೋಗ್ ಸೇರಿದಂತೆ ವಿವಿಧ ಗಣ್ಯರು ಸ್ಥಳಗಳಲ್ಲಿ ಮಾರ್ಗದರ್ಶನ ನೀಡಿದರು.

ಮಹೋತ್ಸವದ ಸ್ವರೂಪ

ಕಾರ್ಯಕ್ರಮದ ಆರಂಭದಲ್ಲಿ ಶ್ರೀ ವ್ಯಾಸ ಪೂಜೆ ಮತ್ತು ಪ.ಪೂ. ಭಕ್ತರಾಜ ಮಹಾರಾಜರ ಪ್ರತಿಮೆಗೆ ಪೂಜೆ ಸಲ್ಲಿಸಲಾಯಿತು. ಸನಾತನ ಸಂಸ್ಥೆಯ ಸಂಸ್ಥಾಪಕ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಅವರ ಸಂದೇಶವನ್ನು ಓದಲಾಯಿತು. ‘ಸನಾತನ ರಾಷ್ಟ್ರ ಶಂಖನಾದ’ ಎಂಬ ವಿಷಯದ ಕುರಿತು ಪ್ರೇರಣಾದಾಯಕ ವೀಡಿಯೊವನ್ನು ತೋರಿಸಲಾಯಿತು. ನಂತರ ಆಧ್ಯಾತ್ಮಿಕ ಉನ್ನತಿ ಮಾಡಿಕೊಂಡ ಸನಾತನದ ಸಾಧಕರು ತಮ್ಮ ಅನುಭವಗಳನ್ನು ಹಂಚಿಕೊಂಡರು, ಹಾಗೂ ಸಂಸ್ಥೆಯ ವತಿಯಿಂದ ‘ರಾಷ್ಟ್ರ-ಧರ್ಮದ ರಕ್ಷಣೆಗಾಗಿ ಸಾಧನೆ ಮತ್ತು ಯುದ್ಧಕಾಲದಲ್ಲಿ ರಾಷ್ಟ್ರೀಯ ಕರ್ತವ್ಯಗಳು’ ಎಂಬ ವಿಷಯದ ಬಗ್ಗೆ ಮಾರ್ಗದರ್ಶನ ನೀಡಲಾಯಿತು. ಪ್ರಸ್ತುತ ಸಮಯದಲ್ಲಿ ಪ್ರತಿಯೊಬ್ಬರೂ ಕನಿಷ್ಠ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಸಾಧ್ಯವಾಗುವಂತೆ, ಈ ಮಹೋತ್ಸವದಲ್ಲಿ ಸ್ವಯಂ ರಕ್ಷಣಾ ಪ್ರಾತ್ಯಕ್ಷಿಕೆಗಳನ್ನು ಪ್ರದರ್ಶಿಸಲಾಯಿತು.

ವಿಶೇಷ

1. ಈ ವರ್ಷದ ಮಹೋತ್ಸವದ ವಿಶೇಷವೆಂದರೆ ರಾಮರಾಜ್ಯ ಸ್ಥಾಪನೆಗಾಗಿ ಸಂಕಲ್ಪ ಮತ್ತು ಸಾಮೂಹಿಕ ನಾಮಜಪಯಜ್ಞವನ್ನು ಮಾಡಲಾಯಿತು.

2. ಮಹೋತ್ಸವದಲ್ಲಿ ಅನೇಕ ಕಡೆಗಳಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಕಾಲದ ಶಸ್ತ್ರಾಸ್ತ್ರಗಳ ಅಪೂರ್ವ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು. ಈ ಪ್ರದರ್ಶನವನ್ನು ನೋಡಿ ಅನೇಕರು ‘ಇತಿಹಾಸದ ಪುನರಾವಲೋಕನವಾಯಿತು’ ಎಂದು ಹೇಳಿದರು.

ವಿವಿಧ ವಿಷಯಗಳ ಕುರಿತು ಗ್ರಂಥಪ್ರದರ್ಶನ ಮತ್ತು ಫಲಕ ಪ್ರದರ್ಶನ

ಧರ್ಮ, ಆಧ್ಯಾತ್ಮ, ಸಾಧನೆ, ಬಾಲಸಂಸ್ಕಾರ, ಆಚಾರಧರ್ಮ, ಆಯುರ್ವೇದ, ಪ್ರಥಮ ಚಿಕಿತ್ಸೆ, ಸ್ವಸಂರಕ್ಷಣೆ, ಹಿಂದೂ ರಾಷ್ಟ್ರ ಮುಂತಾದ ವಿಷಯಗಳ ಕುರಿತು ಗ್ರಂಥಗಳು ಮತ್ತು ಫಲಕಗಳ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು.

ಆನ್‌ಲೈನ್ ಗುರುಪೂರ್ಣಿಮೆ ಮಹೋತ್ಸವ

ದೇಶ-ವಿದೇಶಗಳ ಸಾವಿರಾರು ಭಕ್ತರಿಗಾಗಿ ಮರಾಠಿ, ಹಿಂದಿ, ಗುಜರಾತಿ, ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿ ಆನ್‌ಲೈನ್ ಗುರುಪೂರ್ಣಿಮೆ ಮಹೋತ್ಸವಗಳನ್ನು ಆಯೋಜಿಸಲಾಯಿತು.

ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ 65 ಕಡೆಗಳಲ್ಲಿ ಗುರುಪೂರ್ಣಿಮೆ ಮಹೋತ್ಸವ ಸಂಭ್ರಮದಿಂದ ಆಚರಣೆ!

ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ದೇಶಾದ್ಯಂತ ಮರಾಠಿ, ಹಿಂದಿ, ಕನ್ನಡ ಮತ್ತು ತೆಲುಗು ಭಾಷೆಗಳಲ್ಲಿ 65 ಕಡೆಗಳಲ್ಲಿ ‘ಗುರುಪೂರ್ಣಿಮೆ ಮಹೋತ್ಸವ’ ಅದ್ದೂರಿಯಾಗಿ ನಡೆಯಿತು. ಈ ಸಮಯದಲ್ಲಿ ಹಿಂದೂ ಜನಜಾಗೃತಿ ಸಮಿತಿಯ ಸಾಧಕರು ಮತ್ತು ಜಿಜ್ಞಾಸುಗಳು ಸಂಬಂಧಿತ ಸ್ಥಳಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.

ಪ್ರತಿಯೊಬ್ಬರೂ ರಾಷ್ಟ್ರ ಮತ್ತು ಧರ್ಮದ ಕಾರ್ಯಕ್ಕಾಗಿ ತಮ್ಮನ್ನು ತಾವು ಸಮರ್ಪಿಸಿಕೊಳ್ಳಬೇಕು! – ಸನಾತನ ಸಂಸ್ಥೆ

ವಿವಿಧ ಸ್ಥಳಗಳಲ್ಲಿ ನಡೆದ ಮಹೋತ್ಸವಗಳಲ್ಲಿ ಸನಾತನ ಸಂಸ್ಥೆಯ ವಕ್ತಾರರು, “ಭಾರತದ ಮೇಲೆ ಆಂತರಿಕ ಮತ್ತು ಬಾಹ್ಯ ಶತ್ರುಗಳಿಂದ ನಡೆಯುತ್ತಿರುವ ಆಕ್ರಮಣಗಳು ಕೇವಲ ವಿಸ್ತರಣೆಗಾಗಿ ಅಲ್ಲ, ಬದಲಿಗೆ ಹಿಂದೂ ಧರ್ಮವನ್ನು ನಾಶಮಾಡಲು ನಡೆಯುತ್ತಿವೆ. ಪಹಲ್ಗಾಮ್‌ನಲ್ಲಿ ಭಯೋತ್ಪಾದಕರು ‘ದೇಶ’ ಎಂದು ಕೇಳಿ ಗುಂಡು ಹಾರಿಸಲಿಲ್ಲ, ಬದಲಿಗೆ ‘ಧರ್ಮ’ ಎಂದು ಕೇಳಿ ಹಾರಿಸಿದರು. ಇಲ್ಲಿಯವರೆಗಿನ ಗಲಭೆಗಳ ಇತಿಹಾಸವೂ ಇದನ್ನೇ ಹೇಳುತ್ತದೆ, ಎಲ್ಲಿ ಮತಾಂಧರು ಅಟ್ಟಹಾಸ ಮೆರೆದರೋ, ಅಲ್ಲಿ ಅವರು ಹಿಂದೂಗಳನ್ನು, ಹಿಂದೂಗಳ ಶ್ರದ್ಧಾ ಕೇಂದ್ರಗಳನ್ನು ಗುರಿಯಾಗಿಸಿದರು. ಇಂದು ನಾವು ಯುದ್ಧ ಸದೃಶ ಸ್ಥಿತಿಯಲ್ಲಿದ್ದೇವೆ. ಇದು ಕೇವಲ ಗಡಿಗಳಲ್ಲಿನ ಯುದ್ಧದಂತೆ ಕಂಡರೂ, ನಿಜವಾದ ಯುದ್ಧವು ಧರ್ಮಯುದ್ಧವೇ ಆಗಿದೆ. ಪ್ರಾಚೀನ ಕಾಲದಿಂದಲೂ ಪ್ರತಿ ಬಾರಿಯೂ ಧರ್ಮದ ಪರವಾಗಿ ನಿಂತವರಿಗಿಂತ ಅಧರ್ಮಿಗಳು ಮತ್ತು ಅನ್ಯಾಯ ಮಾಡುವವರ ಸಂಖ್ಯೆ ಮತ್ತು ಶಸ್ತ್ರಾಸ್ತ್ರ ಬಲ ಹೆಚ್ಚಾಗಿತ್ತು; ಆದರೆ ಅಂತಿಮ ವಿಜಯವು ಧರ್ಮದವರದ್ದೇ ಆಗಿದೆ; ಏಕೆಂದರೆ ಭಗವಂತ ಮತ್ತು ಗುರುತತ್ತ್ವದ ಆಶೀರ್ವಾದ ಧರ್ಮದ ರಕ್ಷಣೆಗಾಗಿ ಕಾರ್ಯನಿರ್ವಹಿಸುವವರ ಮೇಲೆ ಇರುತ್ತದೆ. ಇಂದಿಗೂ ಗುರುತತ್ತ್ವ ಸನಾತನ ಧರ್ಮದ ರಕ್ಷಣೆಗಾಗಿ ಮತ್ತು ಭಾರತದ ಉನ್ನತಿಗಾಗಿ ಕಾರ್ಯನಿರ್ವಹಿಸುತ್ತಿದೆ. ಆದ್ದರಿಂದ, ಪ್ರತಿಯೊಬ್ಬರೂ ರಾಷ್ಟ್ರ ಮತ್ತು ಧರ್ಮದ ಕಾರ್ಯಕ್ಕಾಗಿ ತಮ್ಮನ್ನು ತಾವು ಸಮರ್ಪಿಸಿಕೊಳ್ಳುವುದು ಅವಶ್ಯಕವಾಗಿದೆ.”