ನೈಸರ್ಗಿಕ ಕೃಷಿಯನ್ನೂ ಮಾಡುವುದಾಗಿ ಮಾಹಿತಿ ನೀಡಿದರು

ಕರ್ಣಾವತಿ – ಕೇಂದ್ರ ಗೃಹ ಸಚಿವರು ಮತ್ತು ಸಹಕಾರ ಸಚಿವರಾದ ಅಮಿತ ಶಾ ಅವರು ‘ನಿವೃತ್ತಿಯ ನಂತರ ಏನು ಮಾಡಲಿದ್ದಾರೆ?’ ಎಂಬ ತಮ್ಮ ಯೋಜನೆಯನ್ನು ತಿಳಿಸಿದ್ದಾರೆ. ಅವರು, “ನಿವೃತ್ತಿಯ ನಂತರ ನಾನು ನನ್ನ ಜೀವನವನ್ನು ವೇದ ಮತ್ತು ಉಪನಿಷತ್ತುಗಳ ಅಧ್ಯಯನದಲ್ಲಿ ಹಾಗೂ ನೈಸರ್ಗಿಕ ಕೃಷಿಯಲ್ಲಿ ಕಳೆಯಲಿದ್ದೇನೆ” ಎಂದು ಅವರು ಹೇಳಿದರು. ಗುಜರಾತ ರಾಜಧಾನಿ ಕರ್ಣಾವತಿಯಲ್ಲಿ ಗುಜರಾತ, ಮಧ್ಯಪ್ರದೇಶ ಮತ್ತು ರಾಜಸ್ಥಾನ ರಾಜ್ಯಗಳ ಸಹಕಾರ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಮಹಿಳೆಯರಿಗಾಗಿ ‘ಸಹಕಾರ ಸಂವಾದ’ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಅದರಲ್ಲಿ ಅವರು ಮಾತನಾಡುತ್ತಿದ್ದರು.
ಶಾ ಅವರು ಮಾತು ಮುಂದುವರೆಸಿ,
1. ನೈಸರ್ಗಿಕ ಕೃಷಿ ಒಂದು ವೈಜ್ಞಾನಿಕ ಪ್ರಯೋಗವಾಗಿದ್ದು, ಅದರಿಂದ ಅನೇಕ ಲಾಭಗಳಿವೆ. ರಾಸಾಯನಿಕ ಗೊಬ್ಬರ ಬಳಸಿ ಬೆಳೆದ ಗೋಧಿಯನ್ನು ತಿನ್ನುವುದರಿಂದ ಕ್ಯಾನ್ಸರ್, ಅಧಿಕ ರಕ್ತದೊತ್ತಡ, ಮಧುಮೇಹದಂತಹ ಅನೇಕ ಕಾಯಿಲೆಗಳು ಬರುತ್ತವೆ.
आज सहकारिता ने गाँव-गाँव में PACS व अन्य संस्थाओं से जुड़ीं महिलाओं के दरवाजे पर कंप्यूटर ला दिए। पहले अन्न भंडारण बनाने का सपना सिर्फ अमीर लोग देख सकते थे। आज सहकारिता से जुड़े लोग उनके गाँवों में ग्रेन स्टोरेज बना रहे हैं। महिलाओं, किसानों व हर वर्ग को आत्मनिर्भर बनाने और कम… pic.twitter.com/hFp1yaPJSI
— Amit Shah (@AmitShah) July 9, 2025
2. ನೈಸರ್ಗಿಕ ಕೃಷಿಯಿಂದ ಉತ್ಪಾದನೆಯೂ ಹೆಚ್ಚುತ್ತದೆ. ನನ್ನ ಹೊಲದಲ್ಲಿ ನೈಸರ್ಗಿಕ ಕೃಷಿ ಮಾಡಲಾಗುತ್ತಿದೆ. ಇದರಲ್ಲಿ ಸುಮಾರು ಒಂದೂವರೆ ಪಟ್ಟು ಹೆಚ್ಚಳವಾಗಿದೆ.
गुजरात, मध्य प्रदेश और राजस्थान की सहकारिता क्षेत्र से जुड़ीं माताओं-बहनों व अन्य सहकारी कार्यकर्ताओं के साथ ‘सहकार-संवाद’…#SahkarSamvaad https://t.co/ZAb9RrcTYQ
— Amit Shah (@AmitShah) July 9, 2025
3. ನೈಸರ್ಗಿಕ ಕೃಷಿಗಾಗಿ ಒಂದು ಹಸು ಸಾಕಾಗುತ್ತದೆ. ಅದರ ಸಗಣಿಯಿಂದ ಮಾಡಿದ ಗೊಬ್ಬರದಿಂದ ನೀವು 21 ಎಕರೆ ಭೂಮಿಯಲ್ಲಿ ಕೃಷಿ ಮಾಡಬಹುದು. ನೈಸರ್ಗಿಕ ಕೃಷಿ ಮಾಡುವವರ ಹೊಲದಲ್ಲಿ ಎರೆಹುಳುಗಳು ಇರುತ್ತವೆ. ಇದರಿಂದ ಭೂಮಿಯ ಫಲವತ್ತತೆಯೂ ಉಳಿಯುತ್ತದೆ.
4. ಭಾರತ ಸರಕಾರದ ಸಹಕಾರ ಸಚಿವಾಲಯವು ನೈಸರ್ಗಿಕ ಕೃಷಿಯಿಂದ ಬೆಳೆದ ಧಾನ್ಯಗಳನ್ನು ಖರೀದಿಸಲು ಒಂದು ಸಹಕಾರಿ ಸಂಸ್ಥೆಯನ್ನು ಸ್ಥಾಪಿಸಿದೆ. ಉತ್ಪನ್ನಗಳ ರಫ್ತಿಗಾಗಿಯೂ ಒಂದು ಸಹಕಾರಿ ಸಂಸ್ಥೆಯನ್ನು ಸ್ಥಾಪಿಸಿದೆ. ಅದನ್ನು ಕಾರ್ಯಾಚರಣೆಗೆ ತರುವ ಪ್ರಕ್ರಿಯೆಯು 8-10 ವರ್ಷಗಳಲ್ಲಿ ಪ್ರಾರಂಭವಾಗಲಿದೆ.
ಶ್ರೀರಾಮ ಮಂದಿರದ ದೇಣಿಗೆ ಕಳ್ಳತನ ಪ್ರಕರಣದಲ್ಲಿ ದೊಡ್ಡ ವ್ಯಕ್ತಿಗಳನ್ನು ಹೊರಗಿಡಲಾಗಿದೆ !
‘ಮ್ಯೂಸಿಕ್ ಕಾನ್ಸರ್ಟ್’ಗಳಲ್ಲಿ ಇನ್ನು ಮುಂದೆ ಮದ್ಯಪಾನಕ್ಕೆ ಅನುಮತಿಯಿಲ್ಲ ! – ಯೋಗೇಶ ಕದಮ್, ಗೃಹ ರಾಜ್ಯಸಚಿವರು
ವೈದಿಕ ಕಾಲದಲ್ಲಿ ಮಹಿಳೆಯರಿಗೆ ಗೌರವ ಸಿಗುತ್ತಿತ್ತು ಎಂದು ಹೇಳುತ್ತಾ ಮನುಸ್ಮೃತಿಯ ಶ್ಲೋಕದ ಉಲ್ಲೇಖ!
‘ ಮಹಾತ್ಮ ಫುಲೆ ವಾಡಾ’ ಆವರಣದಲ್ಲಿ ವಟಪೂಜೆ ನಿಷೇಧ ವಾಪಸ್!
ದೇಶದ 3 ರಾಜ್ಯಗಳಲ್ಲಿ ಲವ್ ಜಿಹಾದ್ನ 4 ಘಟನೆಗಳು ಬೆಳಕಿಗೆ!
ಮಧ್ಯಪ್ರದೇಶದ ಬಡನಗರದಲ್ಲಿ ಕ್ರೇನ್ ಮೂಲಕ ಕಾರನ್ನು ಎತ್ತಿ ಉದ್ದೇಶಪೂರ್ವಕವಾಗಿ ಸ್ಫೋಟಿಸಲಾಯಿತು ! : Ujjain Muharram