
ಛತ್ರಪತಿ ಶಿವಾಜಿ ಮಹಾರಾಜರ ಅಶ್ವಾರೂಢ ಪ್ರತಿಮೆ ಮತ್ತು ಛತ್ರಪತಿ ಸಂಭಾಜಿ ಮಹಾರಾಜರ ಪ್ರತಿಮೆಗಳ ಸ್ಥಾಪನೆ
ಉತ್ಸವ ಸ್ಥಳದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಅಶ್ವಾರೂಢ ಪ್ರತಿಮೆ ಮತ್ತು ಛತ್ರಪತಿ ಸಂಭಾಜಿ ಮಹಾರಾಜರ ಪ್ರತಿಮೆಗಳನ್ನು ಇರಿಸಲಾಗಿತ್ತು. ಇವು ಕೇವಲ ಪ್ರತಿಮೆಗಳಾಗಿರದೆ, ಧರ್ಮರಕ್ಷಣೆ ಮತ್ತು ಧರ್ಮಸಂಸ್ಥಾಪನೆ ಎಂಬೆರಡೂ ಕಾರ್ಯಗಳಿಗಾಗಿ ನೂರಕ್ಕೆ ನೂರು ಶೇಕಡಾ ತ್ಯಾಗ ಮತ್ತು ಬಲಿದಾನ ನೀಡಿದ ಧರ್ಮಮೂರ್ತಿಗಳ ಸಾಕ್ಷಾತ್ ಸ್ವರೂಪಗಳಾಗಿದ್ದವು.
ಜನ್ಮೋತ್ಸವದ ಆವರಣದಲ್ಲಿ ಗೋವರ್ಧನಧಾರಿ ಶ್ರೀಕೃಷ್ಣನ ದೃಶ್ಯ

ಆದ್ದರಿಂದ ಸಂಪೂರ್ಣ ಜನ್ಮೋತ್ಸವದ ಕಾರ್ಯಕ್ರಮದಲ್ಲಿ ಬಂದ ಅಡಚಣೆಗಳನ್ನು ಗೋಪಾಲಕ ಭಗವಾನ ಶ್ರೀಕೃಷ್ಣನು ನಿವಾರಿಸಿದ್ದರಿಂದ, ಜನ್ಮೋತ್ಸವವು ನಿರ್ವಿಘ್ನವಾಗಿ ನಡೆಯಿತು.
ಕರು ಸಹಿತ ಹಸುವಿನ ಪ್ರತಿಕೃತಿ

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಜನ್ಮೋತ್ಸವದ ಸ್ಥಳದಲ್ಲಿರುವ ಗೋವಿನ ವಿಗ್ರಹವು ‘ಭೂದೇವಿ‘ಯ ಮತ್ತು ‘ಕರು’ವು ಧರ್ಮಪರಾಯಣ ಪ್ರಜೆಗಳು ಅಥವಾ ಪೃಥ್ವಿಯ ಸಾತ್ತ್ವಿಕ ಜೀವಗಳ ಪ್ರತೀಕವಾಗಿದೆ.
ಶತಚಂಡಿ ಯಾಗಕ್ಕಾಗಿ ಯಜ್ಞಕುಂಡದ ಆಕಾರವು ಕಮಲದಂತಿರುವುದು

ಮೇ ೨೦ ಮತ್ತು ೨೧ ರಂದು ಅತಿವೃಷ್ಟಿಯಾಗಿ ಎಲ್ಲೆಡೆ ಎರಡು ಅಡಿಯಷ್ಟು ನೀರು ತುಂಬಿತ್ತು. ಕಮಲವು ನೀರಿನಲ್ಲಿ ಅರಳುವುದರಿಂದ ಅದಕ್ಕೆ ನೀರಿನ
ಭಯವಿರುವುದಿಲ್ಲ. ಆದ್ದರಿಂದ ಕಮಲದ ಆಕಾರದ ಯಜ್ಞಕುಂಡ ಸುರಕ್ಷಿತವಾಗಿತ್ತು
ಧನುಷ್ಯಬಾಣ ಸಹಿತ ಪ್ರಭು ಶ್ರೀರಾಮನ ಪ್ರತಿಮೆ

ಭಗವಾನ್ ಶ್ರೀಕೃಷ್ಣನು ಶಂಖನಾದದೊಂದಿಗೆ ‘ಈ ಭೂಮಿಯು ಸನಾತನ ಹಿಂದೂ ರಾಷ್ಟ್ರದ ಪ್ರತೀಕವಾಗಿದೆ’ ಎಂದು ಘೋಷಿಸಿದನು. ಇದರಿಂದ ಭವಿಷ್ಯದಲ್ಲಿ ಭೂಮಿಯಲ್ಲಿ ಸ್ಥಾಪನೆಯಾಗುವ ಹಿಂದೂ ರಾಷ್ಟ್ರ ಅಥವಾ ಸನಾತನ ರಾಷ್ಟ್ರವು ರಾಮರಾಜ್ಯದ ಪ್ರತೀಕವಾಗಿದೆ. ಈ ರಾಮರಾಜ್ಯದ ಸ್ಥಾಪನೆಯ ಪೂರ್ವದ ಧರ್ಮ-ಅಧರ್ಮದ ಯುದ್ಧದಲ್ಲಿ ಧರ್ಮದ ಹೊಣೆಗಾರಿಕೆಯನ್ನು ಭಗವಾನ್ ಶ್ರೀಕೃಷ್ಣನು ನಿಭಾಯಿಸಿದ್ದಾನೆ ಮತ್ತು ಮುಂದೆ ಸ್ಥಾಪನೆಯಾಗುವ ರಾಮರಾಜ್ಯದ ಹೊಣೆಗಾರಿಕೆಯನ್ನು ಪ್ರಭು ಶ್ರೀರಾಮನು ನಿಭಾಯಿಸುವನು.
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ತಮ್ಮ ಜನ್ಮೋತ್ಸವದ ಸಮಯದಲ್ಲಿ ಬಿಳಿ ವಸ್ತ್ರಗಳು ಮತ್ತು ಕೇಸರಿ ಪೇಟ ಹಾಗೂ ಕೇಸರಿ ಶಲ್ಯ ಧರಿಸಿ ಹಣೆಯಲ್ಲಿ ತಿಲಕವನ್ನು ಹಚ್ಚಿಕೊಳ್ಳುವುದರ ಮಹತ್ವ !

೧. ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ತಮ್ಮ ಜನ್ಮೋತ್ಸವದ ಸಮಯದಲ್ಲಿ ಬಿಳಿ ಶುಭ್ರ ವಸ್ತ್ರ ಧರಿಸುವುದರ ಹಿಂದಿನ ಕಾರ್ಯಕಾರಣಭಾವ : ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ತಮ್ಮ ಜನ್ಮೋತ್ಸವದ ಸಮಯದಲ್ಲಿ ಈಶ್ವರನ ನಿರಾಕಾರ ಮತ್ತು ನಿರ್ಗುಣ ರೂಪದ ಪ್ರತೀಕವಾದ ಬಿಳಿ ಶುಭ್ರ ವಸ್ತ್ರಗಳನ್ನು ಧರಿಸಿದ್ದರು. ಇದರಿಂದ ಅವರ ಸುಷುಮ್ನಾ ನಾಡಿಯಿಂದ ಪ್ರಕ್ಷೇಪಿತವಾಗುವ ನಿರ್ಗುಣ-ಸಗುಣ ಸ್ತರದ ಚೈತನ್ಯವು ಅವರ ಪೋಷಾಕಿನಿಂದ ಇಡೀ ವಾತಾವರಣದಲ್ಲಿ ನಿರಂತರವಾಗಿ ಪ್ರಕ್ಷೇಪಿತವಾಗಿ ಉಪಸ್ಥಿತರಿದ್ದ ಭಾವಿಕರು, ಹಿಂದುತ್ವನಿಷ್ಠರು ಮತ್ತು ಸಾಧಕರಿಗೆ ಹೆಚ್ಚು ಹೆಚ್ಚು ಚೈತನ್ಯ ದೊರೆಯಿತು.
೨. ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಕೇಸರಿ ಪೇಟಾ ಮತ್ತು ಕೇಸರಿ ಶಲ್ಯವನ್ನು ಧರಿಸುವುದರ ಹಿಂದಿನ ಕಾರ್ಯಕಾರಣಭಾವ : ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಮೋಕ್ಷಗುರುಗಳು ಹಾಗೆಯೇ ಧರ್ಮಗುರುಗಳೂ ಆಗಿರುವುದರಿಂದ ಅವರು ಧರ್ಮದ ಪ್ರತೀಕವಾದ ಕೇಸರಿ ಪೇಟಾ ಮತ್ತು ಕೇಸರಿ ಶಲ್ಯವನ್ನು ಧರಿಸಿದ್ದರು. ಇದರಿಂದ ಅವರಿಂದ ಧರ್ಮತತ್ತ್ವವು ಪ್ರಕ್ಷೇಪಿತ ವಾಗುತ್ತಿತ್ತು. ಹಾಗೆಯೇ ಅವರು ಹಣೆಯಲ್ಲಿ ಅಂದರೆ ಆಜ್ಞಾಚಕ್ರದಲ್ಲಿ ಕುಂಕುಮದ ಉದ್ದ ತಿಲಕವನ್ನು ಹಚ್ಚಿಕೊಂಡಿದ್ದರು. ಅದರಿಂದ ವಾತಾವರಣದಲ್ಲಿ ಹೆಚ್ಚು ಹೆಚ್ಚು
ಧರ್ಮತೇಜಸ್ಸು ಪ್ರಕ್ಷೇಪಿತವಾಗಿ ಜನ್ಮೋತ್ಸವಕ್ಕೆ ಉಪಸ್ಥಿತರಿದ್ದವರಿಗೆ ಧರ್ಮಶಕ್ತಿ ದೊರೆತು ಹಿಂದೂ ಧರ್ಮದ ಬಗೆಗಿನ ಧರ್ಮಾಭಿಮಾನವು ಜಾಗೃತವಾಯಿತು.
೩. ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಸಂಪೂರ್ಣ ಕಾರ್ಯಕ್ರಮದಲ್ಲಿ ಉಪಸ್ಥಿತರಿರುವುದು : ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಜನ್ಮೋತ್ಸವದ ಸಮಯದಲ್ಲಿ ಮೂರೂ ದಿನ ಸಂಪೂರ್ಣ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಇದರಿಂದ ಅವರ ಅವತಾರಿ ತೇಜಸ್ಸು ಹಿಂದಿನದಕ್ಕೆ ಹೋಲಿಸಿದರೆ ಅನಂತ ಪಟ್ಟು ಪ್ರಕಟವಾಗಿ ಕಾರ್ಯನಿರತವಾಗಿರುವುದು ಅನುಭವಕ್ಕೆ ಬಂದಿತು.
– ಸುಶ್ರೀ ಮಧುರಾ ಭೋಸಲೆ (ಆಧ್ಯಾತ್ಮಿಕ ಮಟ್ಟ ಶೇ. ೬೫), ಸನಾತನ ಆಶ್ರಮ, ರಾಮನಾಥಿ, ಗೋವಾ
ಸೋಮನಾಥ ಜ್ಯೋತಿರ್ಲಿಂಗದ ದಿವ್ಯ ಅಂಶಗಳು ಸನಾತನ ಸಂಸ್ಥೆಗೆ ಪ್ರಾಪ್ತವಾಗುವ ವರೆಗಿನ ದಿವ್ಯ ಪ್ರಯಾಣ !
ಯಜ್ಞಸಂಸ್ಕೃತಿಯನ್ನು ಪುನರುಜ್ಜೀವನಗೊಳಿಸುವ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ !
ಯಜ್ಞಸಂಸ್ಕೃತಿಯ ಸಂವರ್ಧನೆ ಬಗ್ಗೆ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ದೃಷ್ಟಿಕೋನ !
ಹಿಂದೂ ರಾಷ್ಟ್ರದ ಸ್ಥಾಪನೆಗಾಗಿಯೇ ಯಜ್ಞಸಮಾರಂಭ ಮತ್ತು ಸಮಷ್ಟಿ ಧರ್ಮಪ್ರಸಾರ !
೧೨ ಜ್ಯೋತಿರ್ಲಿಂಗಗಳಲ್ಲಿ ಪ್ರಥಮವಾಗಿರುವ ಮೂಲ ಸೋಮನಾಥ ಜ್ಯೋತಿರ್ಲಿಂಗದ ದಿವ್ಯ ಅಂಶಗಳು ಸನಾತನ ಸಂಸ್ಥೆಗೆ ಸಮರ್ಪಣೆ !
ಯಜ್ಞಗಳನ್ನು ಆಯೋಜಿಸುವಲ್ಲಿ ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರ ವ್ಯಾಪಕ ಉದ್ದೇಶ !