ಪಂಢರಪುರದಲ್ಲಿ ನಡೆದ ವಾರಕರಿ ಮಹಾ ಅಧಿವೇಶನಕ್ಕೆ 2 ಸಾವಿರ ವಾರಕರಿಗಳು ಮತ್ತು ಭಕ್ತರ ಉಪಸ್ಥಿತಿ!

ಪಂಢರಪುರ, ಜುಲೈ 7 (ಸುದ್ದಿ) – ಆಷಾಢ ವಾರಿ ನಡೆಯುತ್ತಿದ್ದಾಗ, ಪುಣೆಯಲ್ಲಿ ವಾರಕರಿಗಳ ಮೇಲೆ ಮಾಂಸವನ್ನು ಎಸೆಯುವ ಘಟನೆ ನಡೆಯಿತು. ವಾರಿಯಲ್ಲಿ ವಿವಿಧ ಸಂಘಟನೆಗಳಿಂದ ನುಸುಳುವಿಕೆ ನಡೆಯುತ್ತಿದೆ. ಒಂದು ಕಾರ್ಯಕ್ರಮದಲ್ಲಿ ಸತ್ಯವನ್ನು ಮಾತನಾಡಿದ ನಂತರ ನಮಗೆ ಬೆದರಿಕೆ ಹಾಕಲಾಯಿತು, ನಮ್ಮ ಪ್ರತಿಕೃತಿಗಳನ್ನು ಸುಡಲಾಯಿತು. ಯಾರೋ ನಿರಂತರವಾಗಿ ದೇವರು, ದೇಶ ಮತ್ತು ಧರ್ಮದ ಮೇಲೆ ದಾಳಿ ಮಾಡುತ್ತಿದ್ದಾರೆ. ಇದರ ಹಿಂದೆ ಯಾರು ಇದ್ದಾರೆ ಎಂಬುದನ್ನು ಪತ್ತೆ ಹಚ್ಚಿ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು. ನಮ್ಮ ಕಣ್ಣೆದುರಿಗೆ ಅನ್ಯಾಯ ಮತ್ತು ದೌರ್ಜನ್ಯಗಳು ನಡೆಯುತ್ತಿದ್ದಾಗ ನಾವು ಸುಮ್ಮನಿರುವುದು ಸರಿಯಲ್ಲ. ‘ಒಂದು ಕೆನ್ನೆಯನ್ನು ನೀಡಿದಾಗ ಇನ್ನೊಂದು ಕೆನ್ನೆಯನ್ನು ನೀಡಿ’ ಎಂಬ ನೀತಿ ನಮ್ಮ ಸಂಸ್ಕೃತಿಯಲ್ಲಿ ಎಂದಿಗೂ ಇರಲಿಲ್ಲ. ಅದನ್ನು ನಮ್ಮ ಮೇಲೆ ಹೇರಲಾಯಿತು. ಸತ್ಯ, ಧರ್ಮ ಮತ್ತು ನ್ಯಾಯಕ್ಕಾಗಿ ಪ್ರಾಣ ಹೋದರೂ ಪರವಾಗಿಲ್ಲ; ಆದರೆ ನಾವು ಯಾವಾಗಲೂ ಧರ್ಮದ ಪರವಾಗಿ ನಿಲ್ಲಬೇಕು ಎಂದು ಮಹಂತ ಗುರುವರ್ಯ ಪ.ಪೂ. ರಾಮಗಿರಿ ಮಹಾರಾಜರು ಕರೆ ನೀಡಿದರು.

ವಾರಕರಿಗಳ ವಿವಿಧ ಪ್ರಶ್ನೆಗಳಿಗಾಗಿ ಸದ್ಗುರು ಶ್ರೀ ಗಂಗಾಗಿರಿ ಮಹಾರಾಜ ಮಠವು ಜುಲೈ 6 ರಂದು ವಾರಕರಿ ಮಹಾ ಅಧಿವೇಶನವನ್ನು ಆಯೋಜಿಸಿತ್ತು. ಅದರ ಅಧ್ಯಕ್ಷತೆಯನ್ನು ವಹಿಸಿ ಮಹಾರಾಜರು ಮಾತನಾಡುತ್ತಿದ್ದರು. ಈ ಅಧಿವೇಶನಕ್ಕೆ 2 ಸಾವಿರ ವಾರಕರಿಗಳು ಮತ್ತು ಹಿಂದೂ ಭಕ್ತರು ಉಪಸ್ಥಿತರಿದ್ದರು. ಅಧಿವೇಶನದಲ್ಲಿ ವಿವಿಧ ಸಂತರು, ಮಹಂತರು, ಗಣ್ಯರು ನೀಡಿದ ತೇಜಸ್ವಿ ಮಾರ್ಗದರ್ಶನದ ನಂತರ, ಸಂವಿಧಾನ ದಿಂಡಿಯ ಹೆಸರಿನಲ್ಲಿ ಅಂಧಶ್ರದ್ಧಾ ನಿರ್ಮೂಲನ ಸಮಿತಿ, ಪ್ರಗತಿ(ಅಧೋ)ಪರರು ಮತ್ತು ಸಾಮ್ಯವಾದಿಗಳ ನುಸುಳುವುದು ವಾರಕರಿಗಳಿಗೆ ಸ್ವೀಕಾರಾರ್ಹವಿಲ್ಲ ಮತ್ತು ಇನ್ನು ಮುಂದೆ ಅವರು ಹಿಂದೂ ಧರ್ಮದ ಮೇಲೆ ಟೀಕೆ ಮಾಡಿದರೆ ‘ತಕ್ಕ ಪ್ರತ್ಯುತ್ತರ ನೀಡಲಾಗುವುದು’ ಎಂದು ಈ ಅಧಿವೇಶನದಲ್ಲಿ ಎಚ್ಚರಿಕೆಯನ್ನೂ ನೀಡಲಾಯಿತು. ಈ ಮಹಾ ಅಧಿವೇಶನದ ಸೂತ್ರಸಂಚಾಲನೆಯನ್ನು ಹ.ಭ.ಪ. ದತ್ತಾತ್ರೇಯ ಚೋರಗೆ ಮಹಾರಾಜರು ನಿರ್ವಹಿಸಿದರು.
ಮಹಿಳಾ ಸದಸ್ಯರ ಸಮಿತಿಯ ಮೂಲಕ ಲೈಂಗಿಕ ಶೋಷಣೆ ವಿರೋಧಿ ಕಾಯ್ದೆಗಳ ಮರುಪರಿಶೀಲನೆ ನಡೆಸಬೇಕು!
ಯುರೋಪಿಯನ್ ದೇಶಗಳಂತೆ ಭಾರತದ ಮಕ್ಕಳಲ್ಲೂ ಸ್ಥೂಲಕಾಯದ ಅಪಾಯ ಹೆಚ್ಚುತ್ತಿದೆ!
ದೇವಸ್ಥಾನದ ಹಣವನ್ನು ಧಾರ್ಮಿಕ ಕಾರ್ಯಗಳಿಗಾಗಿಯೇ ಖರ್ಚು ಮಾಡುವ ತಮಿಳುನಾಡು ಸರಕಾರದ ನೀತಿಯನ್ನು ಟೀಕಿಸಿದ ಹಿಂದೂದ್ವೇಷಿ ಉದಯನಿಧಿ ಸ್ಟಾಲಿನ್
ಮುಂಬಯಿ ಲೋಕಲ್ ರೈಲಿನಲ್ಲಿ ಕ್ಷುಲ್ಲಕ ಕಾರಣಕ್ಕೆ ಪ್ರಯಾಣಿಕನ ಹತ್ಯೆ; ಆರೋಪಿ ಬಂಧನ
ಮಹಾರಾಷ್ಟ್ರ : ಅಕೋಲಾ ಮಹಾನಗರ ಪಾಲಿಕೆಯ ಸ್ಥಾಯಿ ಸಮಿತಿ ಸಭಾಂಗಣಕ್ಕೆ ನೀಡಲಾದ ‘ಟಿಪ್ಪು ಸುಲ್ತಾನ್’ ಹೆಸರು ಅಕ್ರಮ!
ಮಹಾರಾಷ್ಟ್ರ : ದೇವಸ್ಥಾನ ಭೂಮಿಗೆ ಸಂಬಂಧಿಸಿದಂತೆ ಸರಕಾರಿ ದೇವಸ್ಥಾನ ಸಮಿತಿಯ ಮೊದಲ ಸಭೆ ಮುಕ್ತಾಯ!