|

ಹಿಂದಿ ಭಾಷೆಯ ಕಡ್ಡಾಯ ತೋರಿಸಿದರೆ ನಾವು ಶಕ್ತಿ ತೋರಿಸುತ್ತೇವೆ! – ಠಾಕ್ರೆ ಸಹೋದರರ ‘ವಿಜಯಿ ಮೇಳಾ’ (ಮೆರವಣಿಗೆ)ದಲ್ಲಿ ಗರ್ಜನೆನಾವು ಯಾವುದೇ ಭಾಷೆಗೆ ವಿರೋಧಿಗಳಲ್ಲ. ಯಾರ ಮೇಲೂ ಅನ್ಯಾಯ ಮಾಡಬೇಡಿ; ಆದರೆ ಕೈ ಮಾಡಿದರೆ, ಕೈಯನ್ನು ಸುಮ್ಮನೆ ಬಿಡಬೇಡಿ. ಮುಂಬಯಿ ರಕ್ಷಣೆಗಾಗಿ ಒಟ್ಟಾಗಿ ನಿಲ್ಲಬೇಕು. ಹಿಂದಿ ಭಾಷೆಯ ‘ಕಡ್ಡಾಯ’ ತೋರಿಸಿದರೆ ನಾವು ‘ಶಕ್ತಿ’ ತೋರಿಸುತ್ತೇವೆ. ‘ಹಿಂದೂ’ ಮತ್ತು ‘ಹಿಂದೂಸ್ತಾನ್’ ಒಪ್ಪುತ್ತೇವೆ; ಆದರೆ ಹಿಂದಿ ಭಾಷೆಯ ಕಡ್ಡಾಯವನ್ನು ಒಪ್ಪುವುದಿಲ್ಲ. ಮರಾಠಿ ಭಾಷೆಯ ವಿಷಯದಲ್ಲಿ ಯಾವುದೇ ರಾಜಿ ಇರುವುದಿಲ್ಲ. ಮರಾಠಿ ಜನರ ಏಕತೆ ಶಾಶ್ವತವಾಗಿರಬೇಕು. ಮರಾಠಿ ಜನರು ಜಾಗರೂಕ ಮತ್ತು ಎಚ್ಚರದಿಂದ ಇರುವುದು ಅವಶ್ಯಕವಾಗಿದೆ ! |

ಮುಂಬಯಿ – ‘ಮ’ ಮಹಾನಗರ ಪಾಲಿಕೆಯದ್ದಷ್ಟೇ ಅಲ್ಲ, ‘ಮ’ ‘ಮಹಾರಾಷ್ಟ್ರ’ವನ್ನೂ ನಮ್ಮದಾಗಿಸೋಣ. “ತುಂಡಾಗಬೇಡಿ, ಒಡೆಯಬೇಡಿ, ಮರಾಠಿ ಗುರುತನ್ನು ಮರೆಯಬೇಡಿ.” ಭಾಷಣಕ್ಕಿಂತ ನಾವು ಒಟ್ಟಾಗಿ ಕಾಣಿಸುವುದು ಮುಖ್ಯ.
ಈ ಸಂದರ್ಭದಲ್ಲಿ ಮರಾಠಿ ಜನರ ವಜ್ರಮುಷ್ಟಿ ಎಲ್ಲರಿಗೂ ಕಾಣಿಸಿತು. ನಮ್ಮ ನಡುವಿನ ಪರದೆ ಅನಾಜಿಪಂತರು ತೆಗೆದು ಹಾಕಿದ್ದಾರೆ. ಒಟ್ಟಾಗಿ ಬಂದೆವು, ಒಟ್ಟಾಗಿ ಇರಲು. ಭಾಷೆಯ ವಿಷಯವನ್ನು ಮೇಲ್ನೋಟಕ್ಕೆ ಮಾತ್ರ ನೋಡಬಾರದು. ‘ಬಳಸಿ ಬಿಸಾಡುವುದು’ ಭಾಜಪದ ನೀತಿಯಾಗಿದೆ. ಈಗ ನಾವಿಬ್ಬರೂ ಸೇರಿ ಅವರನ್ನು ಬಿಸಾಡುತ್ತೇವೆ. ೧೯೯೨-೯೩ ರ ಮುಂಬಯಿ ಗಲಭೆಗಳಲ್ಲಿ ಮರಾಠಿ ಜನರು ಮರಾಠಿಗರು ಅಲ್ಲದ ಜನರನ್ನು ಕೂಡ ಹಿಂದೂಗಳೆಂದು ರಕ್ಷಿಸಿದ್ದಾರೆ. ಮರಾಠಿ ಮಾತನಾಡುವವರು ದೇಶಭಕ್ತ ಹಿಂದೂಗಳು. ನ್ಯಾಯ ಕೇಳಲು ಹೋರಾಡುವ ಮರಾಠಿ ಜನರನ್ನು ನೀವು ಗೂಂಡಾ ಎಂದರೆ, ನಾವು ಗೂಂಡಾಗಳು. ‘ ಬಟೆಂಗೇ ತೊ ಕಟೆಂಗೇ’ (ಬೇರ್ಪಟ್ಟರೆ, ಕತ್ತರಿಸಲ್ಪಡುವಿರಿ) ಎಂಬ ಘೋಷಣೆಯನ್ನು ಮರಾಠಾ ಮತ್ತು ಮರಾಠೇತರರಲ್ಲಿ ಭೇದಭಾವ ಮೂಡಿಸಲು ಬಳಸಲಾಯಿತು. ಎಲ್ಲಾ ಭೇದಭಾವಗಳನ್ನು ಮರೆತು ಮರಾಠಿ ಜನರ ಭದ್ರವಾದ ಏಕತೆಯನ್ನು ನಿರ್ಮಿಸಿ, ಎಂದು ಠಾಕ್ರೆ ಗುಂಪಿನ ಮುಖ್ಯಸ್ಥ ಉದ್ಧವ ಬಾಳಾಸಾಹೇಬ ಠಾಕ್ರೆ ಕರೆ ನೀಡಿದರು. ವರಳಿ ಡೋಮನಲ್ಲಿ ಮಹಾರಾಷ್ಟ್ರ ನವನಿರ್ಮಾಣ ಸೇನೆಯ ಅಧ್ಯಕ್ಷ ರಾಜ ಠಾಕ್ರೆ ಮತ್ತು ಉದ್ಧವ ಠಾಕ್ರೆ ಮರಾಠಿ ವಿಷಯದ ಮೇಲೆ ಒಗ್ಗೂಡಿ ಮುಂದೆ ಒಟ್ಟಾಗಿ ಇರುವುದಾಗಿ ‘ವಿಜಯಿ ಮೇಳಾ’ದಲ್ಲಿ ಘೋಷಿಸಿದರು. ಜುಲೈ ೫ ರಂದು ಈ ಸಭೆಯನ್ನು ಆಯೋಜಿಸಲಾಗಿತ್ತು.
🧵 After 20 years, Raj and Uddhav Thackeray shared the stage.
Here’s what happened at the Thackeray brothers’ meet in Mumbai : pic.twitter.com/LcOlx8FrYI
— Sanatan Prabhat (@SanatanPrabhat) July 5, 2025
ಮರಾಠಿಗಾಗಿ ಏಕತೆ ಮುಂದುವರಿದು ಬಾಳಾಸಾಹೇಬರ ಕನಸು ನನಸಾಗಲಿ! – ರಾಜ ಠಾಕ್ರೆ

ಹಿಂದಿ ಕಡ್ಡಾಯದ ವಿರುದ್ಧದ ಪ್ರತಿಭಟನೆಯ ಕೇವಲ ಚರ್ಚೆಯಿಂದಲೇ ಭಾಜಪಗೆ ಹಿಂದೆ ಸರಿಯಬೇಕಾಯಿತು. ಯಾವುದೇ ವಿವಾದಕ್ಕಿಂತ ಮತ್ತು ಯಾವುದೇ ಜಗಳಕ್ಕಿಂತ ಮಹಾರಾಷ್ಟ್ರ ದೊಡ್ಡದು. ನಮ್ಮನ್ನು ಒಗ್ಗೂಡಿಸಲು, ಮಾನ್ಯ ಬಾಳಾಸಾಹೇಬ ಸೇರಿದಂತೆ ಹಲವರಿಗೆ ಸಾಧ್ಯವಾಗದ ಕೆಲಸವನ್ನು ದೇವೇಂದ್ರ ಫಡ್ನವೀಸ ಅವರಿಗೆ ಸಾಧ್ಯವಾಯಿತು. ತ್ರಿಭಾಷಾ ಸೂತ್ರವು ಕೇಂದ್ರ ಮತ್ತು ರಾಜ್ಯದ ನಡುವಿನ ಸಮನ್ವಯಕ್ಕಾಗಿ ಮತ್ತು ಕೇಂದ್ರದ ಶಿಕ್ಷಣ ನೀತಿಯಲ್ಲಿತ್ತು.

ರಾಜ್ಯದಲ್ಲಿ ಅದರ ಅಗತ್ಯವಿಲ್ಲ. ಹಿಂದಿ ಭಾಷೆಯ ರಾಜ್ಯಗಳಲ್ಲಿ ಯಾವ ಮೂರನೇ ಭಾಷೆಯನ್ನು ತರುತ್ತಾರೆ? ಹಿಂದಿ ಭಾಷೆಯ ರಾಜ್ಯಗಳು ಅಭಿವೃದ್ಧಿ ಹೊಂದಿಲ್ಲ. ಆ ರಾಜ್ಯಗಳಿಂದ ಜನರು ಇಲ್ಲಿ ಉದ್ಯೋಗಕ್ಕಾಗಿ ಬರುತ್ತಾರೆ. ಹಿಂದಿ ಪ್ರಾಂತ್ಯದ ಮೇಲೆ 125 ವರ್ಷಗಳ ಕಾಲ ಮರಾಠರು ಆಳಿದ್ದರು, ನಾವು ಮರಾಠಿಯನ್ನು ಹೇರಲಿಲ್ಲ. ಇತರ ಭಾಷೆಗಳಲ್ಲಿ ಕಲಿತು ಮರಾಠಿಯ ಬಗ್ಗೆ ಹೆಮ್ಮೆ ಪಡಲು ಸಾಧ್ಯವಿಲ್ಲವೇ? ಬಾಳಾಸಾಹೇಬ ಠಾಕ್ರೆಯವರೂ ಇಂಗ್ಲಿಷ್ ಮಾಧ್ಯಮದಲ್ಲಿ ಕಲಿತರು. ಮುಂಬಯಿಯನ್ನು ಮಹಾರಾಷ್ಟ್ರದಿಂದ ಪ್ರತ್ಯೇಕಿಸಬೇಕು; ಅದಕ್ಕಾಗಿಯೇ ಭಾಷಾ ಸೂತ್ರವನ್ನು ಬಳಸಿಕೊಂಡು ಇವರು ಪ್ರಯತ್ನಿಸಿದರು; ಆದರೆ ಮಹಾರಾಷ್ಟ್ರ ಕೆರಳಿದಾಗ ಏನಾಗುತ್ತದೆ ಎಂದು ಅವರಿಗೆ ಅರ್ಥವಾಗಿರಬೇಕು.
#विजयी_मेळावा #राजठाकरे #MNSAdhikrut pic.twitter.com/8lNIKFThcl
— MNS Adhikrut – मनसे अधिकृत (@mnsadhikrut) July 5, 2025
ನಾವು ಶಾಂತವಾಗಿದ್ದೇವೆ; ಹಾಗಾಗಿ ಏನನ್ನಾದರೂ ನಮ್ಮ ಮೇಲೆ ಹೇರಲು ಪ್ರಯತ್ನಿಸುತ್ತೀರಾ? ದೇಶದಲ್ಲಿ ವಿವಿಧ ಭಾಷೆಗಳಿರುವುದರಿಂದಲೇ ಭಾಷಾವಾರು ಪ್ರಾಂತ್ಯ ರಚನೆಯಾಯಿತು. ಎದ್ದುಬಿದ್ದು ಹೊಡೆದಾಡಬೇಡಿ; ಆದರೆ ಯಾರೂ ಕೇಳದಿದ್ದರೆ, ಅವರಿಗೆ ಕಪಾಳಕ್ಕೆ ಬಾರಿಸಿ. ಅದರ ವೀಡಿಯೊಗಳನ್ನು ಮಾಡಬೇಡಿ. ಮರಾಠಿಯ ಅಡಿಪಾಯ ನಮಗೆ ಬಾಲ್ಯಶಿಕ್ಷಣ ದಂತೆಯೇ ಇತ್ತು.
ಕೇರಳಮ್ದಲ್ಲಿ ‘ಇಸ್ಲಾಂ ಫ್ರೆಂಡ್ಲಿ’ ಜಿಮ್ ಕುರಿತು ವಿವಾದ
ಪುಣೆ ನಗರದಲ್ಲಿ ಮತ್ತೆ ‘ಕಾರ್ಪೊರೇಟ್ ಜಿಹಾದ್’ ಪ್ರಕರಣ
‘ದಾರುಲ್ ಉಲೂಮ್ ದೇವಬಂದ್’ ಭಯೋತ್ಪಾದಕರ ಕೇಂದ್ರವಾಗಿರುವುದರಿಂದ ಅದನ್ನು ನೆಲಸಮ ಮಾಡಿ ! – ಹಿಂದೂ ರಕ್ಷಾ ದಳದ ಬೇಡಿಕೆ
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭಗವಾನ್ ಶಿವನ ರೂಪದಲ್ಲಿ ತೋರಿಸಿದ ‘ವಿಶ್ವವಾಣಿ’ ಪತ್ರಿಕೆ !
‘ಭಂಡಾರ ಎಂದರೆ ಶುದ್ಧ ಅರಿಶಿನ’ ಎಂದು ಘೋಷಿಸುವಂತೆ ಅನ್ನ ಮತ್ತು ಔಷಧ ಆಡಳಿತಕ್ಕೆ (FDA) ಆಗ್ರಹ!
ಪಾನ್ ಮಸಾಲಾ, ಗುಟ್ಕಾ ಮತ್ತು ಕಲಬೆರಕೆ ಆಹಾರ ಪದಾರ್ಥಗಳ ಒಂದೂವರೆ ಕೋಟಿಗೂ ಹೆಚ್ಚು ಮೌಲ್ಯದ ದಾಸ್ತಾನು ವಶ