ಕಚ್ಚಾಥಿವು ದ್ವೀಪದ ಮೇಲಿನ ನಿಯಂತ್ರಣ ಬಿಡುವುದಿಲ್ಲ ಎಂದು ಸ್ಪಷ್ಟನೆ

ಕೊಲಂಬೊ (ಶ್ರೀಲಂಕಾ) – ಕಚ್ಚಾಥಿವು ದ್ವೀಪದ ಪ್ರಕರಣವನ್ನು ಬಗೆಹರಿಸಲು ನಮ್ಮಲ್ಲಿ ರಾಜತಾಂತ್ರಿಕ ಆಯ್ಕೆಗಳು ತೆರೆದಿವೆ; ಆದರೆ ಅಂತರರಾಷ್ಟ್ರೀಯ ಕಾನೂನಿನ ಪ್ರಕಾರ ಕಚ್ಚಾಥಿವು ದ್ವೀಪ ಶ್ರೀಲಂಕಾದ ಭಾಗವಾಗಿದೆ ಮತ್ತು ನಾವು ಅದನ್ನು ಎಂದಿಗೂ ಬಿಡುವುದಿಲ್ಲ ಎಂದು ಶ್ರೀಲಂಕಾ ವಿದೇಶಾಂಗ ಸಚಿವ ವಿಜಿತಾ ಹೇರಾತ ಹೇಳಿದ್ದಾರೆ. ಈ ದ್ವೀಪದ ಸಮೀಪದ ಸಮುದ್ರದಲ್ಲಿ ಭಾರತೀಯ ಮೀನುಗಾರರು ಅಕ್ರಮವಾಗಿ ಪ್ರವೇಶಿಸಿ ಮೀನುಗಾರಿಕೆ ನಡೆಸುತ್ತಿದ್ದಾರೆ ಎಂದು ಹೇರಾತ ಆರೋಪಿಸಿದರು.
🇱🇰 Katchatheevu Controversy Reignites!
Sri Lanka refuses to return the island & blames 🇮🇳 fishermen for resource looting!
Gifted away in 1974 by Indira Gandhi, ignoring Tamil Nadu’s protest.
🤝 How long will India’s Gandhigiri face ingratitude?
Isn’t it time India rethinks its… pic.twitter.com/4NHRVbhV9B— Sanatan Prabhat (@SanatanPrabhat) July 5, 2025
‘ಭಾರತೀಯ ಮೀನುಗಾರರು ಇಲ್ಲಿನ ಸಂಪನ್ಮೂಲಗಳನ್ನು ಲೂಟಿ ಮಾಡುವುದಲ್ಲದೆ, ಸಮುದ್ರ ವನಸ್ತಪಿಗಳಿಗೂ ಹಾನಿ ಮಾಡುತ್ತಿದ್ದಾರೆ’ ಎಂದೂ ಅವರು ಆರೋಪಿಸಿದರು. ಭಾರತದ ಮೀನುಗಾರರನ್ನು ಶ್ರೀಲಂಕಾ ಬಂಧಿಸುತ್ತಿರುವ ಕುರಿತು ಅವರು ಮಾತನಾಡುತ್ತಿದ್ದರು.
ಇತಿಹಾಸವೇನು?ಕಚ್ಚಾಥಿವು ದ್ವೀಪ ಭಾರತದ ರಾಮೇಶ್ವರಂನಿಂದ 19 ಕಿ.ಮೀ. ದೂರದಲ್ಲಿದೆ. ಭಾರತದ ತಮಿಳುನಾಡು ಮತ್ತು ಶ್ರೀಲಂಕಾ ನಡುವಿನ ಸಮುದ್ರವನ್ನು ಪಾಲ್ಕ್ ಜಲಸಂಧಿ ಎಂದು ಕರೆಯುತ್ತಾರೆ. ಇಲ್ಲಿ ಅನೇಕ ದ್ವೀಪಗಳಿವೆ, ಅವುಗಳಲ್ಲಿ ಒಂದರ ಹೆಸರು ಕಚ್ಚಾಥಿವು. ಇದು 285 ಎಕರೆಯಲ್ಲಿ ಹರಡಿರುವ ದ್ವೀಪವಾಗಿದೆ. ಈ ದ್ವೀಪ ಬಂಗಾಳಕೊಲ್ಲಿ ಮತ್ತು ಅರಬ್ಬಿ ಸಮುದ್ರವನ್ನು ಸಂಪರ್ಕಿಸುತ್ತದೆ. 1974ರಲ್ಲಿ ಇಂದಿರಾ ಗಾಂಧಿ ಅವರ ಸರಕಾರ ಈ ದ್ವೀಪವನ್ನು ಶ್ರೀಲಂಕಾಕ್ಕೆ ಉಡುಗೊರೆಯಾಗಿ ನೀಡಿತ್ತು. 1980ರ ದಶಕದಲ್ಲಿ ಭಾರತ ದಕ್ಷಿಣ ಏಷ್ಯಾದಲ್ಲಿ ತನ್ನ ಪ್ರಭಾವವನ್ನು ಹೆಚ್ಚಿಸುವ ಮತ್ತು ನೆರೆಯ ರಾಷ್ಟ್ರಗಳೊಂದಿಗೆ ಶಾಂತಿಯುತ ಸಂಬಂಧಗಳನ್ನು ಕಾಪಾಡುವ ನೀತಿಯ ಮೇಲೆ ಕೆಲಸ ಮಾಡುತ್ತಿತ್ತು. ಶ್ರೀಲಂಕಾದೊಂದಿಗಿನ ಗಡಿ ವಿವಾದವನ್ನು ಪರಿಹರಿಸುವುದು ಈ ಯೋಜನೆಯ ಒಂದು ಭಾಗವಾಗಿತ್ತು. ಆ ಯೋಜನೆಯ ಅಡಿಯಲ್ಲಿ ಈ ದ್ವೀಪವನ್ನು ಶ್ರೀಲಂಕಾಕ್ಕೆ ನೀಡಲಾಯಿತು. ಇದಕ್ಕೆ ಆಗ ತಮಿಳುನಾಡು ಸರಕಾರ ವಿರೋಧ ವ್ಯಕ್ತಪಡಿಸಿತ್ತು. |
ಸಂಪಾದಕೀಯ ನಿಲುವುಭಾರತ ಅನುಸರಿಸಿದ ಗಾಂಧಿ ಮಾರ್ಗಕ್ಕೆ ಎಲ್ಲ ಕಡೆಯಿಂದಲೂ ಕೃತಘ್ನತೆಯೇ ಸಿಕ್ಕಿದೆ ಎಂಬುದನ್ನು ಶ್ರೀಲಂಕಾ ಕೂಡ ತೋರಿಸಿಕೊಟ್ಟಿದೆ. ಭಾರತ ಈಗಲಾದರೂ ಬುದ್ಧಿ ಕಲಿಯುತ್ತದೆಯೇ? |
ಹುಡುಗಿಯ ಮೃತದೇಹವು ಕೆರೆಯಲ್ಲಿ ತೇಲುತ್ತಿದ್ದ ಸ್ಥಿತಿಯಲ್ಲಿ ಪತ್ತೆ!
ನಾವು ಹಿಂದೂ ಧರ್ಮದ ಮೇಲಿನ ದ್ವೇಷದ ವಿರುದ್ಧ ದೃಢವಾಗಿ ನಿಲ್ಲಬೇಕು !
ಯುಕ್ರೇನ್-ರಷ್ಯಾ ಯುದ್ಧದಲ್ಲಿ ಭಾರತೀಯ ಸೈನಿಕರನ್ನು ಶಾಂತಿ ಕಾರ್ಯಾಚರಣೆಗಾಗಿ ಕಳುಹಿಸುವ ಉಪರಾಷ್ಟ್ರಪತಿ ಜೆ.ಡಿ. ವ್ಯಾನ್ಸ್ ಅವರ ಪ್ರಸ್ತಾವನೆ : Indian Peace Keeping for Ukraine
ಸಿಂಧೂ ನದಿ ನೀರು ಹಂಚಿಕೆ ಒಪ್ಪಂದದ ವಿಚಾರದಲ್ಲಿ ಪಾಕಿಸ್ತಾನದಿಂದ ಕಾಶ್ಮೀರ ಗಡಿಯಲ್ಲಿ 35 ಡ್ರೋನ್ ವಿರೋಧಿ ಘಟಕಗಳ ನಿಯೋಜನೆ! : Indus Water Treaty Crisis
‘ಮಾನವಾಧಿಕಾರ ಉಲ್ಲಂಘನೆಯಾದರೆ ಭಾರತದ ಮೇಲೆ ಟೀಕಿಸಲು ಹಿಂಜರಿಯುವುದಿಲ್ಲ!'(ವಂತೆ) : US Lawmakers
ಮಾನವ ಹಕ್ಕುಗಳ ಉಲ್ಲಂಘನೆ ವಿರುದ್ಧ ಧ್ವನಿ ಎತ್ತಿದ ಮೆಹರಂಗ್ ಬಲೋಚ್ ಗೆ ಪಾಕಿಸ್ತಾನದಿಂದ ಜೀವಾವಧಿ ಶಿಕ್ಷೆ !