ಮುಂಬಯಿನ 11 ಅಂತರಾಷ್ಟ್ರೀಯ ಶಾಲೆಗಳಿಗೆ 2 ತಿಂಗಳಲ್ಲಿ ವಿದೇಶದಿಂದ ಬೆದರಿಕೆಯ ಇ-ಮೇಲ್‌ಗಳು !

ಮುಂಬಯಿ – ಜೂನ್ ಮತ್ತು ಜುಲೈ ಈ ಎರಡು ತಿಂಗಳುಗಳಲ್ಲಿ ಮುಂಬಯಿನ 11 ಅಂತರಾಷ್ಟ್ರೀಯ ಶಾಲೆಗಳಿಗೆ ಬೆದರಿಕೆಯ ಇ-ಮೇಲ್‌ಗಳು ಬಂದಿವೆ. ಈ ಇ-ಮೇಲ್‌ಗಳನ್ನು ಸ್ವೀಡನ್, ಆಸ್ಟ್ರೇಲಿಯಾ, ಅಮೆರಿಕಾ ಮತ್ತು ನಾರ್ವೆ ಈ ದೇಶಗಳಿಂದ ‘ವರ್ಚುವಲ್ ಪ್ರೈವೇಟ್ ನೆಟ್‌ವರ್ಕ್’ (VPN) ಬಳಸಿ ಕಳುಹಿಸಲಾಗಿದೆ. ಈ ಮೂಲಕ ಅದನ್ನು ಕಳುಹಿಸಿದವರ ಗುರುತನ್ನು ಮರೆಮಾಚಲು ಪ್ರಯತ್ನಿಸಲಾಗಿದೆ. ಎಲ್ಲಾ ಬೆದರಿಕೆಗಳ ವಿಧಾನ ಒಂದೇ ಆಗಿರುವುದರಿಂದ, ಇದರ ಹಿಂದೆ ಒಂದೇ ಗುಂಪಿನ ಕೈವಾಡವಿದೆ ಎಂದು ಪೊಲೀಸರು ಶಂಕಿಸಿದ್ದಾರೆ. ಈ ಸಂಬಂಧ 5 ಪ್ರಕರಣಗಳು ದಾಖಲಾಗಿವೆ.

ವಿಲೆಪಾರ್ಲೆ, ಡೊಂಬಿವಲಿ, ಗೋವಂಡಿ, ಕಾಂದಿವಲಿ, ಸಮತಾನಗರ ಮತ್ತು ಪವೈನಲ್ಲಿರುವ ಶಾಲೆಗಳಿಗೆ ಬೆದರಿಕೆಗಳು ಬಂದಿವೆ. ಇವೆಲ್ಲವೂ ಅಂತರಾಷ್ಟ್ರೀಯ ಶಾಲೆಗಳಾಗಿದ್ದು, ಕಾಂದಿವಲಿ ಮತ್ತು ಗೋವಂಡಿಯಲ್ಲಿರುವ ಅಂತರಾಷ್ಟ್ರೀಯ ಶಾಲೆಗಳಿಗೆ ಒಂದೇ ವಾರದಲ್ಲಿ ಒಂದೇ ರೀತಿಯ ಬೆದರಿಕೆಯ ಇ-ಮೇಲ್‌ಗಳು ಬಂದಿದ್ದವು.

ಸಂಪಾದಕೀಯ ನಿಲುವು

ಶಾಲೆಗಳಿಗೆ ಇಷ್ಟು ದೊಡ್ಡ ಪ್ರಮಾಣದಲ್ಲಿ ಬೆದರಿಕೆಯ ಇ-ಮೇಲ್‌ಗಳು ಬರುತ್ತಿರುವುದರ ಹಿಂದೆ ನಿಜಕ್ಕೂ ಯಾರದ್ದೊ ಪಿತೂರಿ ಇದೆ. ಇದನ್ನು ತಕ್ಷಣವೇ ಪತ್ತೆಹಚ್ಚಬೇಕು ಮತ್ತು ವಿದ್ಯಾರ್ಥಿಗಳಿಗೆ ಸುರಕ್ಷಿತ ವಾತಾವರಣ ಕಲ್ಪಿಸಬೇಕು!