
ಪಂಢರಪುರ – ಪ್ರತಿ ವರ್ಷ ಲಕ್ಷಾಂತರ ವಾರಕರಿಗಳು ಆಷಾಢ ಮತ್ತು ಕಾರ್ತಿಕ ಏಕಾದಶಿಯಂದು ಪಂಢರಪುರದಲ್ಲಿ ಶ್ರೀ ವಿಠ್ಠಲನ ಚರಣಗಳಿಗೆ ನಮಸ್ಕರಿಸುತ್ತಾರೆ. ಪ್ರಸ್ತುತ, ಆಷಾಢ ಏಕಾದಶಿ ನಿಮಿತ್ತ ವಾರಕರಿಗಳ ದಿಂಡಿಗಳು ಪಂಢರಪುರದಲ್ಲಿ ವಿಶ್ರಮಿಸುತ್ತಿವೆ. ವಾರಕರಿ ಸಂಪ್ರದಾಯದ ಧರ್ಮಕಾರ್ಯ ಮತ್ತು ರಾಷ್ಟ್ರನಿಷ್ಠೆ ಮಹಾರಾಷ್ಟ್ರದ ನಿಜವಾದ ಗುರುತು. ಕಳೆದ ಅನೇಕ ಶತಮಾನಗಳಿಂದ ವಾರಕರಿ ಸಂಪ್ರದಾಯವು ನೈತಿಕ ಮೌಲ್ಯಗಳು, ಸಂಸ್ಕೃತಿ ಸಂರಕ್ಷಣೆ ಮತ್ತು ದೇಶಭಕ್ತಿಯ ಬೋಧನೆಗಳನ್ನು ನೀಡುತ್ತಿದೆ. ಇಂದಿಗೂ ಧರ್ಮ, ಸಂಸ್ಕೃತಿ ಮತ್ತು ರಾಷ್ಟ್ರದ ಹಿತಾಸಕ್ತಿಗಾಗಿ ವಾರಕರಿ ಸಮಾಜವು ಮುಂಚೂಣಿಯಲ್ಲಿದೆ. ಮಹಾರಾಷ್ಟ್ರದಲ್ಲಿ ವಾರಕರಿ ಸಂಪ್ರದಾಯವು ದೊಡ್ಡ ಪ್ರಮಾಣದಲ್ಲಿದ್ದರೂ, ಪಂಢರಪುರ ಮತ್ತು ಆಳಂದಿಯ ಯಾತ್ರಾ ಸ್ಥಳಗಳಲ್ಲಿ ಇನ್ನೂ ಸರಿಯಾದ ಸೌಲಭ್ಯಗಳಿಲ್ಲ.
ಇದರ ಜೊತೆಗೆ, ಆಳಂದಿಯಲ್ಲಿ ಪ್ರಸ್ತಾಪಿಸಲಾಗಿರುವ ಕಸಾಯಿ ಖಾನೆ, ವಾರಿಯಲ್ಲಿನ ಅಕ್ರಮ ಪ್ರವೇಶ, ಸಂತರುಗಳ ಶ್ಲೋಕಗಳ ತಪ್ಪಾದ ಅರ್ಥೈಸುವಿಕೆಯ ಮೂಲಕ ಜನರ ದಿಕ್ಕು ತಪ್ಪಿಸುವಿಕೆ ಸೇರಿದಂತೆ ಇತರ ಸಮಸ್ಯೆಗಳನ್ನು ಎತ್ತಿಹಿಡಿಯಲು ಮತ್ತು ಪ್ರಮುಖ ಬೇಡಿಕೆಗಳನ್ನು ಸರಕಾರದ ಮುಂದೆ ಇಡಲು, ಆಷಾಢ ಏಕಾದಶಿಯಂದು, ಅಂದರೆ ಜುಲೈ 6 ರಂದು, ಪಂಢರಪುರದಲ್ಲಿ ಬೃಹತ್ ವಾರಕರಿ ಮಹಾಅಧಿವೇಶನವನ್ನು ಆಯೋಜಿಸಲಾಗುವುದು ಎಂದು ಹಿಂದೂ ಜನಜಾಗೃತಿ ಸಮಿತಿಯ ಮಹಾರಾಷ್ಟ್ರ ಮತ್ತು ಛತ್ತೀಸ್‌ಗಢ ರಾಜ್ಯಗಳ ಸಂಘಟಕ ಶ್ರೀ. ಸುನಿಲ ಘನವಟ ಅವರು ಪತ್ರಿಕಾ ಪ್ರಕಟಣೆಯ ಮೂಲಕ ಮಾಹಿತಿ ನೀಡಿದ್ದಾರೆ.
ಈ ಅಧಿವೇಶನವು ಪಂಢರಪುರದ ಸದ್ಗುರು ಶ್ರೀ ಗಂಗಾಗಿರಿ ಮಹಾರಾಜ ಮಠ, ಭಕ್ತಿಮಾರ್ಗ, ಜನಕಲ್ಯಾಣ ಆಸ್ಪತ್ರೆಯ ಪಕ್ಕದಲ್ಲಿ ಮಧ್ಯಾಹ್ನ 1 ರಿಂದ 3:30 ರವರೆಗೆ ನಡೆಯಲಿದೆ. ಮಹಂತ ಗುರುವರ್ಯ ಪ.ಪೂ. ರಾಮಗಿರಿ ಮಹಾರಾಜ ಅವರು ಈ ಅಧಿವೇಶನದ ಅಧ್ಯಕ್ಷತೆ ವಹಿಸಲಿದ್ದಾರೆ. ಈ ಅಧಿವೇಶನದಲ್ಲಿ ಹಿರಿಯ ಕೀರ್ತನಕಾರ ಸಂತವೀರ ಹ.ಭ.ಪ. ಬಂಡಾತತ್ಯಾ ಕರಡಕರ, ಮಹಾರಾಷ್ಟ್ರ ವಾರಕರಿ ಮಹಾಮಂಡಲದ ಅಧ್ಯಕ್ಷ ಹ.ಭ.ಪ. ರಾಮೇಶ್ವರಶಾಸ್ತ್ರೀ ಮಹಾರಾಜ ಮತ್ತು ಕಾರ್ಯದರ್ಶಿ ಹ.ಭ.ಪ. ನರಹರಿ ಮಹಾರಾಜ ಚೌಧರಿ, ಪಂಢರಪುರದ ಶ್ರೀ ವಿಠ್ಠಲ್-ರುಕ್ಮಿಣಿ ಸಂಸ್ಥಾನದ ಧರ್ಮದರ್ಶಿ ಹ.ಭ.ಪ. ಪ್ರಕಾಶ ಮಹಾರಾಜ ಜವಂಜಾಳ, ‘ಮಹಾರಾಷ್ಟ್ರ ಗೋಸೇವಾ ಆಯೋಗ’ದ ಅಧ್ಯಕ್ಷ ಶ್ರೀ. ಶೇಖರ ಮುಂಡಾಡಾ, ಜಗದ್ಗುರು ಶ್ರೀ ಸಂತ ತುಕಾರಾಮ ಮಹಾರಾಜ ಸಂಸ್ಥಾನದ ಧರ್ಮದರ್ಶಿ ಹ.ಭ.ಪ. ಮಾಣಿಕ ಮಹಾರಾಜ ಮೋರೆ, ಶ್ರೀ ಸಂತ ಜ್ಞಾನೇಶ್ವರ ಮಹಾರಾಜ ಸಂಸ್ಥಾನ, ಆಳಂದಿಯ ಪ್ರಮುಖ ಧರ್ಮದರ್ಶಿ ಯೋಗಿ ನಿರಂಜನನಾಥ, ಹ.ಭ.ಪ. ಛೋಟೆ ಕದಮ ಮಾವುಲಿ, ಹ.ಭ.ಪ. ನರೇಂದ್ರ ಮಹಾರಾಜ ಮಸ್ಕೆ, ಶ್ರೀಕ್ಷೇತ್ರ ಅಪೇಗಾಂವದ ಹ.ಭ.ಪ. ವಿಷ್ಣು ಮಹಾರಾಜ ಅಪೇಗಾಂವಕರ, ‘ಅಖಿಲ ಭಾರತ ಸಂತ ಸಮಿತಿ’ಯ ಪ್ರದೇಶ ಮಹಾಮಂತ್ರಿ ಸ್ವಾಮಿ ಭಾರತಾನಂದ ಸರಸ್ವತಿ ಮಹಾರಾಜ, ಮಹಾರಾಷ್ಟ್ರ ವಾರಕರಿ ಮಹಾಮಂಡಲದ ಕೊಂಕಣ ಪ್ರಾಂತಾಧ್ಯಕ್ಷ ಹ.ಭ.ಪ. ಭಗವಾನ ಮಹಾರಾಜ ಕೊಕರೆ, ರಾಷ್ಟ್ರೀಯ ವಾರಕರಿ ಪರಿಷತ್‌ನ ಹ.ಭ.ಪ. ಮಾರುತಿ ಮಹಾರಾಜ ತುನ್ತುನೆ ಮತ್ತು ಕಾರ್ಯಾಧ್ಯಕ್ಷ ಹ.ಭ.ಪ. ಬಾಪು ಮಹಾರಾಜ ರಾವಕರ, ಹಿಂದೂ ಜನಜಾಗೃತಿ ಸಮಿತಿಯ ಮಹಾರಾಷ್ಟ್ರ ಮತ್ತು ಛತ್ತೀಸಗಢ ರಾಜ್ಯಗಳ ಸಂಘಟಕ ಶ್ರೀ. ಸುನಿಲ ಘನವಟ ಸೇರಿದಂತೆ ಸಂತ-ಮಹಂತರು, ಹ.ಭ.ಪ., ಧರ್ಮಾಚಾರ್ಯರು, ಹಿಂದುತ್ವನಿಷ್ಠ ಸಂಘಟನೆಗಳ ಪ್ರಮುಖರು ಮಾರ್ಗದರ್ಶನ ನೀಡಲಿದ್ದಾರೆ. ಈ ಅಧಿವೇಶನದಲ್ಲಿ ಧರ್ಮರಕ್ಷಣೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಧರ್ಮರಕ್ಷಕರನ್ನು ಸನ್ಮಾನಿಸಲಾಗುವುದು.
‘ಭಂಡಾರ ಎಂದರೆ ಶುದ್ಧ ಅರಿಶಿನ’ ಎಂದು ಘೋಷಿಸುವಂತೆ ಅನ್ನ ಮತ್ತು ಔಷಧ ಆಡಳಿತಕ್ಕೆ (FDA) ಆಗ್ರಹ!
ಪಾನ್ ಮಸಾಲಾ, ಗುಟ್ಕಾ ಮತ್ತು ಕಲಬೆರಕೆ ಆಹಾರ ಪದಾರ್ಥಗಳ ಒಂದೂವರೆ ಕೋಟಿಗೂ ಹೆಚ್ಚು ಮೌಲ್ಯದ ದಾಸ್ತಾನು ವಶ
‘ಲವ್ ಜಿಹಾದ್’, ‘ಲ್ಯಾಂಡ್ ಜಿಹಾದ್’ ಇವೆಲ್ಲಾ ಮೂರ್ಖತನದ ಸಂಗತಿಗಳಂತೆ !
ತುಮಕೂರಿನಲ್ಲಿ ಶ್ರೀರಾಮಮಂದಿರದ ಹತ್ತಿರ ಅಲ್ಪಸಂಖ್ಯಾತರ ವಸತಿಗೃಹ ನಿರ್ಮಿಸುವ ಸಂಚು !
ನಾಗಪುರ: ಮಾನಸಿಕ ಒತ್ತಡದಿಂದಾಗಿ ‘ನೀಟ್’ ಪರೀಕ್ಷೆಯ ವಿದ್ಯಾರ್ಥಿನಿ ಆತ್ಮಹತ್ಯೆ
ರಾಜ್ಯದಲ್ಲಿ ಮುಸಲ್ಮಾನರಿಗೆ 5 ಸಚಿವ ಸ್ಥಾನ ನೀಡದಿದ್ದರೆ ನಮ್ಮ ಶಕ್ತಿಯನ್ನು ತೋರಿಸುತ್ತೇವೆ !