‘ವಾರಿಯ ಪಲ್ಲಕ್ಕಿಗಳಿಂದ ರಸ್ತೆಗಳಲ್ಲಿ ಅಡಚಣೆ ಆಗುತ್ತದೆ!’ – ಸಮಾಜವಾದಿ ಪಕ್ಷದ ಅಬೂ ಆಜ್ಮಿ

  • ಸಮಾಜವಾದಿ ಪಕ್ಷದ ಅಬೂ ಆಜ್ಮಿ ಅವರ ಹಿಂದೂ ವಿರೋಧಿ ಹೇಳಿಕೆ!

  • ಮುಸಲ್ಮಾನರು 10 ನಿಮಿಷಗಳ ಕಾಲ ರಸ್ತೆಯಲ್ಲಿ ನಮಾಜ್ ಮಾಡಿದರೆ ದೂರು ನೀಡಲಾಗುತ್ತದೆ ಎಂದು ಆರೋಪ

ಮುಂಬಯಿ – ವಾರಿಯ ಪಲ್ಲಕ್ಕಿಗಳಿಂದಾಗಿ ರಸ್ತೆ ತಡೆ ಆಗುತ್ತದೆ. ರಸ್ತೆಯಲ್ಲಿ ಹಿಂದೂಗಳ ಹಬ್ಬಗಳನ್ನು ಆಚರಿಸಲಾಗುತ್ತದೆ. ಯಾವುದೇ ಮುಸಲ್ಮಾನ ಹಿಂದೂಗಳ ಹಬ್ಬಗಳ ವಿರುದ್ಧ ದೂರು ನೀಡುವುದಿಲ್ಲ; ಆದರೆ ಮುಸಲ್ಮಾನರು 10 ನಿಮಿಷಗಳ ಕಾಲ ರಸ್ತೆಯಲ್ಲಿ ನಮಾಜ್ ಮಾಡಿದರೆ ದೂರು ನೀಡಲಾಗುತ್ತದೆ. ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ‘ರಸ್ತೆಯಲ್ಲಿ ನಮಾಜ್ ಮಾಡುವವರ ಪಾಸ್ಪೋರ್ಟ್ ರದ್ದುಗೊಳಿಸುತ್ತೇವೆ’ ಎಂದು ಬೆದರಿಕೆ ಹಾಕಿದ್ದಾರೆ ಎಂದು ಸಮಾಜವಾದಿ ಪಕ್ಷದ ಅಬೂ ಆಜ್ಮಿ ಹೇಳಿದ್ದಾರೆ. ಈ ಪ್ರಕರಣದಲ್ಲಿ ವಾರಕರಿಗಳು ಅವರನ್ನು ‘ಅಜ್ಞಾನಿ ವ್ಯಕ್ತಿ’ ಎಂದು ಕರೆದು ಖಂಡಿಸಿದ್ದಾರೆ.

ಈ ಕುರಿತು ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಮಾತನಾಡಿ, “ಅಬೂ ಆಜ್ಮಿ ಯಾವಾಗಲೂ ಇಂತಹ ಹೇಳಿಕೆಗಳನ್ನು ನೀಡುತ್ತಾ ಅವಾಚ್ಯವಾಗಿ ಮಾತನಾಡುತ್ತಾರೆ. ಅವರು ಪ್ರಚಾರಕ್ಕೆ ಯೋಗ್ಯರಲ್ಲ” ಎಂದು ಟೀಕಿಸಿದರು.

ಶಿವಸೇನೆಯ ಸಂಸದ ನರೇಶ್ ಮ್ಹಸ್ಕೆ ಮಾತನಾಡಿ, “ತಮ್ಮ ಅರ್ಹತೆ ಇಲ್ಲದೆ ಇಂತಹ ಹೇಳಿಕೆಗಳನ್ನು ನೀಡಬಾರದು. ಇಂತಹ ಹೇಳಿಕೆಗಳನ್ನು ನೀಡಿ ಗಲಭೆಗಳನ್ನು ಸೃಷ್ಟಿಸಲು ಅವರು ಪ್ರಯತ್ನ ಮಾಡಿರುವುದಿಲ್ಲ ಎಂದು ಹೇಗೆ ಹೇಳಲು ಸಾಧ್ಯ? ಇಂತಹವರನ್ನು ಚುನಾವಣೆಗೆ ನಿಲ್ಲಿಸಲೇಬಾರದು” ಎಂದು ಆಗ್ರಹಿಸಿದರು.

ಸಂಪಾದಕೀಯ ನಿಲುವು

‘ವಾರಿಯನ್ನು ನಮಾಜ್ ಜೊತೆ ಹೋಲಿಸುವ ಮೂಲಕ ಹಿಂದೂಗಳ ಧಾರ್ಮಿಕ ಭಾವನೆಗಳೊಂದಿಗೆ ಉದ್ದೇಶಪೂರ್ವಕವಾಗಿ ಆಟವಾಡಿದ್ದಾರೆ’ ಎಂದು ಹಿಂದೂಗಳಿಗೆ ಅನಿಸುತ್ತದೆ.