ಹಿಂದು ವಿಧಿಜ್ಞ ಪರಿಷತ್ತಿನ ರಾಷ್ಟ್ರೀಯ ಕಾರ್ಯದರ್ಶಿ ನ್ಯಾಯವಾದಿ ಸಂಜೀವ್ ಪುನಾಳೇಕರ್ ಅವರಿಗೆ ‘ಸನಾತನ ಧರ್ಮಶ್ರೀ’ ಪ್ರಶಸ್ತಿ ನೀಡಿ ಗೌರವ!

ನ್ಯಾಯವಾದಿ ಸಂಜೀವ ಪುನಾಳೆಕರ್(ಬಲಬದಿ) ಇವರಿಗೆ ‘ಸನಾತನ ಧರ್ಮಶ್ರೀ’ ಪ್ರಶಸ್ತಿ ನೀಡಿ ಗೌರವಿಸುತ್ತಿರುವ ಸದ್ಗುರು ಅನುರಾಧಾ ವಾಡೆಕರ

ಮುಂಬಯಿ – ಹಿಂದು ವಿಧಿಜ್ಞ ಪರಿಷತ್ತಿನ ರಾಷ್ಟ್ರೀಯ ಕಾರ್ಯದರ್ಶಿ, ನ್ಯಾಯವಾದಿ ಸಂಜೀವ್ ಪುನಾಳೇಕರ ಅವರಿಗೆ ಸನಾತನ ಸಂಸ್ಥೆಯ ವತಿಯಿಂದ ‘ಸನಾತನ ಧರ್ಮಶ್ರೀ’ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಸನಾತನ ಸಂಸ್ಥೆಯ ಧರ್ಮಪ್ರಚಾರಕ ಸದ್ಗುರು ಅನುರಾಧಾ ವಾಡೇಕರ್ ಅವರು ನ್ಯಾಯವಾದಿ ಸಂಜೀವ್ ಪುನಾಳೇಕರ್ ಅವರನ್ನು ಸನ್ಮಾನಿಸಿದರು. ಜೂನ್ 19 ರಂದು ದಾದರ್ ನಲ್ಲಿ ಈ ಕಾರ್ಯಕ್ರಮ ನೆರವೇರಿತು.

ಸನಾತನ ಸಂಸ್ಥೆ ಆಯೋಜಿಸಿದ್ದ ಮೇ 17 ರಿಂದ 19, 2025 ರ ಅವಧಿಯಲ್ಲಿ ನಡೆದ ‘ಸನಾತನ ರಾಷ್ಟ್ರ ಶಂಖನಾದ’ ಮಹೋತ್ಸವದಲ್ಲಿ ಹಿಂದೂ ಧರ್ಮ ಜಾಗೃತಿ ಮತ್ತು ರಾಷ್ಟ್ರ ರಕ್ಷಣೆಗಾಗಿ ಕಾರ್ಯನಿರ್ವಹಿಸಿದ ವ್ಯಕ್ತಿಗಳಿಗೆ ‘ಹಿಂದೂ ರಾಷ್ಟ್ರರತ್ನ’ ಮತ್ತು ‘ಸನಾತನ ಧರ್ಮಶ್ರೀ’ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಯಿತು. ಕೆಲವು ಅನಿವಾರ್ಯ ಕಾರಣಗಳಿಂದ ನ್ಯಾಯವಾದಿ ಸಂಜೀವ್ ಪುನಾಳೇಕರ್ ಅವರಿಗೆ ಈ ಮಹೋತ್ಸವಕ್ಕೆ ಬರಲು ಸಾಧ್ಯವಾಗದ ಕಾರಣ, ಅವರಿಗೆ ಮುಂಬಯಿಯಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಈ ಸಂದರ್ಭದಲ್ಲಿ ಸನಾತನ ಸಂಸ್ಥೆಯ ಪೂ. (ಸೌ.) ಸಂಗೀತಾ ಜಾಧವ್, ಸನಾತನ ಸಂಸ್ಥೆಯ ವಕ್ತಾರ ಶ್ರೀ ಅಭಯ ವರ್ತಕ್, ಹಿಂದೂ ವಿಧಿಜ್ಞ ಪರಿಷತ್ತಿನ ರಾಷ್ಟ್ರೀಯ ಅಧ್ಯಕ್ಷ ನ್ಯಾಯವಾದಿ ವೀರೇಂದ್ರ ಇಚಲಕರಂಜೀಕರ, ಹಿಂದೂ ಜನಜಾಗೃತಿ ಸಮಿತಿಯ ಮುಂಬಯಿ, ಠಾಣೆ, ರಾಯಗಡ ಮತ್ತು ಪಾಲಘರ್ ಜಿಲ್ಲಾ ಸಂಯೋಜಕ ಶ್ರೀ ಸಾಗರ ಚೋಪದಾರ ಮತ್ತು ಮುಂಬಯಿ ಜಿಲ್ಲಾ ಸಂಯೋಜಕ ಶ್ರೀ ಬಳವಂತ ಪಾಠಕ್ ಹಾಗೂ ‘ದಾಭೋಲ್ಕರ್ ಹತ್ಯೆ ಮತ್ತು ನಾನು’ ಮತ್ತು ‘ಮಾಲೇಗಾಂವ ಸ್ಫೋಟದ ಹಿಂದಿನ ಅದೃಶ್ಯ ಕೈ’ ಪುಸ್ತಕಗಳ ಲೇಖಕ ಶ್ರೀ ವಿಕ್ರಮ ಭಾವೆ ಮತ್ತು ನ್ಯಾಯವಾದಿ ಸೌ. ಕಿಶೋರಿ ಕುಲಕರ್ಣಿ ಅವರು ಉಪಸ್ಥಿತರಿದ್ದರು.

ಇದು ನನ್ನೊಂದಿಗೆ ಕೆಲಸ ಮಾಡಿದ ಎಲ್ಲಾ ನ್ಯಾಯವಾದಿಗಳ ಗೌರವವಾಗಿದೆ! – ನ್ಯಾಯವಾದಿ ಸಂಜೀವ್ ಪುನಾಳೇಕರ್

‘ಸನಾತನ ಧರ್ಮಶ್ರೀ’ ಪ್ರಶಸ್ತಿ ನೀಡಿದಕ್ಕಾಗಿ ನಾನು ಅತ್ಯಂತ ಕೃತಜ್ಞನಾಗಿದ್ದೇನೆ. ಈ ಸಮಷ್ಟಿ ಕಾರ್ಯಕ್ಕೆ ಬಂದ ನಂತರ ಸನಾತನ ಸಂಸ್ಥೆಯ ಸಂಸ್ಥಾಪಕರಾದ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಬಾಳಾಜಿ ಆಠವಲೆ ಅವರು ಸ್ಫೂರ್ತಿ ಮತ್ತು ಬೋಧನೆಯನ್ನು ನೀಡಿದರು. ಅವರೇ ನನಗೆ ಈ ಪ್ರಶಸ್ತಿಯನ್ನು ನೀಡಿದರು. ನಿಜ ಹೇಳಬೇಕೆಂದರೆ, ನಾನು ಈ ಪ್ರಶಸ್ತಿಗೆ ಅರ್ಹನಲ್ಲ. ಈಗ ರಾಷ್ಟ್ರ ಮತ್ತು ಧರ್ಮ ಕಾರ್ಯಕ್ಕಾಗಿ ಅನೇಕ ನ್ಯಾಯವಾದಿಗಳು ಮುಂದೆ ಬಂದಿದ್ದಾರೆ. ಇದು ನನ್ನೊಂದಿಗೆ ಕೆಲಸ ಮಾಡಿದ ಎಲ್ಲಾ ನ್ಯಾಯವಾದಿಗಳ ಗೌರವವಾಗಿದೆ, ಮತ್ತು ನ್ಯಾಯವಾದಿಗಳ ಪ್ರತಿನಿಧಿಯಾಗಿ ನಾನು ನಮ್ರತೆಯಿಂದ ಈ ಪ್ರಶಸ್ತಿಯನ್ನು ಸ್ವೀಕರಿಸುತ್ತಿದ್ದೇನೆ. ‘ಹಿಂದೂ ರಾಷ್ಟ್ರದ ಸ್ಥಾಪನೆಯಾಗುವವರೆಗೆ ನಾವು ಸುಮ್ಮನಿರುವುದಿಲ್ಲ’ ಎಂದು ನಾನು ಭರವಸೆ ನೀಡುತ್ತೇನೆ.

ಹಿಂದೂತ್ವನಿಷ್ಠರಿಗೆ ಆಧಾರಸ್ತಂಭವಾಗಿರುವ ಪ್ರಖರ ನ್ಯಾಯವಾದಿ ಸಂಜೀವ್ ಪುನಾಳೇಕರ್!

ಪ್ರಖರ ಹಿಂದುತ್ವನಿಷ್ಠ ನ್ಯಾಯವಾದಿ ಸಂಜೀವ್ ಪುನಾಳೇಕರ್ ಅವರು ಕಳೆದ 25 ವರ್ಷಗಳಿಂದ ವಕೀಲ ವೃತ್ತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಹಿಂದು ವಿಧಿಜ್ಞ ಪರಿಷತ್ತಿನ ಹಿಂದೂತ್ವನಿಷ್ಠ ನ್ಯಾಯವಾದಿಗಳ ಸಂಘಟನೆಯ ರಾಷ್ಟ್ರೀಯ ಕಾರ್ಯದರ್ಶಿಯಾಗಿದ್ದಾರೆ. ಕಾಂಗ್ರೆಸ್ ಅಧಿಕಾರದ ಅವಧಿಯಲ್ಲಿ ಅನೇಕ ಹಿಂದುಗಳನ್ನು ‘ಹಿಂದು ಭಯೋತ್ಪಾದಕ’ ಎಂದು ಬಿಂಬಿಸುವ ಸಲುವಾಗಿ ಭಯಾನಕ ಪಿತೂರಿಗಳನ್ನು ನಡೆಸಿ, ವಿವಿಧ ಪ್ರಕರಣಗಳಲ್ಲಿ ಸಿಲುಕಿಸಲಾಯಿತು. ಅಂತವರಿಗೆ ಸಹಾಯ ಮಾಡಲು ಕೆಲವು ಹಿಂದುತ್ವನಿಷ್ಠರು ಮತ್ತು ಹಿಂದುತ್ವನಿಷ್ಠ ಸಂಘಟನೆಗಳು ಸಹ ಹಿಂಜರಿಯುತ್ತಿದ್ದವು. ಆದರೆ ನ್ಯಾಯವಾದಿ ಸಂಜೀವ್ ಪುನಾಳೇಕರ್ ಅವರು ಹಿಂದುತ್ವನಿಷ್ಠರ ಪ್ರಕರಣಗಳನ್ನು ಸ್ವೀಕರಿಸಿ ಅವರಿಗೆ ಸರ್ವತೋಮುಖ ಸಹಾಯ ಮಾಡಿದರು. ಮಾಲೇಗಾಂವ್ ಬಾಂಬ್ ಸ್ಫೋಟ ಪ್ರಕರಣ, ಮಡಗಾಂವ ಬಾಂಬ್ ಸ್ಫೋಟ ಪ್ರಕರಣ, ಡಾ. ನರೇಂದ್ರ ದಾಭೋಲ್ಕರ್ ಹತ್ಯೆ ಪ್ರಕರಣ, ಕಾಮ್ರೆಡ್ ಗೋವಿಂದ ಪಾನಸರೆ ಹತ್ಯೆ ಪ್ರಕರಣ, ನಾಲಾಸೋಪಾರಾ ಸ್ಫೋಟಕಗಳ ಪ್ರಕರಣ ಸೇರಿದಂತೆ ಅನೇಕ ಪ್ರಕರಣಗಳಲ್ಲಿ ಸಂಜೀವ್ ಪುನಾಳೇಕರ್ ಅವರು ಹಿಂದುತ್ವನಿಷ್ಠರಿಗೆ ಉಚಿತವಾಗಿ ಸಹಾಯ ಮಾಡಿದರು. ಹಿಂದುತ್ವನಿಷ್ಠ ಆರೋಪಿಗಳ ಬೆಂಬಲಕ್ಕೆ ದೃಢವಾಗಿ ನಿಂತು, ಸತ್ಯವನ್ನು ದೃಢವಾಗಿ ಮಂಡಿಸಿದರು.

ಸಂಜೀವ್ ಪುನಾಳೇಕರ್ ಅವರು ಹಿಂದುತ್ವನಿಷ್ಠರಿಗಾಗಿ ಕೇವಲ ನ್ಯಾಯಾಲಯದಲ್ಲಿ ಹೋರಾಟ ನಡೆಸಿದ್ದಲ್ಲದೆ, ಹಿಂದುತ್ವಕ್ಕಾಗಿ ಕೊಡುಗೆ ನೀಡುವ ಇನ್ನೂ ಅನೇಕ ನ್ಯಾಯವಾದಿಗಳು ರೂಪುಗೊಳ್ಳಬೇಕು ಎಂಬ ಉದ್ದೇಶದಿಂದ ಹಿಂದೂ ವಿಧಿಜ್ಞ ಪರಿಷತ್ತಿನ ಮೂಲಕ ನ್ಯಾಯವಾದಿಗಳ ಪರಿಣಾಮಕಾರಿ ಸಂಘಟನೆಯನ್ನು ಸಹ ಮಾಡಿದರು. ನ್ಯಾಯವಾದಿ ಪುನಾಳೇಕರ್ ಅವರು ಸಾಮಾಜಿಕ ಕ್ಷೇತ್ರದಲ್ಲಿಯೂ ಸಹ ಗಣನೀಯ ಕೊಡುಗೆ ನೀಡಿದ್ದಾರೆ.

ನ್ಯಾಯವಾದಿ ಪುನಾಳೇಕರ್ ಅವರು ಸಲ್ಲಿಸಿದ ಅರ್ಜಿಯ ಕಾರಣದಿಂದಾಗಿ ಪ್ರಸ್ತುತ ನಿರ್ಗತಿಕ ಬಡವರಿಗಾಗಿ ಇರುವ ಆಸ್ಪತ್ರೆಗಳಲ್ಲಿ ಬಡವರಿಗಾಗಿ ಶೇ. 20% ಹಾಸಿಗೆಗಳು ಉಚಿತವಾಗಿ ಮತ್ತು ಶೇ. 10% ಹಾಸಿಗೆಗಳು ರಿಯಾಯಿತಿ ದರದಲ್ಲಿ ಲಭ್ಯವಿವೆ. ಈ ಪ್ರಯತ್ನಗಳಿಂದ ಮಹಾರಾಷ್ಟ್ರದಾದ್ಯಂತದ ಬಡ ರೋಗಿಗಳು ಈ ಯೋಜನೆಯ ಲಾಭವನ್ನು ಪಡೆಯುತ್ತಿದ್ದಾರೆ. ಸರಕಾರದಿಂದ ಭೂಮಿ ಪಡೆಯುವವರು ಅದು ತಮ್ಮ ಪೂರ್ವಿಕರ ಆಸ್ತಿ ಎಂದು ತೋರಿಸುತ್ತಿದ್ದರು. ನ್ಯಾಯವಾದಿ ಪುನಾಳೇಕರ್ ಅವರು ಸಲ್ಲಿಸಿದ ಅರ್ಜಿಯಿಂದಾಗಿ, ಸರಕಾರದಿಂದ ಭೂಮಿ ಪಡೆಯುವವರು, ಆ ಭೂಮಿಯನ್ನು ಯಾರು ಪಡೆದಿದ್ದಾರೆ ಎಂಬ ವಿವರವಾದ ಮಾಹಿತಿಯನ್ನು ಫಲಕದಲ್ಲಿ ಮತ್ತು ಜಿಲ್ಲಾಧಿಕಾರಿಗಳ ವೆಬ್ ಸೈಟ್ ನಲ್ಲಿ ಸಾರ್ವಜನಿಕರಿಗೆ ಲಭ್ಯವಾಗುವಂತೆ ಇಡಬೇಕಾಗಿದೆ.

ಹಿಂದು ಭಯೋತ್ಪಾದನೆಯ ಸುಳ್ಳು ಆರೋಪದಲ್ಲಿ ಸಿಲುಕಿಸಿ ಸಂಜೀವ್ ಪುನಾಳೇಕರ್ ಅವರನ್ನು ಕಾರಾಗೃಹಕ್ಕೆ ತಳ್ಳಲಾಯಿತು. 42 ದಿನಗಳ ಕಾಲ ಅವರು ಕಾರಾಗೃಹದಲ್ಲಿ ಇರಬೇಕಾಯಿತು. ಆದರೂ ಹಿಂಜರಿಯದೆ, ಅವರು ‘ನ್ಯಾಯವಾದಿ’ ಆಗಿ ಧರ್ಮಕಾರ್ಯಕ್ಕೆ ತಮ್ಮ ಕೊಡುಗೆಯನ್ನು ನಿಲ್ಲಿಸಲಿಲ್ಲ. ಈ ರೀತಿಯಾಗಿ ನಿಸ್ವಾರ್ಥ ಭಾವನೆಯಿಂದ ಹಿಂದುತ್ವಕ್ಕಾಗಿ ಹೋರಾಡುವ ಈ ‘ಹಿಂದುತ್ವದ ಶೂರ’ ಎಲ್ಲಾ ಧರ್ಮಪ್ರೇಮಿಗಳಿಗೆ ಸ್ಪೂರ್ತಿದಾಯಕರಾಗಿದ್ದಾರೆ!