ತೇಲಅವೀವ್ (ಇಸ್ರೇಲ್) / ವಾಷಿಂಗ್ಟನ್ (ಅಮೆರಿಕ) – ಈ ವಾರದ ಅಂತ್ಯದೊಳಗೆ ಅಮೆರಿಕಾವು ಇರಾನ್ ಮೇಲೆ ದಾಳಿ ಮಾಡಬಹುದು ಎಂದು ‘ಬ್ಲೂಮಬರ್ಗ್’ ವರದಿಯೊಂದು ತಿಳಿಸಿದೆ. ವರದಿಯಲ್ಲಿ, ಕೆಲವು ಹಿರಿಯ ಅಮೆರಿಕನ ಅಧಿಕಾರಿಗಳು ಇರಾನ್ ಮೇಲೆ ದಾಳಿ ಮಾಡುವ ಯೋಜನೆಗಳಲ್ಲಿ ನಿರತರಾಗಿದ್ದಾರೆ, ಈ ಯೋಜನೆಗಳು ಇನ್ನೂ ಅಂತಿಮಗೊಂಡಿಲ್ಲ ಮತ್ತು ಬದಲಾಗಬಹುದು, ಎಂದು ಮೂಲಗಳನ್ನು ಉಲ್ಲೇಖಿಸಿ ಹೇಳಲಾಗಿದೆ.
ಇಸ್ರೇಲ್-ಇರಾನ್ ಉದ್ವಿಗ್ನತೆ ನಿವಾರಿಸಲು ಪುಟಿನ್ ಪ್ರಸ್ತಾಪ
ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮಾತನಾಡಿ, “ಇಸ್ರೇಲ್ ಮತ್ತು ಇರಾನ್ ನಡುವೆ ನಡೆಯುತ್ತಿರುವ ಯುದ್ಧವನ್ನು ಕೊನೆಗೊಳಿಸಬಹುದು. ಇದಕ್ಕೆ ಪರಿಹಾರ ಕಂಡುಕೊಳ್ಳಬಹುದು. ಈ ಉದ್ವಿಗ್ನತೆಯನ್ನು ಕಡಿಮೆ ಮಾಡಲು ರಷ್ಯಾ ಸಹಾಯ ಮಾಡಬಹುದು. ಇರಾನ್ ತನ್ನ ಪರಮಾಣು ಕಾರ್ಯಕ್ರಮವನ್ನು ಶಾಂತಿಯುತವಾಗಿ ನಡೆಸಲು ಮತ್ತು ಅದೇ ಸಮಯದಲ್ಲಿ ಇಸ್ರೇಲ್‌ನ ಭದ್ರತಾ ಕಾಳಜಿಗಳನ್ನು ಪೂರೈಸಲು ರಷ್ಯಾ ಸಹಾಯ ಮಾಡಲು ಬಯಸುತ್ತದೆ” ಎಂದು ಹೇಳಿದ್ದಾರೆ.
ವಿಶ್ವದ ಪ್ರಮುಖ ಸುದ್ದಿ ಸಂಸ್ಥೆಗಳ ಸಂಪಾದಕರೊಂದಿಗಿನ ಚರ್ಚೆಯಲ್ಲಿ ಪುಟಿನ್ ಅವರು, ರಷ್ಯಾ ಈ ಪ್ರಸ್ತಾಪವನ್ನು ಇರಾನ್, ಇಸ್ರೇಲ್ ಮತ್ತು ಅಮೆರಿಕಕ್ಕೆ ಕಳುಹಿಸಿದೆ ಎಂದು ತಿಳಿಸಿದ್ದಾರೆ.
ಮೊದಲು ಉಕ್ರೇನ್ ಯುದ್ಧ ನಿಲ್ಲಿಸಿ, ನಂತರ ಇಸ್ರೇಲ್-ಇರಾನ್ ಸಮಸ್ಯೆ ಪರಿಹರಿಸಿ!” – ಟ್ರಂಪ್ ಅವರಿಂದ ಪುಟಿನ್‌ಗೆ ಟಾಂಗ್
ಪುಟಿನ ಅವರ ಪ್ರಸ್ತಾಪವನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕನ್ನಡಿ ತೋರಿಸಿದ್ದಾರೆ. ಟ್ರಂಪ್ ಇವರು, “ನಾನು ನಿನ್ನೆ ಪುಟಿನ್ ಅವರೊಂದಿಗೆ ಮಾತನಾಡಿದೆ. ಅವರು ಮಧ್ಯಸ್ಥಿಕೆ ವಹಿಸಲು ಪ್ರಸ್ತಾಪಿಸಿದರು; ಆದರೆ ನಾನು ಅವರಿಗೆ, ‘ಮೊದಲು ನಿಮ್ಮ ಸ್ವಂತ ಸಮಸ್ಯೆಯನ್ನು ಪರಿಹರಿಸಿ. ಮೊದಲು ಉಕ್ರೇನ್ ಯುದ್ಧವನ್ನು ಕೊನೆಗೊಳಿಸಿ’ ಎಂದು ಹೇಳಿದೆ” ಎಂದಿದ್ದಾರೆ.
ಯುದ್ಧ ನಿಲ್ಲಿಸಲು ಇರಾನ ವಿದೇಶಾಂಗ ಸಚಿವರು ಟ್ರಂಪ್ ಅವರನ್ನು ಭೇಟಿ ಮಾಡಬಹುದು
ಇರಾನ ವಿದೇಶಾಂಗ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ‘ನ್ಯೂಯಾರ್ಕ್ ಟೈಮ್ಸ್’ಗೆ, ಇರಾನ ಅಮೆರಿಕದೊಂದಿಗೆ ಮಾತುಕತೆ ನಡೆಸಲು ಸಿದ್ಧವಾಗಿದೆ. ಯುದ್ಧವನ್ನು ನಿಲ್ಲಿಸುವ ಕುರಿತು ಚರ್ಚಿಸಲು ಇರಾನ ವಿದೇಶಾಂಗ ಸಚಿವ ಅಬ್ಬಾಸ್ ಅರಾಕ್ಚಿ ಶೀಘ್ರದಲ್ಲೇ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಭೇಟಿ ಮಾಡಲಿದ್ದಾರೆ, ಎಂದು ಹೇಳಿದ್ದಾರೆ.
ಆದಾಗ್ಯೂ, ಇರಾನಿನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೆನಿ ಈ ಹಿಂದೆ ಅಮೆರಿಕದೊಂದಿಗೆ ಚರ್ಚೆಯ ಸಾಧ್ಯತೆಯನ್ನು ತಿರಸ್ಕರಿಸಿದ್ದಾರೆ.
ಇಸ್ರೇಲ್‌ನ 4 ನಗರಗಳ ಮೇಲೆ ಇರಾನ ದಾಳಿ: ‘ಸ್ಟಾಕ್ ಎಕ್ಸ್ಚೇಂಜ್’ ಕಟ್ಟಡಕ್ಕೆ ಹಾನಿ
ಇರಾನ ಮತ್ತು ಇಸ್ರೇಲ್ ನಡುವಿನ ಯುದ್ಧ ಏಳನೇ ದಿನವೂ ಮುಂದುವರಿಯಿತು. ಇದುವರೆಗೆ ಇಸ್ರೇಲ್‌ನಲ್ಲಿ 24 ಜನರು ಸಾವನ್ನಪ್ಪಿದ್ದಾರೆ. ಜೂನ್ 19 ರಂದು ಬೆಳಿಗ್ಗೆ ಇರಾನ ಇಸ್ರೇಲ್‌ನ 4 ನಗರಗಳ ಮೇಲೆ ದಾಳಿ ಮಾಡಿದೆ. ರಾಜಧಾನಿ ತೇಲಅವೀವ್ ಬಳಿಯ ರಮತಗನ ನಗರದ ಮೇಲೆ ನಡೆದ ದಾಳಿಯಲ್ಲಿ 20 ಜನರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಇರಾನ ಮಧ್ಯ ಇಸ್ರೇಲ್‌ನಲ್ಲಿರುವ ‘ಸ್ಟಾಕ್ ಎಕ್ಸ್ಚೇಂಜ್’ ಕಟ್ಟಡದ ಮೇಲೆ ಕ್ಷಿಪಣಿ ದಾಳಿ ಮಾಡಿದೆ. ಇದರಿಂದ ಕಟ್ಟಡಕ್ಕೆ ಭಾರಿ ಹಾನಿಯಾಗಿದೆ. ಇರಾನ ಇಸ್ರೇಲ್‌ನಲ್ಲಿ 4 ಕಡೆ ಕ್ಷಿಪಣಿಗಳನ್ನು ಹಾರಿಸಿದೆ. ಬೀರ್ಶೆಬಾ ನಗರದ ಸೊರೊಕಾ ಆಸ್ಪತ್ರೆಗೆ ಭಾರಿ ಹಾನಿಯಾಗಿದೆ.
ಇರಾನಿನ ಅರಕ್ ಪರಮಾಣು ರಿಯಾಕ್ಟರ್ ಮೇಲೆ ಇಸ್ರೇಲ್ ದಾಳಿ
ಇರಾನಿನ ಸರಕಾರಿ ವಾರ್ತಾವಾಹಿನಿಯಲ್ಲಿ ಪ್ರಸಾರವಾದ ವರದಿಯ ಪ್ರಕಾರ, ಇಸ್ರೇಲ್ ಅರಕನಲ್ಲಿ ನಿರ್ಮಿಸಲಾದ ಭಾರೀ ನೀರಿನ ಪರಮಾಣು ರಿಯಾಕ್ಟರ್ ಮೇಲೆ ದಾಳಿ ಮಾಡಿದೆ. ದಾಳಿಯ ಮೊದಲು ಈ ಸ್ಥಳವನ್ನು ಖಾಲಿ ಮಾಡಲಾಗಿತ್ತು ಆದ್ದರಿಂದ ವಿಕಿರಣಶೀಲತೆಯ ಅಪಾಯವಿಲ್ಲ. ಇಸ್ರೇಲ್ ಈ ದಾಳಿಯ ಬಗ್ಗೆ ಮುಂಚಿತವಾಗಿ ಎಚ್ಚರಿಕೆ ನೀಡಿ, ಜನರಿಗೆ ಆ ಪ್ರದೇಶವನ್ನು ತೊರೆಯುವಂತೆ ಹೇಳಿತ್ತು.
ಅಮೆರಿಕದಲ್ಲಿ ಇರಾನ ಬೆಂಬಲಿಸಿ ಪ್ರತಿಭಟನೆ
ಅಮೆರಿಕದಲ್ಲಿ ಇರಾನ ಬೆಂಬಲಿಸುವವರು ನ್ಯೂಯಾರ್ಕ್ ನಗರದ ರಸ್ತೆಗಳಲ್ಲಿ ಮೆರವಣಿಗೆ ನಡೆಸಿದರು. ಇಲ್ಲಿನ ಟೈಮ್ಸ್ ಸ್ಕ್ವೇರ್ ಪ್ರದೇಶದಲ್ಲಿ ಪ್ರತಿಭಟನಾಕಾರರು ‘ಇರಾನನಿಂದ ದೂರವಿರಿ’ ಎಂದು ಘೋಷಣೆ ಕೂಗಿದರು. ನ್ಯೂಯಾರ್ಕ್ ಪೊಲೀಸರು ಅವರನ್ನು ಇಸ್ರೇಲಿ ವಾಣಿಜ್ಯ ರಾಯಭಾರ ಕಛೇರಿಗೆ ಹೋಗುವುದನ್ನು ತಡೆದರು. ಈ ಮೆರವಣಿಗೆಯನ್ನು ಪ್ಯಾಲೆಸ್ಟೀನಿಯನ್ ಯುವ ಚಳುವಳಿ, ಪೀಪಲ್ಸ್ ಫೋರಂ ಮತ್ತು ಆನ್ಸರ ಸಂಸ್ಥೆಗಳು ಜಂಟಿಯಾಗಿ ಆಯೋಜಿಸಿದ್ದವು.
“ಈಗ ಇರಾನ ಸಂಪೂರ್ಣ ಬೆಲೆ ತೆತ್ತಬೇಕಾಗುತ್ತದೆ!” – ನೆತನ್ಯಾಹು ಅವರ ಎಚ್ಚರಿಕೆ
ದಕ್ಷಿಣ ಇಸ್ರೇಲ್‌ನ ಸೊರೊಕಾ ಆಸ್ಪತ್ರೆಯ ಮೇಲೆ ಇರಾನ ಬ್ಯಾಲಿಸ್ಟಿಕ್ ಕ್ಷಿಪಣಿಗಳ ಮೂಲಕ ದಾಳಿ ಮಾಡಿದ ನಂತರ, ಪ್ರಧಾನ ಮಂತ್ರಿ ಬೆಂಜಮಿನ್ ನೆತನ್ಯಾಹು ಅವರು ಎಕ್ಸ್‌ನಲ್ಲಿ ಪೋಸ್ಟ್ ಮಾಡಿ, “ಇರಾನಿನ ಭಯೋತ್ಪಾದಕ ಸರ್ವಾಧಿಕಾರಿಯ (ಅಯತೊಲ್ಲಾ ಅಲಿ ಖಮೆನಿ) ಸೈನಿಕರು ಸೊರೊಕಾ ಆಸ್ಪತ್ರೆ ಮತ್ತು ನಾಗರಿಕರ ಮೇಲೆ ಕ್ಷಿಪಣಿಗಳನ್ನು ಹಾರಿಸಿದ್ದಾರೆ. ಈಗ ಇರಾನ ಇದಕ್ಕೆ ಸಂಪೂರ್ಣ ಬೆಲೆ ತೆತ್ತಬೇಕಾಗುತ್ತದೆ. ಇಸ್ರೇಲ್ ಇರಾನಿನ ಪರಮಾಣು ಮತ್ತು ಕ್ಷಿಪಣಿ ಕಾರ್ಯಕ್ರಮವನ್ನು ಗುರಿಯಾಗಿಸಿಕೊಂಡಿದೆ, ಇದು ನಮಗೆ ಮಾತ್ರವಲ್ಲದೆ ಇಡೀ ಜಗತ್ತಿಗೆ ಅಪಾಯಕಾರಿಯಾಗಿದೆ, ಎಂದು ಹೇಳಿದ್ದಾರೆ. ಇದಕ್ಕೆ ವಿರುದ್ಧವಾಗಿ, ಇರಾನ ಇಸ್ರೇಲಿ ಆಸ್ಪತ್ರೆಗಳು ಮತ್ತು ಮಕ್ಕಳನ್ನು ಗುರಿಯಾಗಿಸುತ್ತಿದೆ. ಇರಾನ ಮತ್ತು ಇಸ್ರೇಲ್ ನಡುವೆ ನೈತಿಕ ಸಮಾನತೆ ಇಲ್ಲ. ಇಸ್ರೇಲ್ ಮತ್ತು ಅಮೆರಿಕಾವನ್ನು ಕೊಲ್ಲುವುದಾಗಿ ಘೋಷಿಸುವವರನ್ನು ನಾಶಪಡಿಸಲು ಇಸ್ರೇಲ್ ಹಿಂಜರಿಯುವುದಿಲ್ಲ.”
“ಇದು ಅತ್ಯಂತ ಕೆಟ್ಟ ಯುದ್ಧ ಅಪರಾಧಗಳು!” – ಇಸ್ರೇಲ್‌ನ ರಕ್ಷಣಾ ಸಚಿವ ಕಟ್ಜ್

ಇಸ್ರೇಲ್‌ನ ರಕ್ಷಣಾ ಸಚಿವ ಇಸ್ರೇಲ್ ಕಟ್ಜ್ ಇವರು, ಇರಾನಿನ ಸರ್ವಾಧಿಕಾರಿ ಭದ್ರವಾದ ಬಂಕರ್‌ನಲ್ಲಿ ಕುಳಿತು, ಇಸ್ರೇಲ್‌ನ ಆಸ್ಪತ್ರೆಗಳು ಮತ್ತು ವಸತಿ ಕಟ್ಟಡಗಳ ಮೇಲೆ ಉದ್ದೇಶಪೂರ್ವಕವಾಗಿ ದಾಳಿ ಮಾಡುತ್ತಿದ್ದಾರೆ. ಇವು ಅತ್ಯಂತ ಕೆಟ್ಟ ಯುದ್ಧ ಅಪರಾಧಗಳಾಗಿವೆ. ಈ ಅಪರಾಧಗಳಿಗೆ ಅಯತೊಲ್ಲಾ ಅಲಿ ಖಮೆನಿ ಅವರನ್ನು ಹೊಣೆಗಾರರನ್ನಾಗಿ ಮಾಡಲಾಗುವುದು. ಇಸ್ರೇಲ್‌ಗೆ ಇರುವ ಬೆದರಿಕೆಗಳನ್ನು ನಿವಾರಿಸಲು ಮತ್ತು ಅಯತೊಲ್ಲಾ ಆಡಳಿತವನ್ನು ಅಸ್ಥಿರಗೊಳಿಸಲು ಇರಾನಲ್ಲಿನ ಕಾರ್ಯತಂತ್ರದ ಗುರಿಗಳು ಮತ್ತು ತೆಹರಾನ್‌ನಲ್ಲಿನ ಸರಕಾರಕ್ಕೆ ಸಂಬಂಧಿಸಿದ ಗುರಿಗಳ ಮೇಲಿನ ದಾಳಿಗಳನ್ನು ತೀವ್ರಗೊಳಿಸಲು ಇಸ್ರೇಲ್ ರಕ್ಷಣಾ ಪಡೆಗೆ ಸೂಚನೆಗಳನ್ನು ನೀಡಲಾಗಿದೆ ಎಂದು ಅವರು ಸ್ಪಷ್ಟಪಡಿಸಿದರು.”