(‘ಡಂಕಿ ಏಜೆಂಟ್’ ಎಂದರೆ ಸೂಕ್ತ ದಾಖಲೆಗಳಿಲ್ಲದೆ ಇತರ ದೇಶಗಳನ್ನು ಪ್ರವೇಶಿಸಲು ಬಯಸುವ ವಲಸಿಗರಿಗೆ ಗಡಿಗಳನ್ನು ಅಕ್ರಮವಾಗಿ ದಾಟಲು ಸಹಾಯ ಮಾಡುವ ವ್ಯಕ್ತಿ)
ನವದೆಹಲಿ – ಜನರನ್ನು ಅಕ್ರಮವಾಗಿ ವಿದೇಶಗಳಿಗೆ ಕಳುಹಿಸುವ ‘ಡಂಕಿ ಏಜೆಂಟ್’ಗಳ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಇತ್ತೀಚೆಗೆ ಸರ್ವೋಚ್ಚ ನ್ಯಾಯಾಲಯ ತಿರಸ್ಕರಿಸಿದೆ. ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳಾದ ಉಜ್ವಲ ಭುಯಾನ ಮತ್ತು ಮನಮೋಹನ ಅವರ ಪೀಠವು ನಿರೀಕ್ಷಣಾ ಜಾಮೀನು ನೀಡಲು ನಿರಾಕರಿಸಿತು ಮತ್ತು ‘ಡಂಕಿ ಏಜೆಂಟ್’ಗಳು ಭಾರತೀಯ ಪಾಸಪೋರ್ಟ್ ಘನತೆಯನ್ನು ಹಾಳುಮಾಡುತ್ತಾರೆ ಎಂದು ಹೇಳಿದೆ.
1. ಹರಿಯಾಣದ ಒಬ್ಬ ಸಂತ್ರಸ್ತ ವ್ಯಕ್ತಿ ಸರ್ವೋಚ್ಚ ನ್ಯಾಯಾಲಯದಲ್ಲಿ ದೂರು ಸಲ್ಲಿಸಿದ್ದರು. ದೂರುದಾರರು, ಆರೋಪಿ (ಡಂಕಿ ಏಜೆಂಟ್) ಅವರನ್ನು ಸೆಪ್ಟೆಂಬರ್ 2024 ರಲ್ಲಿ ದುಬೈಗೆ ಕಳುಹಿಸಿದ್ದು, ಅಲ್ಲಿಂದ ಅವರನ್ನು ಅನೇಕ ದೇಶಗಳ ಮೂಲಕ ಪನಾಮ ಕಾಡನ್ನು ದಾಟಿ ಮೆಕ್ಸಿಕೋಗೆ ಕರೆದೊಯ್ಯಲಾಯಿತು ಎಂದು ತಿಳಿಸಿದ್ದಾರೆ. ಫೆಬ್ರವರಿ 1, 2025 ರಂದು ಅವರನ್ನು ಅಮೆರಿಕದ ಗಡಿಯೊಳಗೆ ಕರೆದೊಯ್ಯಲಾಯಿತು, ಆದರೆ ಅಲ್ಲಿ ಪೊಲೀಸರು ಅವರನ್ನು ಬಂಧಿಸಿದರು. ನಂತರ ಫೆಬ್ರವರಿ 16 ರಂದು ಅವರನ್ನು ಅಮೆರಿಕಾದಿಂದ ಭಾರತಕ್ಕೆ ವಾಪಸ್ಸು ಕಳುಹಿಸಲಾಯಿತು. ಈ ಎಲ್ಲಾ ಪ್ರಕ್ರಿಯೆಗೆ ಆರೋಪಿಯು ಸಂತ್ರಸ್ತ ಕುಟುಂಬದವರಿಂದ 22 ಲಕ್ಷ ರೂಪಾಯಿಗಳನ್ನು ಪಡೆದಿದ್ದನು. (ಅಪಾಯಕಾರಿ ಮಾರ್ಗಗಳ ಮೂಲಕ ಅಕ್ರಮವಾಗಿ ಅಮೆರಿಕಾ, ಬ್ರಿಟನನಂತಹ ದೇಶಗಳನ್ನು ತಲುಪುವುದನ್ನು ‘ಡಂಕಿ ರೂಟ್’ ಎಂದು ಕರೆಯಲಾಗುತ್ತದೆ.)
2. ಪ್ರಕರಣ ದಾಖಲಾದ ನಂತರ ಆರೋಪಿ (ಡಂಕಿ ಏಜೆಂಟ್) ತನ್ನ ಬಿಡುಗಡೆಗಾಗಿ ಪಂಜಾಬ್ ಮತ್ತು ಹರಿಯಾಣ ಉಚ್ಚ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದನು. ಉಚ್ಚ ನ್ಯಾಯಾಲಯ ಆತನ ನಿರೀಕ್ಷಣಾ ಜಾಮೀನು ಅರ್ಜಿಯನ್ನು ತಿರಸ್ಕರಿಸುವಾಗ, ಅರ್ಜಿದಾರನಿಗೆ (ಡಂಕಿ ಏಜೆಂಟನಿಗೆ) ಅಪರಾಧ ಹಿನ್ನೆಲೆ ಇದೆ; ಏಕೆಂದರೆ ಅವನು ಇದೇ ರೀತಿಯ ಮತ್ತೊಂದು ಪ್ರಕರಣದಲ್ಲಿ ಭಾಗಿಯಾಗಿದ್ದಾನೆ. ಇಂತಹ ಪರಿಸ್ಥಿತಿಯಲ್ಲಿ, ಪ್ರಾಥಮಿಕವಾಗಿ ಇದು ವಂಚನೆಯ ಪ್ರಕರಣವಾಗಿದೆ ಎಂದು ಹೇಳಿದೆ.