ಮಹಿಳಾ ಸಂಸದೆ ಮತ್ತು ಅವರ ಪತಿಯ ಸಾವು, ಇನ್ನೊಬ್ಬ ಸಂಸದ ಮತ್ತು ಅವರ ಪತ್ನಿಗೆ ಗಾಯ

ಮಿನೆಸೋಟಾ (ಅಮೆರಿಕ) – ಇಲ್ಲಿನ ಡೆಮಾಕ್ರಟಿಕ್ ಪಕ್ಷದ ಇಬ್ಬರು ಸಂಸದರ ಮನೆಗಳಿಗೆ ನುಗ್ಗಿ ಗುಂಡು ಹಾರಿಸಲಾಗಿದೆ. ಈ ಘಟನೆಯಲ್ಲಿ ಮಹಿಳಾ ಸಂಸದೆ ಮತ್ತು ಅವರ ಪತಿ ಸಾವನ್ನಪ್ಪಿದ್ದು, ಇನ್ನೊಬ್ಬ ಸಂಸದ ಮತ್ತು ಅವರ ಪತ್ನಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಗುಂಡು ಹಾರಿಸಿದ ವ್ಯಕ್ತಿ ಪರಾರಿಯಾಗಿದ್ದಾನೆ ಮತ್ತು ಅವನು ಶಸ್ತ್ರಸಜ್ಜಿತ ಪೊಲೀಸ್ ಅಧಿಕಾರಿಯ ವೇಷದಲ್ಲಿದ್ದನು. ಅವನ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ. ಈ ವಾಹನದಲ್ಲಿ ಒಂದು ಯಾದಿ ಸಿಕ್ಕಿದ್ದು, ಅದರಲ್ಲಿ ಮೆಲಿಸಾ ಹಾರ್ಟ್ಮನ್ ಮತ್ತು ಜಾನ್ ಹಾಫ್ಮನ್ ಸೇರಿದಂತೆ ಅನೇಕ ಸಂಸದರ ಹೆಸರುಗಳಿವೆ. ಈ ಯಾದಿಯ ಪ್ರಕಾರ, ಅವನು ಸಂಸದರನ್ನು ಗುರಿ ಮಾಡಿರುವ ಸಾಧ್ಯತೆಯಿದೆ ಎಂದು ಆತಂಕ ವ್ಯಕ್ತಪಡಿಸಲಾಗಿದೆ. ಯಾದಿಯಲ್ಲಿರುವ ಸಂಸದರ ಭದ್ರತೆಯನ್ನು ಹೆಚ್ಚಿಸಲಾಗಿದೆ.
2 Democratic MPs shot in their house in Minnesota, U.S.
A female MP and her husband died while another MP and his wife were injured in the attack.
A list with a few more MPs on the hit list was procured from the attacker's car. pic.twitter.com/RgDYToIYOG
— Sanatan Prabhat (@SanatanPrabhat) June 15, 2025
1. ಮೊದಲ ಘಟನೆಯಲ್ಲಿ ಮೆಲಿಸಾ ಹಾರ್ಟ್ಮನ್ ಮತ್ತು ಅವರ ಪತಿ ಮಾರ್ಕ್ ಮೃತಪಟ್ಟರೆ, ಎರಡನೇ ಘಟನೆಯಲ್ಲಿ ಜಾನ್ ಹಾಫ್ಮನ್ ಮತ್ತು ಅವರ ಪತ್ನಿ ಯವೆಟ್ ಇವರಿಗೆ ಹಲವು ಗುಂಡುಗಳು ತಗುಲಿವೆ. ಇಬ್ಬರೂ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
2. ಮಿನೆಸೋಟಾದ ಗವರ್ನರ್ ಟಿಮ್ ವಾಲ್ಜ್ ಅವರು, ಇಬ್ಬರು ಸಂಸದರ ಮೇಲಿನ ಆಕ್ರಮಣ ರಾಜಕೀಯ ಪ್ರೇರಿತ ಎಂದು ತೋರುತ್ತಿದೆ ಎಂದು ಹೇಳಿದ್ದಾರೆ. ಮೆಲಿಸಾ ಉತ್ತಮ ಸಮಾಜ ಸೇವಕಿಯಾಗಿದ್ದರು. ಅವರ ಸ್ಥಾನವನ್ನು ಯಾರೂ ತುಂಬಲು ಸಾಧ್ಯವಿಲ್ಲ ಎಂದೂ ಅವರು ತಿಳಿಸಿದ್ದಾರೆ.
ಶ್ರೀನಗರದಲ್ಲಿ ಮಾದಕ ಪದಾರ್ಥ ಸಾಗಾಟಗಾರ ಶೇಖ್ ತಸದುಕ್ನ ಸರಕಾರಿ ಭೂಮಿಯ ಮೇಲಿನ ಅಕ್ರಮ 3 ಅಂತಸ್ತಿನ ಕಟ್ಟಡ ನೆಲಸಮ ! : Srinagar Drug Peddler House Demolished
ಪ್ರಧಾನಿ ಮೋದಿ ನನಗೆ ತುಂಬಾ ಇಷ್ಟ, ಅವರು ನನ್ನ ಒಳ್ಳೆಯ ಸ್ನೇಹಿತ ! : Donald Trump
ಭಾರತವು ಬಲವಂತವಾಗಿ ನುಸುಳುಕೋರರನ್ನು ಬಾಂಗ್ಲಾದೇಶಕ್ಕೆ ತಳ್ಳುತ್ತಿದೆ ! – ಬಾಂಗ್ಲಾದೇಶದ ಆರೋಪ : Bangladesh Allegation
ಬದಾಯೂ (ಉತ್ತರ ಪ್ರದೇಶ) ಇಲ್ಲಿ ಮುಸ್ಲಿಂ ಅಧಿಕಾರಿಯ ಧಾರ್ಮಿಕ ಕಿರುಕುಳದಿಂದಾಗಿ ಹಿಂದೂ ಪೊಲೀಸ್ ಇನ್ಸ್ಪೆಕ್ಟರ್ ಆತ್ಮಹತ್ಯೆ ! : Hindu Police Suicide
ಕುತ್ತಿಗೆಯಲ್ಲಿದ್ದ ಆಭರಣಗಳನ್ನು ಕದಿಯುತ್ತಿದ್ದ ಕಾಮಿಲ್ ಮತ್ತು ಅಹ್ಮದ್ ಬಂಧನ !
ಅಮೆರಿಕದ ಸಂಸತ್ತಿನಲ್ಲಿ ಇರಾನ್ ವಿರುದ್ಧದ ಯುದ್ಧ ನಿಲ್ಲಿಸುವ ಪ್ರಸ್ತಾವನೆ ಅಂಗೀಕಾರ