ಭದ್ರಕ್ (ಒಡಿಶಾ): ಮುಸ್ಲಿಂ ಗೋಕಳ್ಳರ ದಾಳಿಯಿಂದ ಹಿಂದೂ ಗೋರಕ್ಷಕ ಸಾವು

  • 12 ದಿನಗಳ ಹಿಂದೆ ನಡೆದ ದಾಳಿ

  • ಹಿಂದೂಗಳಲ್ಲಿ ಆಕ್ರೋಶ; ಇಂಟರ್ನೆಟ್ ಸೇವೆ ಸ್ಥಗಿತ

  • ಬಿಜೆಪಿ ಸರಕಾರದಿಂದ ₹10 ಲಕ್ಷ ಪರಿಹಾರ

ಭದ್ರಕ್ (ಒಡಿಶಾ) – ಮುಸ್ಲಿಂ ಗೋಕಳ್ಳರು ನಡೆಸಿದ ದಾಳಿಯಲ್ಲಿ ಹಿಂದೂ ಗೋರಕ್ಷಕ ಸಂತೋಷ ಪರಿಡಾ ಎಂಬವರು ಜೂನ್ 11 ರಂದು ನಿಧನರಾದರು. ಕೆಲವು ದಿನಗಳ ಹಿಂದೆ ಗೋಕಳ್ಳರ ಗುಂಪೊಂದು ಪರಿಡಾ ಅವರ ಮೇಲೆ ದಾಳಿ ಮಾಡಿತ್ತು. ಈ ದಾಳಿಯಲ್ಲಿ ಅವರು ಗಂಭೀರವಾಗಿ ಗಾಯಗೊಂಡಿದ್ದರು. ಮೇ 20 ರಿಂದ ಆಸ್ಪತ್ರೆಯಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಜೂನ್ 11 ರಂದು ಅವರು ಸಾವನ್ನಪ್ಪಿದರು. ಪರಿಡಾ ಅವರು ಭದ್ರಕ್ ನ ತಿಹಿದಿ ಗ್ರಾಮದ ನಿವಾಸಿಯಾಗಿದ್ದರು.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು 12 ಜನರನ್ನು ಬಂಧಿಸಿದ್ದು, ಪರಿಸ್ಥಿತಿ ಕೈಮೀರಿ ಹೋಗದಂತೆ ತಡೆಯಲು ಜೂನ್ 12, 2025 ರಿಂದ ಭದ್ರಕ್ ಜಿಲ್ಲೆಯಲ್ಲಿ ಇಂಟರ್ನೆಟ್ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ.

ಭದ್ರಕ್ ದಲ್ಲಿ ಹೆಚ್ಚುವರಿ ಪೊಲೀಸ್ ಪಡೆಯನ್ನು ನಿಯೋಜಿಸಲಾಗಿದೆ. ರಾಜ್ಯದ ಮುಖ್ಯಮಂತ್ರಿ ಮೋಹನ ಚರಣ ಮಾಂಝಿ ಅವರು ಈ ಘಟನೆಯನ್ನು ಗಮನಿಸಿದ್ದು, ಸಂತ್ರಸ್ತ ಕುಟುಂಬಕ್ಕೆ ₹10 ಲಕ್ಷ ಪರಿಹಾರ ಘೋಷಿಸಿದ್ದಾರೆ. ಈ ಪ್ರಕರಣದ ಬಳಿಕ ಕಠಿಣ ಕ್ರಮ ಕೈಗೊಳ್ಳುವುದಾಗಿ ಅಲ್ಲಿನ ಸರಕಾರ ಭರವಸೆ ನೀಡಿದೆ.

ಸಂಪಾದಕೀಯ ನಿಲುವು

ಗೋವುಗಳ ಕಳ್ಳಸಾಗಣೆಯನ್ನು ತಡೆಯುವುದು ಸರಕಾರದ ಕೆಲಸವಾಗಿರುವಾಗ, ಹಿಂದೂ ಕಾರ್ಯಕರ್ತರು ಅದನ್ನು ಮಾಡುತ್ತಿದ್ದಾರೆ ಮತ್ತು ಹಲವು ಬಾರಿ ತಮ್ಮ ಪ್ರಾಣವನ್ನೇ ಕಳೆದುಕೊಳ್ಳುತ್ತಾರೆ. ಆದರೂ, ಪೊಲೀಸರು ಮತ್ತು ಸರಕಾರಕ್ಕೆ ಇದರ ಬಗ್ಗೆ ಯಾವುದೇ ಕಾಳಜಿ ಇರುವುದಿಲ್ಲ. ಹಾಗಾಗಿ, ಗೋವುಗಳ ಕಳ್ಳಸಾಗಣೆಯಾದರೆ, ಆ ಪ್ರದೇಶದ ಸಂಬಂಧಪಟ್ಟ ಪೊಲೀಸ್ ಅಧಿಕಾರಿಯನ್ನು ವಜಾಗೊಳಿಸಿ ಜೈಲಿಗೆ ಹಾಕುವ ಕಾನೂನನ್ನು ಜಾರಿಗೆ ತರಬೇಕಾದ ಅವಶ್ಯಕತೆಯಿದೆ!