ನಾಗರಿಕರಿಂದ ಈ ನಿರ್ಧಾರಕ್ಕೆ ವಿರೋಧ

ರಬತ್ (ಮೊರಾಕ್ಕೊ) – ಆಫ್ರಿಕಾ ಖಂಡದ ಇಸ್ಲಾಮಿಕ್ ರಾಷ್ಟ್ರ ಮೊರಾಕ್ಕೊದಲ್ಲಿ ಬಕ್ರೀದ್ ಹಬ್ಬದಂದು ಕುರಿಗಳನ್ನು ಬಲಿ ನೀಡುವುದನ್ನು ನಿಷೇಧಿಸಲಾಗಿದೆ. ಕಳೆದ 6 ವರ್ಷಗಳಿಂದ ದೇಶದಲ್ಲಿ ತೀವ್ರ ಬರಗಾಲವಿರುವ ಕಾರಣ, ರಾಜ ಮೊಹಮ್ಮದ್ (ಆರನೇ) ಬಕ್ರೀದ್ ಹಬ್ಬದಂದು ಪ್ರಾಣಿ ಬಲಿಯನ್ನು ಮುಂದೂಡುವ ನಿರ್ಧಾರ ಕೈಗೊಂಡಿದ್ದಾರೆ. ಮೊರಾಕ್ಕೊದ ಜನರು ಈ ನಿರ್ಧಾರವನ್ನು ವಿರೋಧಿಸುತ್ತಿದ್ದಾರೆ. ಈ ನಡುವೆ, ಈ ನಿರ್ಧಾರದಿಂದ ‘ಧಾರ್ಮಿಕ ವಿಧಿಗಳನ್ನು ನಿಲ್ಲಿಸಲು ಸರಕಾರ ಅಥವಾ ರಾಜನಿಗೆ ಅಧಿಕಾರ ಇದೆಯೇ ಅಥವಾ ಇಲ್ಲವೇ?’ ಎಂಬ ಬಗ್ಗೆಯೂ ಚರ್ಚೆ ನಡೆಯುತ್ತಿದೆ. ಸರಕಾರದ ಆದೇಶದ ನಂತರ, ಬಲಿ ನೀಡಲು ತರಲಾಗಿದ್ದ ಕುರಿಗಳನ್ನು ಅಧಿಕಾರಿಗಳು ವಶಪಡಿಸಿಕೊಳ್ಳುತ್ತಿದ್ದಾರೆ. ಇದರಿಂದ ಸಿಟ್ಟಿಗೆದ್ದ ಅಲ್ಲಿನ ಜನರು ರಸ್ತೆಗೆ ಇಳಿದು ಪ್ರತಿಭಟನೆ ನಡೆಸುತ್ತಿದ್ದಾರೆ.
ಬಾಂಗ್ಲಾದೇಶದಲ್ಲಿ ಕಳೆದ ೫ ತಿಂಗಳಲ್ಲಿ ಹಿಂದೂಗಳ ವಿರುದ್ಧ ೬೪೫ ಅಪರಾಧಗಳು!
೧೦ ಸಾವಿರದಿಂದ ೧ ಲಕ್ಷ ಜನರು ಸಾವನ್ನಪ್ಪಿರುವ ಸಾಧ್ಯತೆ : Venezuela Earthquake
ಪಾಕಿಸ್ತಾನದ ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ಹತ್ಯೆಗೆ ‘ಮೊಸಾದ್’ ಸಂಚು ರೂಪಿಸಿತ್ತು!
ರಸ್ತೆಯಲ್ಲಿ ನಮಾಜ್ ಮತ್ತು ಅಜಾನ್ ನಿಷೇಧಿಸುವ ಚಿಂತನೆಯಲ್ಲಿ ಡೆನ್ಮಾರ್ಕ್ ಸರಕಾರ!
ಪಾಕಿಸ್ತಾನವನ್ನು ಶ್ಲಾಘಿಸಿದ ಅಮೆರಿಕದ ಉಪಾಧ್ಯಕ್ಷರ ವಿರುದ್ಧ ಅವರದ್ದೇ ಪಕ್ಷದ ಸಂಸದರು ಆಕ್ರೋಶ!
ಸ್ವದೇಶವೇ ಸರ್ವಸ್ವ !