|

ಬರೇಲಿ (ಉತ್ತರಪ್ರದೇಶ) – ಕಳೆದ ಒಂದು ವರ್ಷಗಳಿಂದ ಆಧಾರ ಕಾರ್ಡ್, ಪ್ಯಾನ್ ಕಾರ್ಡ್, ನಿವಾಸ ಪ್ರಮಾಣ ಪತ್ರ, ಜಾತಿ ಮತ್ತು ಆದಾಯ ಪ್ರಮಾಣ ಪತ್ರ ತಯಾರಿಸಿಕೊಡುತ್ತಿದ್ದ ಮಹಮ್ಮದ್ ಫಾಹಿಮ್ ಮತ್ತು ಅವನ ಜೊತೆಗಾರ ಝಿಯಾವುಲ್ ಮುಸ್ತಫ ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ. ಲೋಕಕಲ್ಯಾಣ ಕೇಂದ್ರಗಳ ಮೇಲೆ ದಾಳಿ ನಡೆಸಿದ ಪೊಲೀಸರಿಗೆ ನಕಲಿ ದಾಖಲೆಗಳು ದೊರೆತವು. ಉತ್ತರಪ್ರದೇಶ, ದೆಹಲಿ, ಬಿಹಾರ ಮತ್ತು ಜಾರ್ಖಂಡ್ ನಲ್ಲಿರುವ ಜನರ ನಕಲಿ ದಾಖಲೆಗಳು ಈ ಇಬ್ಬರ ಬಳಿ ದೊರೆತಿದೆ. ಪೊಲೀಸ್ ಅಧಿಕಾರಿ ಮುಕೇಶ ಚಂದ್ರ ಮಿಶ್ರ ಅವರು ಈ ಬಗ್ಗೆ ಮಾಹಿತಿ ನೀಡುತ್ತಾ, ಈ ಇಬ್ಬರು ಆರೋಪಿಗಳು ಕಳೆದ ೧ ವರ್ಷಗಳಿಂದ ನಕಲಿ ದಾಖಲೆಗಳನ್ನು ತಯಾರಿಸುತ್ತಿದ್ದರು ಎಂದು ತಿಳಿಸಿದರು.
೧.ಫಹಿಮ್ ಎಂಬವನು ಉತ್ತರ ಪ್ರದೇಶ ಗ್ರಾಮೀಣ ಬ್ಯಾಂಕಿನಲ್ಲಿ ಆಧಾರ್ ಕಾರ್ಡ್ ಅಪ್ಡೇಟ್ ಮಾಡುವ ಕೆಲಸ ಮಾಡುತ್ತಿದ್ದನು ; ಆದರೆ ಅವನು ಜನರಿಂದ ಹೆಚ್ಚು ಹಣ ಪಡೆದು ಕೆಲಸ ಮಾಡುತ್ತಾನೆ, ಎಂದು ದೂರುಗಳು ಬಂದ ನಂತರ ಬ್ಯಾಂಕ್ ನ ಹಿರಿಯರು ಅವನನ್ನು ಕೆಲಸದಿಂದ ವಜಾ ಗೊಳಿಸಿದರು.
೨.ಆ ನಂತರ ೨೦೨೪ ರಲ್ಲಿ ಅವನು ತನ್ನ ಗ್ರಾಮದಲ್ಲಿ ‘ಅಜರಿ ಜನ ಕಲ್ಯಾಣ ಕೇಂದ್ರ ‘ ಮತ್ತು ‘ ಆಧಾರ ಕೇಂದ್ರ ‘ ತೆರೆದನು. ಅಲ್ಲಿ ಅವನು ಝಿಯಾವುಲ್ ಮುಸ್ತಫಾ ಎಂಬವನ ಜೊತೆಗೆ ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ಮತದಾನ ಗುರುತಿನ ಚೀಟಿ, ನಿವಾಸ ಪ್ರಮಾಣ ಪತ್ರ, ಜಾತಿ ಪ್ರಮಾಣ ಪತ್ರ, ಹೈಸ್ಕೂಲ್ ಆಫ್ ಯುಪಿ ಬೋರ್ಡ್ ನ ನಕಲಿ ಮಾರ್ಕ್ಸ್ ಮುಂತಾದ ದಾಖಲೆಗಳು ತಯಾರಿಸುತ್ತಿದ್ದನು. ಇವರಿಬ್ಬರೂ ಕೇವಲ ೯೦೦ ರೂಪಾಯಿ ಪಡೆದು ನಕಲಿ ದಾಖಲೆಗಳನ್ನು ತಯಾರಿಸಿ ಕೊಡುತ್ತಿದ್ದರು.
೩. ನಕಲಿ ದಾಖಲೆಗಳು ತಯಾರಿಸಿ ಈ ತಂಡ ಇಲ್ಲಿಯವರೆಗೆ ಕೋಟ್ಯಾಂತರ ರೂಪಾಯಿ ಸಂಪಾದಿಸಿದೆ.
ಸಂಪಾದಕೀಯ ನಿಲುವು
|
ತಮಿಳುನಾಡು – ಗೋಹತ್ಯೆ ಮಾಡುವವರನ್ನು ಬೆಂಬಲಿಸುವ ಮುಸ್ಲಿಂ ಸಂಘಟನೆಗಳ ವಿರುದ್ಧ ಹಿಂದುತ್ವನಿಷ್ಠರ ಆಕ್ರೋಶ!
ಜಂತರ್ ಮಂತರ್: ೨೩ ದಿನಗಳಿಂದ ನಡೆಯುತ್ತಿದ್ದ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಅಂತ್ಯ
ಮಧ್ಯಪ್ರದೇಶದ ಸಚಿವ ಸಂಪುಟದಿಂದ ಸಮಾನ ನಾಗರಿಕ ಸಂಹಿತೆಗೆ ಅನುಮೋದನೆ
೧೨ ವರ್ಷಗಳ ನಂತರ ಎಲ್ಲಾ ಆರೋಪಿಗಳನ್ನು ಪಾಕಿಸ್ತಾನದ ಸರ್ವೋಚ್ಚ ನ್ಯಾಯಾಲಯದಿಂದ ಖುಲಾಸೆ!
ತ್ರಿಪುರಾ ಡಿಜಿಪಿ ಅನುರಾಗ್ ಧನಖಡ್ ಮೃತದೇಹ ಪತ್ತೆ : Anurag Dhankar Death
ಆಗಿನ ಧಾರ್ಮಿಕ ದತ್ತಿ ಇಲಾಖೆಯ ನಿರೀಕ್ಷಕಿ ರಾಗಿಣಿ ಖಡ್ಕೆ ಸೇರಿದಂತೆ ಗುತ್ತಿಗೆದಾರನ ವಿರುದ್ಧ ದೂರು ದಾಖಲು !