ನಟ ಕಮಲ್ ಹಾಸನ್ ಅವರ ವಿವಾದಾತ್ಮಕ ಹೇಳಿಕೆಗೆ ಕರ್ನಾಟಕದಲ್ಲಿ ಭಾರಿ ವಿರೋಧ

ಚೆನ್ನೈ (ತಮಿಳುನಾಡು) – ಹಿರಿಯ ಚಲನಚಿತ್ರ ನಟ ಮತ್ತು ‘ಮಕ್ಕಳ ನಿಧಿ ಮಾಯೆಮ್’ (ಜನರಿಗೆ ನ್ಯಾಯ ನೀಡುವ ಕೇಂದ್ರ) ರಾಜಕೀಯ ಪಕ್ಷದ ಸಂಸ್ಥಾಪಕ ಕಮಲ್ ಹಾಸನ್ ಅವರ ‘ಥಗ್ ಲೈಫ್’ ಚಲನಚಿತ್ರ ಬಿಡುಗಡೆಯಾಗಲಿದೆ. ಆ ಹಿನ್ನೆಲೆಯಲ್ಲಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಕನ್ನಡ ನಟ ಶಿವರಾಜಕುಮಾರ ಅವರನ್ನು ಉದ್ದೇಶಿಸಿ ಕಮಲ್ ಹಾಸನ್ ಅವರು ‘ಕನ್ನಡ ಭಾಷೆಯ ಮೂಲ ತಮಿಳು ಭಾಷೆಯಿಂದ ಬಂದಿದೆ’ ಎಂದು ಹೇಳಿಕೆ ನೀಡಿದರು. ಈ ಹೇಳಿಕೆಯಿಂದ ಕರ್ನಾಟಕದಲ್ಲಿ ದೊಡ್ಡ ಪ್ರಮಾಣದಲ್ಲಿ ಪ್ರತಿಭಟನೆಗಳು ನಡೆದಿವೆ. ಅವರ ಈ ಹೇಳಿಕೆಗೆ ಕನ್ನಡಪರ ಸಂಘಟನೆಗಳು ಮತ್ತು ಕನ್ನಡ ನಾಯಕರು ತೀವ್ರ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.
1. ‘ಕನ್ನಡ ರಕ್ಷಣಾ ವೇದಿಕೆ’ಯಂತಹ ಕನ್ನಡಪರ ಸಂಘಟನೆಗಳು ಕಮಲ್ ಹಾಸನ್ ಅವರ ಹೇಳಿಕೆಯನ್ನು ಖಂಡಿಸಿವೆ. ಕನ್ನಡಪರರು ಬೆಂಗಳೂರಿನಲ್ಲಿ ‘ಥಗ್ ಲೈಫ್’ ಚಲನಚಿತ್ರದ ಫಲಕಗಳನ್ನು ಹರಿದು ಹಾಕಿದ್ದಾರೆ.
2. ಕನ್ನಡ ರಕ್ಷಣಾ ವೇದಿಕೆ ನಾಯಕ ಪ್ರವೀಣ ಶೆಟ್ಟಿ ಮಾತನಾಡಿ, “ನೀವು ಕರ್ನಾಟಕದಲ್ಲಿ ವ್ಯಾಪಾರ ಮಾಡಬೇಕಿದ್ದರೆ, ಇಂತಹ ಅಪಮಾನಕರ ಹೇಳಿಕೆಗಳನ್ನು ನೀಡಬಾರದು ಎಂದು ನಾವು ನಿಮಗೆ ಎಚ್ಚರಿಕೆ ನೀಡುತ್ತೇವೆ. ಕರ್ನಾಟಕದಲ್ಲಿ ನಿಮ್ಮ ಚಲನಚಿತ್ರವನ್ನು ನಿಷೇಧಿಸಲಾಗುವುದು ಎಂದು ನಾವು ನೇರ ಎಚ್ಚರಿಕೆ ನೀಡುತ್ತೇವೆ” ಎಂದವರು ಕಮಲ್ ಹಾಸನ್ ಅವರಿಗೆ ಖಡಕ್ ಆಗಿ ಪ್ರತ್ಯುತ್ತರ ನೀಡಿದರು.
ಸಂಪಾದಕೀಯ ನಿಲುವು
|
‘ಡಾಬರ್’ ಕಂಪನಿಯ ಮೋಸಂಬಿ ಜ್ಯೂಸ್ ಪ್ಯಾಕ್ ನಲ್ಲಿ ಕಪ್ಪು ಪಾಚಿ !
ರೈಲ್ವೆಯ ವಾತಾನುಕೂಲಿತ ಬೋಗಿಗಳಿಂದ ಚಾದರ, ಹೊದಿಕೆ ಮತ್ತು ಟವೆಲ್ ಕಳ್ಳತನದ ಘಟನೆಗಳಲ್ಲಿ ಏರಿಕೆ!
ಇಂಗ್ಲಿಷ್ ಭಾಷೆಯನ್ನು ಭಾರತದ ಸ್ಥಳೀಯ ಭಾಷೆ ಎಂದು ಪರಿಗಣಿಸಬಹುದೇ? – ಸುಪ್ರೀಂ ಕೋರ್ಟ್ ಪ್ರಶ್ನೆ
ನಮ್ಮ ಮತ್ತು ಭಾರತದ ಡಿ.ಎನ್.ಎ. ಒಂದೇ! – Afghanistan Minister
ಹಿಂದೂಗಳ ತೀವ್ರ ವಿರೋಧದ ನಂತರ ಕಲಾವಿದೆಯಿಂದ ಕ್ಷಮೆಯಾಚನೆ!
ಹಡಪ್ಸರ್ನಲ್ಲಿ ಹಿಂದುತ್ವನಿಷ್ಠ ಕಾರ್ಯಕರ್ತನ ಮೇಲೆ ಸಾಹಿಲ್ ಶೇಖ್ ಮತ್ತು ಆತನ ಗ್ಯಾಂಗ್ನಿಂದ ಹಿಂಸಾತ್ಮಕ ಹಲ್ಲೆ!