ಸ್ವಾತಂತ್ರ್ಯವೀರ ಸಾವರ್ಕರ್ ಅವರ ಮೊಮ್ಮಗ ಮತ್ತು ಮೊಮ್ಮಗಳು ಪ್ರಶಸ್ತಿ ಸ್ವೀಕರಿಸಿದರು!

ಮುಂಬಯಿ – ಕವಿ ಮನಸ್ಸಿನ ಮಹಾನ್ ಯೋಧ ಛತ್ರಪತಿ ಸಂಭಾಜಿ ಮಹಾರಾಜರ ಹೆಸರಿನಲ್ಲಿ ಈ ವರ್ಷದಿಂದ ಸಾಂಸ್ಕೃತಿಕ ಇಲಾಖೆಯಿಂದ ನೀಡಲಾಗುವ ‘ರಾಜ್ಯ ಪ್ರೇರಣಾಗೀತೆ ಪ್ರಶಸ್ತಿ’ಯನ್ನು ಮೇ 27 ರಂದು ವರ್ಷಾ ನಿವಾಸದಲ್ಲಿ ಸ್ವಾತಂತ್ರ್ಯವೀರ ವಿನಾಯಕ ದಾಮೋದರ ಸಾವರ್ಕರ್ ಅವರ ‘ಅನಾದಿ ಮೀ ಅನಂತ ಮೀ…’ ಗೀತೆಗೆ ಪ್ರದಾನ ಮಾಡಲಾಯಿತು. ದಾದರ್‌ನ ಸ್ವಾತಂತ್ರ್ಯವೀರ ಸಾವರ್ಕರ್ ರಾಷ್ಟ್ರೀಯ ಸ್ಮಾರಕಕ್ಕೆ ಸಂದ ಈ ಪ್ರಶಸ್ತಿಯನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಹಸ್ತದಿಂದ ಸ್ವಾತಂತ್ರ್ಯವೀರ ಸಾವರ್ಕರ್ ಅವರ ಮೊಮ್ಮಗ ರಣಜಿತ್ ಸಾವರ್ಕರ್ ಮತ್ತು ಮೊಮ್ಮಗಳು ಅಸಿಲತಾ ಸಾವರ್ಕರ್ ರಾಜೇ ಅವರು ಸ್ವೀಕರಿಸಿದರು. ಪ್ರಶಸ್ತಿಯು 2 ಲಕ್ಷ ರೂಪಾಯಿಗಳ ಚೆಕ್ ಮತ್ತು ಸ್ಮರಣಿಕೆ ಒಳಗೊಂಡಿದೆ.
ಈ ಸಂದರ್ಭದಲ್ಲಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, ಉಪಮುಖ್ಯಮಂತ್ರಿ ಏಕನಾಥ್ ಶಿಂದೆ, ಸಾಂಸ್ಕೃತಿಕ ಕಾರ್ಯ ಸಚಿವ ವಕೀಲ ಆಶಿಶ ಶೆಲಾರ್, ಮಾರುಕಟ್ಟೆ ಮತ್ತು ರಾಜ್ಯ ಶಿಷ್ಟಾಚಾರ ಸಚಿವ ಜಯಕುಮಾರ ರಾವಲ್, ಶಾಸಕ ಸಂಜಯ ಉಪಾಧ್ಯಾಯ, ಸಾಂಸ್ಕೃತಿಕ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ವಿಕಾಸ ಖಾರ್ಗೆ ಹಾಗೂ ಸ್ವಾತಂತ್ರ್ಯವೀರ ಸಾವರ್ಕರ್ ರಾಷ್ಟ್ರೀಯ ಸ್ಮಾರಕದ ಕೋಶಾಧ್ಯಕ್ಷೆ ಶ್ರೀಮತಿ ಮಂಜರಿ ಮರಾಠೆ, ಕಾರ್ಯದರ್ಶಿ ರಾಜೇಂದ್ರ ವರಾಡ್ಕರ್, ಸಹಕಾರ್ಯದರ್ಶಿ ಸ್ವಪ್ನಿಲ್ ಸಾವರ್ಕರ್, ಸ್ಮಾರಕದ ತಾತ್ಕಾಲಿಕ ಟ್ರಸ್ಟಿ ಅವಿನಾಶ ಧರ್ಮಾಧಿಕಾರಿ ಮುಂತಾದ ಗಣ್ಯರು ಉಪಸ್ಥಿತರಿದ್ದರು.
1. ಈ ಪ್ರಶಸ್ತಿಯನ್ನು ಛತ್ರಪತಿ ಸಂಭಾಜಿ ಮಹಾರಾಜರ ಪ್ರೇರಣಾದಾಯಕ ಜೀವನದಿಂದ ರೂಪುಗೊಂಡ ರಾಷ್ಟ್ರನಿಷ್ಠೆ, ವೀರತ್ವ ಮತ್ತು ಸಾಂಸ್ಕೃತಿಕ ಹೆಮ್ಮೆಯ ಪ್ರತೀಕವಾಗಿರುವ ಗೀತೆಗಳಿಗೆ ನೀಡಲಾಗುವುದು. ಹೋರಾಟದ, ತೇಜಸ್ವಿ ಮತ್ತು ದೇಶಭಕ್ತಿಯಿಂದ ತುಂಬಿದ ಸೃಜನಾತ್ಮಕ ಅಭಿವ್ಯಕ್ತಿಯನ್ನು ಗೌರವಿಸುವ ಸಾಂಸ್ಕೃತಿಕ ಇಲಾಖೆಯ ಈ ಉಪಕ್ರಮವನ್ನು ನವೀನ ಎಂದು ಪರಿಗಣಿಸಲಾಗಿದೆ.
2. ಸ್ವಾತಂತ್ರ್ಯವೀರ ಸಾವರ್ಕರ್ ಅವರ ಅಮರ ಗೀತೆಗೆ ಸಂದ ಈ ಗೌರವವು ಮಹಾರಾಷ್ಟ್ರದ ಪ್ರೇರಣಾದಾಯಕ ಇತಿಹಾಸವನ್ನು ಸ್ಮರಿಸುವಂತಿದೆ.
3. ಮಹಾರಾಷ್ಟ್ರ ಭೂಷಣ ಮತ್ತು ಇತರ ಗೌರವ ಪ್ರಶಸ್ತಿಗಳನ್ನು ಮಹಾರಾಷ್ಟ್ರ ಸರಕಾರ ನೀಡುವ ರೀತಿಯಲ್ಲಿಯೇ, ಪ್ರತಿ ವರ್ಷ ಒಂದು ಪ್ರೇರಣಾ ಗೀತೆಗೆ ಮಹಾರಾಷ್ಟ್ರ ಸರಕಾರದ ಸಾಂಸ್ಕೃತಿಕ ಕಾರ್ಯ ಇಲಾಖೆಯ ವತಿಯಿಂದ ಈ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುವುದು. ಇದರ ಪ್ರಾರಂಭವನ್ನು ವೀರ ಸಾವರ್ಕರ್ ಅವರ ಗೀತೆಯಿಂದ ಮಾಡಲಾಗಿದೆ.
ಕೇರಳಮ್ದಲ್ಲಿ ‘ಇಸ್ಲಾಂ ಫ್ರೆಂಡ್ಲಿ’ ಜಿಮ್ ಕುರಿತು ವಿವಾದ
ಪುಣೆ ನಗರದಲ್ಲಿ ಮತ್ತೆ ‘ಕಾರ್ಪೊರೇಟ್ ಜಿಹಾದ್’ ಪ್ರಕರಣ
‘ದಾರುಲ್ ಉಲೂಮ್ ದೇವಬಂದ್’ ಭಯೋತ್ಪಾದಕರ ಕೇಂದ್ರವಾಗಿರುವುದರಿಂದ ಅದನ್ನು ನೆಲಸಮ ಮಾಡಿ ! – ಹಿಂದೂ ರಕ್ಷಾ ದಳದ ಬೇಡಿಕೆ
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭಗವಾನ್ ಶಿವನ ರೂಪದಲ್ಲಿ ತೋರಿಸಿದ ‘ವಿಶ್ವವಾಣಿ’ ಪತ್ರಿಕೆ !
‘ಭಂಡಾರ ಎಂದರೆ ಶುದ್ಧ ಅರಿಶಿನ’ ಎಂದು ಘೋಷಿಸುವಂತೆ ಅನ್ನ ಮತ್ತು ಔಷಧ ಆಡಳಿತಕ್ಕೆ (FDA) ಆಗ್ರಹ!
ಪಾನ್ ಮಸಾಲಾ, ಗುಟ್ಕಾ ಮತ್ತು ಕಲಬೆರಕೆ ಆಹಾರ ಪದಾರ್ಥಗಳ ಒಂದೂವರೆ ಕೋಟಿಗೂ ಹೆಚ್ಚು ಮೌಲ್ಯದ ದಾಸ್ತಾನು ವಶ