Pakistan Blames India : ‘ಬಲೂಚಿಸ್ತಾನದಲ್ಲಿ ಬಸ್ ಮೇಲೆ ನಡೆದ ದಾಳಿಯ ಹಿಂದೆ ಭಾರತವಿದೆ !’ ಪಾಕಿಸ್ತಾನದ ಪ್ರಧಾನಿ ಶಾಹಬಾಜ ಶರೀಫರವರ ಆರೋಪ

ಪಾಕಿಸ್ತಾನದ ಪ್ರಧಾನಿ ಶಾಹಬಾಜ ಶರೀಫರವರ ಆರೋಪ

ಪಾಕಿಸ್ತಾನ ಪ್ರಧಾನಿ ಶಹಬಾಜ್ ಷರೀಫ್

ಇಸ್ಲಾಮಾಬಾದ (ಪಾಕಿಸ್ತಾನ) – ಬಲೂಚಿಸ್ತಾನದಲ್ಲಿ ಶಾಲೆಯ ಬಸ್ಸಿನ ಮೇಲೆ ನಡೆದ ಬಾಂಬ್ ಸ್ಫೋಟದಲ್ಲಿ 5 ಜನರು ಸಾವನ್ನಪ್ಪಿದ ಪ್ರಕರಣದಲ್ಲಿ ಪಾಕಿಸ್ತಾನದ ಪ್ರಧಾನಿ ಷಹಬಾಜ ಷರೀಫರವರು ಭಾರತವನ್ನು ಹೊಣೆಗಾರರನ್ನಾಗಿ ಮಾಡಿದ್ದಾರೆ. ಈ ದಾಳಿಯ ಹಿಂದೆ ‘ಫಿತನಾ-ಅಲ್-ಹಿಂದೂಸ್ತಾನ್’ ಎಂಬ ಸಂಘಟನೆಯಿದ್ದು, ಅದು ಭಾರತ-ಬೆಂಬಲಿತ ಭಯೋತ್ಪಾದಕ ಸಂಘಟನೆಯಾಗಿದೆ ಎಂದು ಅವರು ಆರೋಪಿಸಿದ್ದಾರೆ.

ಭಾರತವು ಶರೀಫರವರ ಆರೋಪವನ್ನು ತಳ್ಳಿಹಾಕಿದೆ

ಭಾರತದ ವಿದೇಶಾಂಗ ಸಚಿವಾಲಯವು ಒಂದು ಹೇಳಿಕೆಯನ್ನು ಬಿಡುಗಡೆ ಮಾಡಿ, ಪಾಕಿಸ್ತಾನದ ಆರೋಪಗಳು ಸಂಪೂರ್ಣವಾಗಿ ನಿರಾಧಾರವಾಗಿವೆ. ಭಯೋತ್ಪಾದನೆಯಿಂದ ಗಮನವನ್ನು ಬೇರೆಡೆ ಸೆಳೆಯಲು ಇದು ಪಾಕಿಸ್ತಾನದ ಇನ್ನೊಂದು ತಂತ್ರವಾಗಿದೆ. ‘ಭಯೋತ್ಪಾದನೆಯ ಸಮರ್ಥಕ ಪ್ರತಿಮೆ’ ಮತ್ತು ‘ಆಂತರಿಕ ವೈಫಲ್ಯ’ಗಳಿಂದ ಗಮನವನ್ನು ಬೇರೆಡೆ ಸೆಳೆಯಲು ಪ್ರತಿ ಬಾರಿಯೂ ಭಾರತದ ಮೇಲೆ ದೋಷಾರೋಪ ಮಾಡುವುದು ಪಾಕಿಸ್ತಾನದ ಅಭ್ಯಾಸವಾಗಿದೆ, ಎಂದು ಭಾರತ ಹೇಳಿದೆ.

ಸಂಪಾದಕೀಯ ನಿಲುವು

ಪಾಕಿಸ್ತಾನದಲ್ಲಿ ನಡೆಯುತ್ತಿರುವ ಭಯೋತ್ಪಾದಕ ದಾಳಿಗಳು ಅದರ ಪಾಪದ ಮತ್ತು ತಾನೇ ಬಿತ್ತಿರುವ ಭಯೋತ್ಪಾದನೆಯ ಫಲವಾಗಿದೆ ಮತ್ತು ಅವುಗಳನ್ನು ಅದು ಅನುಭವಿಸಲೇಬೇಕು!