ನ್ಯಾಷನಲ್ ಹೆರಾಲ್ಡ್ ಪ್ರಕರಣ: ಜಾರಿ ನಿರ್ದೇಶನಾಲಯದ ದಾವೆ
ನವದೆಹಲಿ: ಜಾರಿ ನಿರ್ದೇಶನಾಲಯವು (ಇ.ಡಿ.) ಇಲ್ಲಿನ ನ್ಯಾಯಾಲಯಕ್ಕೆ ‘ನ್ಯಾಷನಲ್ ಹೆರಾಲ್ಡ್’ ಪ್ರಕರಣದಲ್ಲಿ ರಾಹುಲ ಗಾಂಧಿ ಮತ್ತು ಸೋನಿಯಾ ಗಾಂಧಿ ಆರ್ಥಿಕ ಹಗರಣಗಳ ಮೂಲಕ 142 ಕೋಟಿ ರೂಪಾಯಿಗಳನ್ನು ಗಳಿಸಿದ್ದಾರೆ ಎಂದು ಮಾಹಿತಿ ನೀಡಿದೆ. ಈ ಕಾರಣದಿಂದಾಗಿ, ಅವರಿಬ್ಬರ ವಿರುದ್ಧ ಆರ್ಥಿಕ ಅಕ್ರಮದ ಪ್ರಕರಣವನ್ನು ದಾಖಲಿಸಲಾಗಿದೆ. ಈ ಪ್ರಕರಣದಲ್ಲಿ ಒಟ್ಟು 7 ಆರೋಪಿಗಳಿದ್ದಾರೆ. ಸ್ಯಾಮ್ ಪಿತ್ರೋಡಾ, ಸುಮನ ದುಬೆ, ಯಂಗ ಇಂಡಿಯನ್, ಡೋಟೆಕ್ಸ್ ಮರ್ಚೆಂಡೈಸ್ ಪ್ರೈ. ಲಿ. ಮತ್ತು ಸುನಿಲ್ ಭಂಡಾರಿ ಈ ಪ್ರಕರಣದ ಸಹ-ಆರೋಪಿಗಳಾಗಿದ್ದಾರೆ.
ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್.ವಿ. ರಾಜು ಅವರು ಮಾತನಾಡಿ, 2023ರಲ್ಲಿ ಇ.ಡಿ. ಯು ‘ನ್ಯಾಷನಲ್ ಹೆರಾಲ್ಡ್’ಗೆ ಸಂಬಂಧಿಸಿದ 751 ಕೋಟಿ 90 ಲಕ್ಷ ರೂಪಾಯಿ ಮೌಲ್ಯದ ಆಸ್ತಿಗಳನ್ನು ಜಪ್ತಿ ಮಾಡಿದಾಗಿನಿಂದ, ಸೋನಿಯಾ ಗಾಂಧಿ ಮತ್ತು ರಾಹುಲ ಗಾಂಧಿ ಆರ್ಥಿಕ ಅಕ್ರಮಗಳಿಂದ ಗಳಿಸಿದ ಹಣದ ಲಾಭವನ್ನು ಪಡೆಯುತ್ತಿದ್ದಾರೆ ಎಂದು ತಿಳಿಸಿದ್ದಾರೆ.