ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಹಸ್ತದಿಂದ ಪ್ರಶಸ್ತಿ ಪ್ರದಾನ!

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ನಗರ, ಮೇ ೧೮ (ವಾರ್ತಾ.) – ಹಿಂದುತ್ವ ಮತ್ತು ರಾಷ್ಟ್ರಹಿತಕ್ಕಾಗಿ ಕಾರ್ಯ ನಿರ್ವಹಿಸಿ ಇತರ ಹಿಂದೂಗಳಿಗೆ ಆದರ್ಶ ನಿರ್ಮಿಸಿದ ೪ ಜನರಿಗೆ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆಯವರು ‘ಹಿಂದೂ ರಾಷ್ಟ್ರ ರತ್ನ’ ಪ್ರಶಸ್ತಿಯನ್ನು ಹಾಗೂ ೧೭ ಜನರಿಗೆ ‘ಸನಾತನ ಧರ್ಮಶ್ರೀ’ ಪ್ರಶಸ್ತಿಯನ್ನು ನೀಡಿ ಗೌರವಿಸಿದರು. ಈ ಕಾರ್ಯಕ್ರಮದಲ್ಲಿ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಆಧ್ಯಾತ್ಮಿಕ ಉತ್ತರಾಧಿಕಾರಿ ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ್ ಮತ್ತು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ ಅವರ ವಂದನೀಯ ಉಪಸ್ಥಿತಿ ಲಭಿಸಿತು.
‘ಹಿಂದೂ ರಾಷ್ಟ್ರ ರತ್ನ’ ಪ್ರಶಸ್ತಿ ಪುರಸ್ಕೃತರು
೧. ಪೂಜ್ಯ ನ್ಯಾಯವಾದಿ ರವೀಂದ್ರ ಘೋಷ್, ಸಂಸ್ಥಾಪಕರು, ಬಾಂಗ್ಲಾದೇಶ ಮೈನಾರಿಟಿ ವಾಚ್, ಬಾಂಗ್ಲಾದೇಶ
೨. ಪೂಜ್ಯ ಕಾಶೀನಾಥ ಕವಟೇಕರ್, ಪಂಚಶಿಲ್ಪಕಾರರು, ಕರ್ನಾಟಕ
೩. ಡಾ. ಸಚ್ಚಿದಾನಂದ ಶೆವಡೆ, ಪ್ರಖ್ಯಾತ ಪ್ರವಚನಕಾರರು, ಮಹಾರಾಷ್ಟ್ರ
೪. ಶ್ರೀ ಗಣೇಶಶಾಸ್ತ್ರಿ ದ್ರಾವಿಡ್
‘ಸನಾತನ ಧರ್ಮಶ್ರೀ’ ಪ್ರಶಸ್ತಿ ಪುರಸ್ಕೃತರು
೧. ಟಿ. ರಾಜಾ ಸಿಂಗ್, ಹಿಂದುತ್ವನಿಷ್ಠ ಶಾಸಕರು, ತೆಲಂಗಾಣ
೨. ಶ್ರೀ. ಪ್ರಮೋದ ಮುತಾಲಿಕ್, ಸಂಸ್ಥಾಪಕರು, ಶ್ರೀರಾಮ ಸೇನೆ
೩. ಶ್ರೀ. ಅರ್ಜುನ್ ಸಂಪತ್, ಸಂಸ್ಥಾಪಕರು, ಹಿಂದೂ ಮಕ್ಕಲ ಕಚ್ಚಿ (ಹಿಂದೂ ಜನತಾ ಪಕ್ಷ)
೪. ಶ್ರೀ. ಉದಯ ಮಾಹುರ್ಕರ್, ಸೇವ್ ಕಲ್ಚರ್ ಸೇವ್ ಭಾರತ್ ಫೌಂಡೇಶನ್, ದೆಹಲಿ
೫. ನ್ಯಾಯವಾದಿ ಅರುಣ ಶ್ಯಾಮ್‌ಜಿ, ಮಾಜಿ ಹೆಚ್ಚುವರಿ ಮಹಾಧಿವಕ್ತರು, ಕರ್ನಾಟಕ
೬. ನ್ಯಾಯವಾದಿ ವಿಷ್ಣು ಶಂಕರ ಜೈನ್, ಸರ್ವೋಚ್ಚ ನ್ಯಾಯಾಲಯ
೭. ಡಾ. ಕೊನರಾಲ್ಡ್ ಎಲ್ಸ್ಟ, ಹಿಂದುತ್ವನಿಷ್ಠ ಲೇಖಕರು, ಬೆಲ್ಜಿಯಂ
೮. ಶ್ರೀ. ಅನಿಲ ಕುಮಾರ್ ಧೀರ್, ಇಂಡಿಯನ್ ನ್ಯಾಷನಲ್ ಟ್ರಸ್ಟ್ ಫಾರ್ ಆರ್ಟ್ ಅಂಡ್ ಕಲ್ಚರಲ್ ಹೆರಿಟೇಜ್, ಒಡಿಶಾ
೯. ಶ್ರೀ. ಸಂಜೀವ ನೆವರ್, ಸಂಸ್ಥಾಪಕರು, ಅಗ್ನಿ ಸಮಾಜ, ದೆಹಲಿ
೧೦. ಶ್ರೀ. ರಾಹುಲ ದಿವಾನ್, ಸಂಸ್ಥಾಪಕರು, ‘ಸರಯು ಟ್ರಸ್ಟ್’, ದೆಹಲಿ
೧೧. ಶ್ರೀ. ನೀರಜ ಅತ್ರಿ, ಲೇಖಕರು ಮತ್ತು ಚಿಂತಕರು, ದೆಹಲಿ
೧೨. ಡಾ. ಸುರೇಶ ಚವ್ಹಾಣ್ಕೆ, ಪ್ರಧಾನ ಸಂಪಾದಕರು, ‘ಸುದರ್ಶನ್’ ಸುದ್ದಿ ವಾಹಿನಿ
೧೩. ರಸ ಆಚಾರ್ಯ ಪೂಜ್ಯ ಧರ್ಮಯಶ್ ಜೀ ಮಹಾರಾಜ್, ಸಂಸ್ಥಾಪಕರು, ಧರ್ಮಸ್ಥಾಪನಂ ಫೌಂಡೇಶನ್ ಮತ್ತು ಪರಮಧಾಮ ಆಶ್ರಮ, ಇಂಡೋನೇಷ್ಯಾ
೧೪. ಪ್ರಬಲ ಪ್ರತಾಪ್ ಸಿಂಗ್ ಜುದೇವ, ಭಾಜಪ, ಛತ್ತೀಸಗಢ
೧೫. ಘನಪಾಠಿ ಆಚಾರ್ಯ ಯೋಗೇಶ್ವರ್ ಬೋರ್ಕರ್, ಗೋವಾ
೧೬. ಕ್ಯಾಪ್ಟನ್ ಪ್ರವೀಣ್ ಚತುರ್ವೇದಿ (ನಿವೃತ್ತ), ಸಂಸ್ಥಾಪಕರು, ಪ್ರಾಚ್ಯಂ
೧೭. ಶ್ರೀ. ಚಕ್ರವರ್ತಿ ಸೂಲಿಬೆಲೆ, ಸಂಸ್ಥಾಪಕ ಅಧ್ಯಕ್ಷರು, ಯುವ ಬ್ರಿಗೇಡ್, ಕರ್ನಾಟಕ
‘ಹಿಂದೂ ರಾಷ್ಟ್ರ ರತ್ನ’ ಮತ್ತು ‘ಸನಾತನ ಧರ್ಮಶ್ರೀ’ ಪ್ರಶಸ್ತಿ ನೀಡುವ ಹಿಂದಿನ ಉದ್ದೇಶ!ಈ ಪ್ರಶಸ್ತಿಗಳನ್ನು ನೀಡುವ ಹಿಂದಿನ ಉದ್ದೇಶವನ್ನು ತಿಳಿಸುತ್ತಾ ಸನಾತನ ಸಂಸ್ಥೆಯ ರಾಷ್ಟ್ರೀಯ ವಕ್ತಾರರಾದ ಶ್ರೀ. ಚೇತನ ರಾಜಹಂಸ್ ಅವರು, ‘ದೇಶದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಕಾರ್ಯ ನಿರ್ವಹಿಸುವವರಿಗೆ ಪದ್ಮಶ್ರೀ, ಪದ್ಮಭೂಷಣ, ಪದ್ಮವಿಭೂಷಣ ಹಾಗೂ ಭಾರತರತ್ನ ಮುಂತಾದ ವಿಶೇಷ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗುತ್ತದೆ; ಆದರೆ ಹಿಂದೂ ಧರ್ಮಜಾಗೃತಿ ಮತ್ತು ಧರ್ಮರಕ್ಷಣೆ ಮಾಡುವವರಿಗೆ ಯಾವುದೇ ಪ್ರಶಸ್ತಿ ನೀಡಲಾಗುವುದಿಲ್ಲ. ಇಂದು ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ೮೩ನೇ ಜನ್ಮದಿನದ ನಿಮಿತ್ತ ಹಿಂದೂ ಧರ್ಮವೀರರಿಗೆ ‘ಹಿಂದೂ ರಾಷ್ಟ್ರ ರತ್ನ’ ಮತ್ತು ‘ಸನಾತನ ಧರ್ಮಶ್ರೀ’ ಪ್ರಶಸ್ತಿ ನೀಡಿ ಗೌರವಿಸುವ ನಿರ್ಧಾರ ತೆಗೆದುಕೊಳ್ಳಲಾಗಿದೆ. ಪ್ರತಿ ವರ್ಷ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಜನ್ಮೋತ್ಸವದ ನಿಮಿತ್ತ ಇಂತಹ ಪ್ರಶಸ್ತಿಗಳನ್ನು ನೀಡಲಾಗುವುದು.’ ಎಂದು ಹೇಳಿದರು. |