India Punished Pakistan : ಭಾರತವು ಪಾಕಿಸ್ತಾನ ಸರಕಾರದ ಕೆನ್ನೆಗೆ ಬಾರಿಸಿದೆ ಮತ್ತು ಪಾಕಿಸ್ತಾನ ಅದನ್ನು ನಿರ್ಲಕ್ಷಿಸುತ್ತಿದೆ !

  • ಪಾಕಿಸ್ತಾನದ ‘ಡಾನ್’ ವೃತ್ತಪತ್ರಿಕೆಯ ಮಾಜಿ ಸಂಪಾದಕರಿಂದ ಪಾಕಿಸ್ತಾನಕ್ಕೆ ಕಪಾಳಮೋಕ್ಷ !

  • ಕದನ ವಿರಾಮಕ್ಕಾಗಿ ಪಾಕಿಸ್ತಾನವೇ ಪ್ರಯತ್ನಿಸುತ್ತಿರುವುದನ್ನು ಬಹಿರಂಗಪಡಿಸಿದೆ !

ಇಸ್ಲಾಮಾಬಾದ್ (ಪಾಕಿಸ್ತಾನ) – ಭಾರತವು ಪಾಕಿಸ್ತಾನದ ವಿರುದ್ಧ ‘ಆಪರೇಷನ್ ಸಿಂದೂರ್’ ಅನ್ನು ನಡೆಸಿ ಪಾಕಿಸ್ತಾನಕ್ಕೆ ವ್ಯಾಪಕ ಹಾನಿಯನ್ನುಂಟುಮಾಡಿದ ನಂತರವೂ, ಪಾಕಿಸ್ತಾನ ಸರಕಾರವು ತಾನು ವಿಜಯಶಾಲಿಯೆಂದು ಹೇಳಿಕೊಂಡು ಸಂಭ್ರಮಾಚರಣೆ ಮಾಡಿತು; ಆದರೆ ಪಾಕಿಸ್ತಾನದ ‘ಡಾನ್’ ವೃತ್ತಪತ್ರಿಕೆಯ ಮಾಜಿ ಸಂಪಾದಕರಾದ ಅಬ್ಬಾಸ್ ನಾಸಿರ್ ಅವರು ‘ಡಾನ್’ನಲ್ಲಿ ಬರೆದ ಲೇಖನದಲ್ಲಿ, ಭಾರತದ ಮೇಲಿನ ವಿಜಯಕ್ಕಾಗಿ ಪಾಕಿಸ್ತಾನದಲ್ಲಿ ಸಂಭ್ರಮ ನಡೆಯುತ್ತಿದೆ; ಆದರೆ ಪಾಕಿಸ್ತಾನ ಸರಕಾರದ ಕೆನ್ನೆಗೆ ಬಿದ್ದ ಏಟನ್ನು ಅದು ನಿರ್ಲಕ್ಷಿಸುತ್ತಿದೆ ಎಂದು ಹೇಳಿದ್ದಾರೆ.

ನಾಸಿರ್ ಅವರು ಈ ಲೇಖನದಲ್ಲಿ,

೧. ಭಾರತದ ‘ಸರ್ಜಿಕಲ್ ಸ್ಟ್ರೈಕ್’ಗಳು ಈ ಹಿಂದೆ ಬಾಲಾಕೋಟ್ ಅಥವಾ ಪಾಕಿಸ್ತಾನ ಆಕ್ರಮಿತ ಕಾಶ್ಮೀರದವರೆಗೆ ಮಾತ್ರ ಸೀಮಿತವಾಗಿದ್ದವು; ಆದರೆ ಈ ಬಾರಿ ದಾಳಿಯು ಪಾಕಿಸ್ತಾನದ ಪಂಜಾಬದಲ್ಲಿ ನಡೆದಿದೆ. ಭಾರತವು ರಫಿಕಿ, ನೂರ್ ಖಾನ್, ಮುರಿದ್ಕೆ ಮುಂತಾದ ಪಾಕಿಸ್ತಾನಿ ಸೇನಾ ನೆಲೆಗಳನ್ನು ಗುರಿಯಾಗಿಸಿಕೊಂಡಿದೆ. ಲಾಹೋರದವರೆಗೂ ಬಂದು ಭಾರತವು ವಾಯು ರಕ್ಷಣಾ ವ್ಯವಸ್ಥೆಯನ್ನು ನಾಶಪಡಿಸಿದೆ.

೨. ಭಾರತದ ದಾಳಿಯ ಮುಂದೆ ಪಾಕಿಸ್ತಾನದ ವಾಯು ರಕ್ಷಣಾ ವ್ಯವಸ್ಥೆಯು ವಿಫಲವಾಗಿದೆ. ಕದನ ವಿರಾಮಕ್ಕಾಗಿ ಪಾಕಿಸ್ತಾನವೇ ಪ್ರಯತ್ನಿಸುತ್ತಿತ್ತು. ಪಾಕಿಸ್ತಾನಿ ಸಚಿವರು ದಾಳಿಯ ಸಮಯದಲ್ಲಿ ನೀಡಿದ ಹೇಳಿಕೆಗಳಿಂದ ಪಾಕಿಸ್ತಾನವು ಮಾನಸಿಕ ಆಘಾತವನ್ನು ಅನುಭವಿಸಿದೆ. ಅಮೆರಿಕದ ಅಧ್ಯಕ್ಷ ಟ್ರಂಪ್ ಕದನ ವಿರಾಮವನ್ನು ಘೋಷಿಸುತ್ತಿದ್ದಂತೆ ವಿದೇಶಾಂಗ ಸಚಿವರು ತಕ್ಷಣ ಪ್ರತಿಕ್ರಿಯಿಸಿದರು. ಇದರಿಂದ ಪಾಕಿಸ್ತಾನಕ್ಕೆ ತಕ್ಷಣವೇ ಕದನ ವಿರಾಮ ಬೇಕಿತ್ತು ಎಂಬ ಸಂದೇಶ ರವಾನೆಯಾಯಿತು.

೩. ಭಾರತವು ಭಯೋತ್ಪಾದನೆಯ ಸೂತ್ರವನ್ನು ವಿಶ್ವಸಂಸ್ಥೆಯವರೆಗೆ ಕೊಂಡೊಯ್ಯಲಿದೆ. ಪಾಕಿಸ್ತಾನಕ್ಕೆ ಇದು ಒಳ್ಳೆಯ ಸಂಕೇತವಲ್ಲ.