ಪಾಕಿಸ್ತಾನದ ಮಾಹಿತಿ ಸಚಿವ ಅತಾವುಲ್ಲ ತರಾರ್ ಅವರ ಹುರುಳಿಲ್ಲದ ದಾವೆ

ಇಸ್ಲಾಮಾಬಾದ (ಪಾಕಿಸ್ತಾನ) – ಪಾಕಿಸ್ತಾನವು ಯುದ್ಧದಲ್ಲಿ ಪ್ರಾಬಲ್ಯ ಸಾಧಿಸಿತ್ತು. ನಾವು ಬಯಸಿದ್ದರೆ ಈ ಯುದ್ಧವನ್ನು ಮುಂದುವರಿಸಬಹುದಿತ್ತು; ಆದರೆ ಕದನ ವಿರಾಮವಾದ್ದರಿಂದ ನಾವು ಅದನ್ನು ನಿಲ್ಲಿಸಿದ್ದೇವೆ. ಭಾರತೀಯ ಸೇನಾ ನೆಲೆಗಳು ಮತ್ತು ಮದ್ದುಗುಂಡುಗಳನ್ನು ಗುರಿಯಾಗಿಸಿದ್ದರಿಂದ ಅಂತಿಮವಾಗಿ ಪಾಕಿಸ್ತಾನ ಗೆದ್ದಿದೆ. ಭಾರತವು ಈಗ ಇದನ್ನು ಸಹಿಸಬಲ್ಲದು ಎಂದು ನನಗೆ ಅನಿಸುತ್ತಿಲ್ಲ ಎಂದು ಪಾಕಿಸ್ತಾನದ ಮಾಹಿತಿ ಸಚಿವ ಅತಾವುಲ್ಲ ತರಾರ್ ಅವರು ಅಮೆರಿಕದ ಸುದ್ದಿ ವಾಹಿನಿ ‘ಸ್ಕೈ ನ್ಯೂಸ್’ಗೆ ನೀಡಿದ ಸಂದರ್ಶನದಲ್ಲಿ ಹುರುಳಿಲ್ಲದ ಹೇಳಿಕೆ ನೀಡಿದ್ದಾರೆ.
ಪಹಲ್ಗಾಮ್ ದಾಳಿಯಲ್ಲಿ ಪಾಕಿಸ್ತಾನದ ಕೈವಾಡವಿಲ್ಲ
ಅತಾವುಲ್ಲ ತರಾರ್ ಅವರು ಮಾತು ಮುಂದುವರೆಸಿ, ಪಹಲ್ಗಾಮ್‌ನಲ್ಲಿ ನಡೆದ ದಾಳಿಯ ಘಟನೆಯನ್ನು ಪಾಕಿಸ್ತಾನದೊಂದಿಗೆ ಜೋಡಿಸುವಲ್ಲಿ ಭಾರತ ಸಂಪೂರ್ಣವಾಗಿ ವಿಫಲವಾಗಿದೆ. ನಮ್ಮ ದೇಶದಲ್ಲಿ ಯಾವುದೇ ಭಯೋತ್ಪಾದಕ ನೆಲೆಗಳಿಲ್ಲ; ಏಕೆಂದರೆ ಪಾಕಿಸ್ತಾನವೇ ಭಯೋತ್ಪಾದನೆಯ ಅತಿದೊಡ್ಡ ಬಲಿಪಶುವಾಗಿದೆ. (ಇದಕ್ಕಿಂತ ದೊಡ್ಡ ಹಾಸ್ಯಾಸ್ಪದ ಸಂಗತಿ ಇನ್ನೊಂದಿಲ್ಲ! ಇಡೀ ಜಗತ್ತಿಗೆ ತಿಳಿದಿದ್ದರೂ, ಅದನ್ನು ನಾಚಿಕೆಯಿಲ್ಲದೆ ನಿರಾಕರಿಸುವ ಕೆಲಸವನ್ನು ಕೇವಲ ಪಾಕಿಸ್ತಾನ ಮಾತ್ರ ಮಾಡಬಲ್ಲದು! – ಸಂಪಾದಕರು)
ಸಿಂಧೂ ಜಲ ಒಪ್ಪಂದವನ್ನು ನಿಲ್ಲಿಸುವುದು ಯುದ್ಧವೆಂದು ಪರಿಗಣಿಸಲಾಗುವುದು!’ – ಪಾಕಿಸ್ತಾನದ ವಿದೇಶಾಂಗ ಸಚಿವರು

ಕದನ ವಿರಾಮದ ನಂತರವೂ ಪಾಕಿಸ್ತಾನದ ವಿದೇಶಾಂಗ ಸಚಿವ ಮಹಮ್ಮದ್ ಇಶಾಕ್ ಡಾರ್ ಅವರು ಮತ್ತೊಮ್ಮೆ ಭಾರತಕ್ಕೆ ಬೆದರಿಕೆ ಹಾಕುತ್ತಾ, ಸಿಂಧೂ ಜಲ ಒಪ್ಪಂದವನ್ನು ನಿಲ್ಲಿಸುವುದು ‘ಆಕ್ಟ್ ಆಫ್ ವಾರ್’ (ಯುದ್ಧದ ಕೃತ್ಯ) ಎಂದು ಪರಿಗಣಿಸಲಾಗುವುದು, ಎಂದು ಹೇಳಿದ್ದಾರೆ. ಅವರು ಅಮೆರಿಕದ ಸುದ್ದಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡುತ್ತಿದ್ದರು.
ಪಾಕಿಸ್ತಾನದಿಂದ 20 ದಿನಗಳಲ್ಲಿ ಭಾರತದ ಮೇಲೆ 15 ಲಕ್ಷ ಸೈಬರ್ ದಾಳಿಗಳು
ಪಾಕಿಸ್ತಾನದ ‘ಹ್ಯಾಕರ್’ಗಳಿಂದ (ಜಾಪತಾಣಗಳನ್ನು ನಿಯಂತ್ರಣ ಪಡೆಯುವವರು) ಏಪ್ರಿಲ್ 22 ರಿಂದ ಇಲ್ಲಿಯವರೆಗೆ ಭಾರತದ ಸರಕಾರಿ ಸಂಕೇತ ಸ್ಥಳಗಳ ಮೇಲೆ 15 ಲಕ್ಷ ಸೈಬರ್ ದಾಳಿಗಳು ನಡೆದಿವೆ ಎಂಬ ಮಾಹಿತಿ ಲಭ್ಯವಾಗಿದೆ. ಇವುಗಳಲ್ಲಿ ಕೇವಲ 150 ದಾಳಿಗಳು ಪರಿಣಾಮ ಬೀರಿದ್ದು ಎಂದು ಹೇಳಲಾಗಿದೆ. ಕೇವಲ ಪಾಕಿಸ್ತಾನದಿಂದ ಮಾತ್ರವಲ್ಲದೆ ಬಾಂಗ್ಲಾದೇಶ ಮತ್ತು ಮಧ್ಯಪ್ರಾಚ್ಯದ ಇಸ್ಲಾಮಿಕ್ ದೇಶಗಳಿಂದಲೂ ಈ ದಾಳಿಗಳನ್ನು ಮಾಡಲಾಗಿದೆ ಮತ್ತು ಇನ್ನೂ ಮಾಡಲಾಗುತ್ತಿದೆ. ಇದರಲ್ಲಿ ಎಪಿಟಿ 36 (ಪಾಕಿಸ್ತಾನ ಮೂಲದ), ಪಾಕಿಸ್ತಾನ್ ಸೈಬರ್ ಫೋರ್ಸ್, ಟೀಮ್ ಇನ್ ಸೇನ್ ಪಿಕೆ, ಮಿಸ್ಟೀರಿಯಸ್ ಬಾಂಗ್ಲಾದೇಶ್, ಇಂಡೋ ಹ್ಯಾಕ್ಸ್ ಸೆಕ್, ಸೈಬರ್ ಗ್ರೂಪ್ ಎಚ್ ಒ ಎಕ್ಸ್ 1337 ಮತ್ತು ನ್ಯಾಷನಲ್ ಸೈಬರ್ ಕ್ರೂ ಈ ಸೈಬರ್ ದಾಳಿ ನಡೆಸುವ ಗುಂಪುಗಳು ಸೇರಿವೆ.
ಪಾಕಿಸ್ತಾನದ 11 ಸೈನಿಕರು ಹತರಾಗಿದ್ದಾರೆ
ಭಾರತವು ಪಾಕಿಸ್ತಾನದಲ್ಲಿ ನಡೆಸಿದ ‘ಆಪರೇಷನ್ ಸಿಂದೂರ್’ನಲ್ಲಿ ಪಾಕಿಸ್ತಾನದ 35 ರಿಂದ 40 ಸೈನಿಕರು ಹತರಾಗಿದ್ದಾರೆ ಎಂದು ಭಾರತೀಯ ರಕ್ಷಣಾ ಪಡೆಗಳು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದವು. ಈಗ ಪಾಕಿಸ್ತಾನದ ಸೇನೆಯು ಈ ದಾಳಿಯಲ್ಲಿ ಕೇವಲ 11 ಸೈನಿಕರು ಹತರಾಗಿದ್ದಾರೆ ಎಂದು ಮಾಹಿತಿ ನೀಡಿದೆ. ಅದೇ ಸಮಯದಲ್ಲಿ ಪಾಕಿಸ್ತಾನದ ಡೈಲಿ ‘ಡಾನ್’ ಪತ್ರಿಕೆಯ ವರದಿಯ ಪ್ರಕಾರ ಪಾಕಿಸ್ತಾನದ 40 ಸೈನಿಕರು ಹತರಾಗಿದ್ದಾರೆ ಮತ್ತು 78 ಸೈನಿಕರು ಗಾಯಗೊಂಡಿದ್ದಾರೆ ಎಂದು ಹೇಳಲಾಗಿದೆ. ಹಾಗೆಯೇ 121 ನಾಗರಿಕರು ಗಾಯಗೊಂಡಿದ್ದಾರೆ ಎಂಬ ಮಾಹಿತಿಯನ್ನು ನೀಡಲಾಗಿದೆ. ಹತರಾದ ಸೈನಿಕರ ಕುಟುಂಬಗಳಿಗೆ ಪ್ರಧಾನಿ ಶೆಹಬಾಜ್ ಷರೀಫ್ ಅವರು ತಲಾ 1 ಕೋಟಿ ರೂಪಾಯಿ ಪರಿಹಾರ ಘೋಷಿಸಿದ್ದಾರೆ. ಹಾಗೆಯೇ ಗಾಯಗೊಂಡವರಿಗೆ 10 ರಿಂದ 20 ಲಕ್ಷ ರೂಪಾಯಿಗಳವರೆಗೆ ಪರಿಹಾರ ನೀಡಲಾಗುವುದು.
ಪಾಕಿಸ್ತಾನ ಪ್ರತಿ ವರ್ಷ ಮೇ 10 ರಂದು ಉತ್ಸವ ಆಚರಿಸಲಿದೆ
ಭಾರತದ ಮೇಲೆ ಕಲ್ಪಿತ ವಿಜಯ ಸಾಧಿಸಿದ ನೆನಪಿಗಾಗಿ ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಅವರು ಪ್ರತಿ ವರ್ಷ ಮೇ 10 ರಂದು ಉತ್ಸವ ಆಚರಿಸುವುದಾಗಿ ಘೋಷಿಸಿದ್ದಾರೆ. ಭಾರತದ ವಿರುದ್ಧ ನಡೆಸಿದ ಕಾರ್ಯಾಚರಣೆಯ ಹಿನ್ನೆಲೆಯಲ್ಲಿ ಅವರು ಈ ಘೋಷಣೆ ಮಾಡಿದ್ದಾರೆ.
ಪಾಕಿಸ್ತಾನಕ್ಕೆ ಶಸ್ತ್ರಾಸ್ತ್ರ ಕಳುಹಿಸಿದ ವರದಿ ಸುಳ್ಳು! – ಚೀನಾದ ಹೇಳಿಕೆ
ಚೀನಾದ ರಕ್ಷಣಾ ಸಚಿವಾಲಯದ ಅಧಿಕೃತ ಜಾಲತಾಣದಲ್ಲಿ ಪ್ರಸಾರವಾದ ಹೇಳಿಕೆಯಲ್ಲಿ, ಚೀನಾ ಸರಕು ಸಾಗಣೆ ಹಡಗಿನ ಮೂಲಕ ಪಾಕಿಸ್ತಾನಕ್ಕೆ ಶಸ್ತ್ರಾಸ್ತ್ರಗಳನ್ನು ಕಳುಹಿಸಿದೆ ಎಂಬ ವರದಿ ಸಂಪೂರ್ಣವಾಗಿ ಸುಳ್ಳು ಮತ್ತು ಆಧಾರರಹಿತವಾಗಿದೆ. ಇಂಟರ್ನೆಟ್ ಕಾನೂನಿಗಿಂತ ಮೇಲಲ್ಲ. ಯಾರು ಸೈನ್ಯಕ್ಕೆ ಸಂಬಂಧಿಸಿದ ವದಂತಿಗಳನ್ನು ಹರಡುತ್ತಾರೋ ಅವರು ಕಾನೂನು ಕ್ರಮವನ್ನು ಎದುರಿಸಬೇಕಾಗುತ್ತದೆ ಎಂದು ಹೇಳಿದೆ.
ಚೀನಾ ಎಷ್ಟೇ ಹೇಳಿಕೊಂಡರೂ, ‘ಸ್ಟಾಕ್ ಹೋಮ್ ಇಂಟರ್ ನ್ಯಾಶನಲ್ ಪೀಸ್ ರಿಸರ್ಚ್ ಇನ್ಸ್ಟಿಟ್ಯೂಟ್’ನ ವರದಿಯ ಪ್ರಕಾರ 2020 ರಿಂದ 2024 ರ ಅವಧಿಯಲ್ಲಿ ಪಾಕಿಸ್ತಾನವು ಖರೀದಿಸಿದ ಶಸ್ತ್ರಾಸ್ತ್ರಗಳಲ್ಲಿ ಶೇ. 81 ಶಸ್ತ್ರಾಸ್ತ್ರಗಳು ಚೀನಾದಿಂದ ಬಂದಿವೆ. ಚೀನಾ ಪಾಕಿಸ್ತಾನಕ್ಕೆ ಯುದ್ಧ ವಿಮಾನಗಳು, ರಾಡಾರ್ ಗಳು, ಯುದ್ಧನೌಕೆಗಳು, ಜಲಾಂತರ್ಗಾಮಿ ನೌಕೆಗಳು ಮತ್ತು ಕ್ಷಿಪಣಿಗಳನ್ನು ಮಾರಾಟ ಮಾಡಿದೆ.
ನಾವು ಭಾರತ-ಪಾಕ್ ನಡುವಿನ ಅಣು ಯುದ್ಧವನ್ನು ನಿಲ್ಲಿಸಿದ್ದೇವೆ! – ಡೊನಾಲ್ಡ್ ಟ್ರಂಪ್ ಅವರ ದಾವೆ![]() ಭಾರತ ಮತ್ತು ಪಾಕಿಸ್ತಾನದ ನಡುವಿನ ಅಣು ಯುದ್ಧವನ್ನು ನಿಲ್ಲಿಸಲಾಗಿದೆ. ಎರಡೂ ದೇಶಗಳ ನಡುವೆ ಕದನ ವಿರಾಮ ತರಲು ಅಮೆರಿಕ ಸಹಾಯ ಮಾಡಿದೆ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಈ ಕದನ ವಿರಾಮ ಶಾಶ್ವತವಾಗಿರುತ್ತದೆ ಎಂದು ನನಗೆ ಖಚಿತವಾಗಿದೆ ಎಂದು ಅವರು ಹೇಳಿದರು. ಎರಡೂ ದೇಶಗಳಲ್ಲಿ ಸಾಕಷ್ಟು ಅಣ್ವಸ್ತ್ರಗಳಿವೆ, ಇದರಿಂದ ಭಯಾನಕ ಅಣು ಯುದ್ಧ ಸಂಭವಿಸಬಹುದಿತ್ತು. ಲಕ್ಷಾಂತರ ಜನರು ಸಾಯಬಹುದಿತ್ತು. ನಾನು ಇಬ್ಬರಿಗೂ ಇದನ್ನು ನಿಲ್ಲಿಸೋಣ ಎಂದು ಹೇಳಿದೆ. ನೀವು ಇದನ್ನು ನಿಲ್ಲಿಸಿದರೆ ನಾವು ವ್ಯಾಪಾರ ಮಾಡುತ್ತೇವೆ. ನೀವು ಇದನ್ನು ನಿಲ್ಲಿಸದಿದ್ದರೆ ನಾವು ಯಾವುದೇ ವ್ಯಾಪಾರ ಮಾಡುವುದಿಲ್ಲ. ಜನರು ನನ್ನಂತೆ ಎಂದಿಗೂ ವ್ಯಾಪಾರ ಮಾಡಿಲ್ಲ, ಎಂದು ಹೇಳಿದರು. |
ಸಂಪಾದಕೀಯ ನಿಲುವು
|