Pakistan Claims Minor Damage : ‘ಪಾಕಿಸ್ತಾನದ ಯುದ್ಧ ವಿಮಾನಕ್ಕೆ ಸಣ್ಣ ಹಾನಿ ಸಂಭವಿಸಿದೆ!’ – ಪಾಕ್ ಸೈನ್ಯದ ಹಾಸ್ಯಾಸ್ಪದ ಹೇಳಿಕೆ

ಇಸ್ಲಾಮಾಬಾದ್ (ಪಾಕಿಸ್ತಾನ) – ಭಾರತದ ದಾಳಿಯಲ್ಲಿ ಪಾಕಿಸ್ತಾನದ ಒಂದು ಯುದ್ಧ ವಿಮಾನಕ್ಕೆ ಸ್ವಲ್ಪ ಹಾನಿಯಾಗಿದೆ ಎಂದು ಪಾಕಿಸ್ತಾನದ ಸೇನೆಯ ವಕ್ತಾರ ಲೆಫ್ಟಿನೆಂಟ್ ಜನರಲ್ ಅಹ್ಮದ್ ಶರೀಫ್ ಚೌಧರಿ ಪತ್ರಿಕಾಗೋಷ್ಠಿಯಲ್ಲಿ ಒಪ್ಪಿಕೊಂಡಿದ್ದಾರೆ. ಈ ಹೇಳಿಕೆಯ ನಂತರ ಅನೇಕರು ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದು, ‘ಯುದ್ಧದಲ್ಲಿ ಮಾಡಿದ ದಾಳಿಯಲ್ಲಿ ವಿಮಾನಕ್ಕೆ ಸಣ್ಣ ಹಾನಿಯಾಗುವುದಿಲ್ಲ, ಅದು ನಾಶವಾಗುತ್ತದೆ; ಆದರೆ ಪಾಕಿಸ್ತಾನ ಒಪ್ಪಿಕೊಳ್ಳುವಾಗ ಅರ್ಧ ಸತ್ಯವನ್ನು ಹೇಳುತ್ತಿದೆ’ ಎಂದು ಹೇಳಲಾಗುತ್ತಿದೆ.

ಸೈನಿಕ ಸಂಘರ್ಷದ ನಂತರ ಪಾಕಿಸ್ತಾನಿ ಸೈನ್ಯದ ವಶದಲ್ಲಿ ಯಾವುದೇ ಭಾರತೀಯ ಪೈಲಟ್ ಇಲ್ಲ ಎಂದು ಲೆಫ್ಟಿನೆಂಟ್ ಜನರಲ್ ಚೌಧರಿ ಖಚಿತಪಡಿಸಿದ್ದಾರೆ.

ಪಾಕಿಸ್ತಾನದಲ್ಲಿ ‘ಯೌಮ್-ಎ-ತಶಕ್ಕುರ್’ (ಅಲ್ಲಾಹನಿಗೆ ಕೃತಜ್ಞತೆ ಸಲ್ಲಿಸುವ ದಿನ) ಆಚರಣೆ

ಪಾಕಿಸ್ತಾನಿ ಸೈನ್ಯದ ಭಾರತದ ವಿರುದ್ಧದ ‘ಬನ್ಯಾನ್-ಉನ್-ಮರ್ಸೂಸ್’ (ಕಬ್ಬಿಣದ ಭದ್ರವಾದ ಗೋಡೆ) ಕಾರ್ಯಾಚರಣೆಯ ಯಶಸ್ಸಿನ ನೆನಪಿಗಾಗಿ ದೇಶಾದ್ಯಂತ ‘ಯೌಮ್-ಎ-ತಶಕ್ಕುರ್’ ಆಚರಿಸಲಾಯಿತು. ಯೌಮ್-ಎ-ತಶಕ್ಕುರ್ ಉರ್ದು ಪದವಾಗಿದ್ದು, ಇದರರ್ಥ ಅಲ್ಲಾಹನಿಗೆ ಕೃತಜ್ಞತೆ ಸಲ್ಲಿಸುವ ದಿನ. ಭಾರತದ ದಾಳಿಗೆ ಸೂಕ್ತ ಉತ್ತರ ನೀಡಿದ್ದಕ್ಕಾಗಿ ಪ್ರಧಾನಿ ಶಹಬಾಜ್ ಶನಿವಾರ ದೇಶಾದ್ಯಂತ ‘ಯೌಮ್-ಎ-ತಶಕ್ಕುರ್’ ಆಚರಿಸುವುದಾಗಿ ಘೋಷಿಸಿದ್ದರು.