ಬ್ರಹ್ಮೋಸ್‌ನಿಂದ ಪಾಕ್ ವಾಯುನೆಲೆಗಳಿಗೆ ಹಾನಿ
ನವ ದೆಹಲಿ – ಭಾರತವು ‘ಆಪರೇಷನ್ ಸಿಂದೂರ್’ ಮೂಲಕ ಪಾಕಿಸ್ತಾನಕ್ಕೆ ಭಾರಿ ಹಾನಿ ಮಾಡಿದೆ ಎಂಬ ಮಾಹಿತಿ ಈಗ ಬೆಳಕಿಗೆ ಬರುತ್ತಿದೆ. ಭಾರತವು ಪಾಕಿಸ್ತಾನದ ವಾಯು ರಕ್ಷಣಾ ವ್ಯವಸ್ಥೆಯನ್ನು ನಾಶಪಡಿಸುವುದರ ಜೊತೆಗೆ ಪಾಕಿಸ್ತಾನದ ವಾಯುಪಡೆಯ 11 ನೆಲೆಗಳನ್ನು ಧ್ವಂಸಗೊಳಿಸಿದೆ. ಈ ಕಾರ್ಯಾಚರಣೆಗಾಗಿ ಭಾರತವು ಮೊದಲ ಬಾರಿಗೆ ಬ್ರಹ್ಮೋಸ್ ಕ್ಷಿಪಣಿಗಳನ್ನು ಬಳಸಿತು ಮತ್ತು ಅದರ ಪರಿಣಾಮವು ಬಹಳ ದೊಡ್ಡದಾಗಿದೆ ಎಂದು ರಕ್ಷಣಾ ತಜ್ಞರು ಹೇಳುತ್ತಿದ್ದಾರೆ. ಬ್ರಹ್ಮೋಸ್‌ನಿಂದ ಪಾಕಿಸ್ತಾನದ ವಾಯುನೆಲೆಗಳಿಗೆ ಭಾರಿ ಹಾನಿಯಾದ ವಿಡಿಯೊಗಳು ಈಗ ಹೊರಬರುತ್ತಿವೆ.
ಬ್ರಹ್ಮೋಸ್ ಕ್ಷಿಪಣಿಯೊಂದಿಗೆ ‘ಸ್ಕ್ಯಾಲ್ಪ್’ ಮತ್ತು ‘ಹ್ಯಾಮರ್’ ನಂತಹ ಗಾಳಿಯಲ್ಲೇ ನಿಖರವಾದ ದಾಳಿ ನಡೆಸುವ ಆಧುನಿಕ ಶಸ್ತ್ರಾಸ್ತ್ರಗಳನ್ನು ಸಹ ಬಳಸಲಾಯಿತು. ಪಾಕಿಸ್ತಾನದ ಸ್ಕಾರ್ದು, ಮುರೀದ, ರಫೀಕಿ, ನೂರ ಖಾನ, ಚುನಿಯಾ, ಸುಕ್ಕೂರ ಮುಂತಾದ ವಾಯುನೆಲೆಗಳು ಮತ್ತು ಸಿಯಾಲಕೋಟ ಹಾಗೂ ಪಸರೂರನ ರಾಡಾರ್ ನೆಲೆಗಳಿಗೆ ಹಾನಿ ಮಾಡಲಾಗಿದೆ. ಬ್ರಹ್ಮೋಸ್ ಅನ್ನು ಭಾರತ ಮತ್ತು ರಷ್ಯಾ ಜಂಟಿಯಾಗಿ ಅಭಿವೃದ್ಧಿಪಡಿಸಿವೆ. ಭಾರತದಿಂದ ವಿಯೆಟ್ನಾಂ ಮತ್ತು ಫಿಲಿಪ್ಪೀನ್ಸ್ ದೇಶಗಳು ಸಹ ಬ್ರಹ್ಮೋಸ್ ಅನ್ನು ಖರೀದಿಸಿವೆ.