Kashmir Issue Trump Mediation : ಕಾಶ್ಮೀರ ಸಮಸ್ಯೆಯನ್ನು ಬಗೆಹರಿಸಲು ನಾನು ಸಿದ್ಧ! – ಡೊನಾಲ್ಡ್ ಟ್ರಂಪ್

ವಾಷಿಂಗ್ಟನ (ಅಮೇರಿಕಾ) – ಭಾರತ ಮತ್ತು ಪಾಕಿಸ್ತಾನದೊಂದಿಗೆ ಕಾಶ್ಮೀರ ಸಮಸ್ಯೆಯ ಬಗ್ಗೆ ಮಾತನಾಡಲು ನಾನು ಸಿದ್ಧನಿದ್ದೇನೆ. ಸಾವಿರಾರು ವರ್ಷಗಳ ನಂತರವೂ ಕಾಶ್ಮೀರಕ್ಕೆ ಪರಿಹಾರ ಸಿಗಬಹುದು ಎಂಬುದರ ಬಗ್ಗೆ ನಾವು ಒಟ್ಟಾಗಿ ಚಿಂತಿಸಬಹುದು. ದೇವರು ಭಾರತ ಮತ್ತು ಪಾಕಿಸ್ತಾನದ ನಾಯಕತ್ವಕ್ಕೆ ಒಳ್ಳೆಯ ಕೆಲಸ ಮಾಡಲು ಆಶೀರ್ವದಿಸಲಿ ಎಂದು ಅಮೇರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪೋಸ್ಟ್ ಮಾಡಿದ್ದಾರೆ. ಇದರಿಂದ ಅವರು ಕಾಶ್ಮೀರ ಸಮಸ್ಯೆಯಲ್ಲಿ ಮಧ್ಯಸ್ಥಿಕೆ ವಹಿಸುವ ಪ್ರಸ್ತಾಪವನ್ನು ನೀಡಿದ್ದಾರೆ.

ಕದನ ವಿರಾಮದ ಬಗ್ಗೆ ಟ್ರಂಪ್, ಈ ಸಂಘರ್ಷ ಮುಂದುವರಿದರೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸಾಯುತ್ತಿದ್ದರು ಮತ್ತು ದೊಡ್ಡ ವಿನಾಶವಾಗುತ್ತಿತ್ತು. ಲಕ್ಷಾಂತರ ಒಳ್ಳೆಯ ಮತ್ತು ಮುಗ್ಧ ನಾಗರಿಕರು ಪ್ರಾಣ ಕಳೆದುಕೊಳ್ಳುತ್ತಿದ್ದರು. ಈ ಐತಿಹಾಸಿಕ ಮತ್ತು ಧೈರ್ಯಶಾಲಿ ನಿರ್ಧಾರಕ್ಕೆ ಬರಲು ಅಮೆರಿಕವು ನಿಮಗೆ ಸಹಾಯ ಮಾಡಲು ಸಾಧ್ಯವಾಯಿತು ಎಂಬುದು ನನಗೆ ಹೆಮ್ಮೆಯ ವಿಷಯ. ನಾನು ಈ ಎರಡೂ ದೇಶಗಳೊಂದಿಗಿನ ವ್ಯಾಪಾರವನ್ನು ದೊಡ್ಡ ಪ್ರಮಾಣದಲ್ಲಿ ಹೆಚ್ಚಿಸುತ್ತೇನೆ ಎಂದು ಹೇಳಿದ್ದಾರೆ.

ಸಂಪಾದಕೀಯ ನಿಲುವು

ಟ್ರಂಪ್ ಅವರಿಗೆ ಕಾಶ್ಮೀರ ಸಮಸ್ಯೆಯನ್ನು ಬಗೆಹರಿಸಲು ಏಕೆ ಇಷ್ಟು ಆಸಕ್ತಿ? ಅಮೆರಿಕವು ಜಾಗತಿಕ ಮಟ್ಟದಲ್ಲಿ ಯಾವ ಸಮಸ್ಯೆಗಳನ್ನು ಪರಿಹರಿಸಲು ಪ್ರಯತ್ನಿಸಿದೆಯೋ, ಅಲ್ಲಿ ಆ ಸಮಸ್ಯೆ ಇನ್ನಷ್ಟು ಉಲ್ಬಣಗೊಂಡಿದೆ ಅಥವಾ ಸಂಬಂಧಪಟ್ಟ ದೇಶವು ಹಾಳಾಗಿದೆ ಎಂಬುದು ಇತಿಹಾಸ. ಆದ್ದರಿಂದ ಭಾರತವೂ ಈ ಬಗ್ಗೆ ಎಚ್ಚರಿಕೆಯಿಂದ ಇರಬೇಕು!