ಲಕ್ಷ್ಮಣಪುರಿ (ಉತ್ತರ ಪ್ರದೇಶ) – ಭಯೊತ್ಪಾದಕರು ಮತ್ತು ಅವರ ಪ್ರಮುಖ ನಾಯಕರಿಗೆ ಗಡಿಯಾಚೆಗಿನ ಭೂಮಿ ಕೂಡ ಸುರಕ್ಷಿತವಾಗಿಲ್ಲ. ಭಾರತವು ಪಾಕಿಸ್ತಾನದಲ್ಲಿ ನುಗ್ಗಿ ಕ್ರಮ ಕೈಗೊಂಡಿದೆ. ಭಾರತೀಯ ಸೇನೆಯು ಶೌರ್ಯ ಮತ್ತು ಪ್ರಚಂಡ ಪರಾಕ್ರಮವನ್ನು ಪ್ರದರ್ಶಿಸುತ್ತಾ ರಾವಲ್ಪಿಂಡಿಯ ತನಕ ಸೆದೆಬಡಿದಿದೆ. ಭಾರತದಲ್ಲಿ ಭಯೋತ್ಪಾದಕ ಚಟುವಟಿಕೆಗಳನ್ನು ನಡೆಸುವವರಿಗೆ ಏನಾಗುತ್ತದೆ, ಎಂಬುದನ್ನು ಈಗ ಜಗತ್ತು ನೋಡಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಇಲ್ಲಿ ನಡೆದ ರಕ್ಷಣಾ ಪಡೆಯ ಒಂದು ಕಾರ್ಯಕ್ರಮದಲ್ಲಿ ಹೇಳಿದರು. ‘ಭಯೋತ್ಪಾದಕರ ವಿರುದ್ಧ ಶಿಸ್ತಿನ ಕ್ರಮ ಮುಂದುವರಿಯುತ್ತದೆ’ ಎಂದು ಅವರು ಸ್ಪಷ್ಟಪಡಿಸಿದರು. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಇಲ್ಲಿನ ‘ಬ್ರಹ್ಮೋಸ್ ಏರೋಸ್ಪೇಸ್ ಇಂಟಿಗ್ರೇಷನ್ ಮತ್ತು ಟೆಸ್ಟಿಂಗ್ ಫೆಸಿಲಿಟಿ ಸೆಂಟರ್’ ಅನ್ನು ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ಉದ್ಘಾಟಿಸಿದರು. ಆ ಸಮಯದಲ್ಲಿ ಅವರು ಮಾತನಾಡುತ್ತಿದ್ದರು.