Muslim Girl Anti-India Slogans : ಪುಣೆಯಲ್ಲಿ ಮುಸ್ಲಿಂ ಯುವತಿಯಿಂದ ಸಾಮಾಜಿಕ ಮಾಧ್ಯಮದಲ್ಲಿ ‘ಪಾಕಿಸ್ತಾನ ಜಿಂದಾಬಾದ್’ ಎಂದು ಘೋಷಣೆ!

ಯುವತಿಯ ಬಂಧನ

ಪುಣೆ – ಭಾರತ ಮತ್ತು ಪಾಕಿಸ್ತಾನದ ನಡುವಿನ ಉದ್ವಿಗ್ನತೆಯ ಸಮಯದಲ್ಲಿ, ಪುಣೆಯ ‘ಸಿಂಹಗಡ್ ಇನ್ಸ್ಟಿಟ್ಯೂಟ್’ ನಲ್ಲಿ ಓದುತ್ತಿರುವ ಖದೀಜಾ ಶೇಖ್ ಎಂಬ ಯುವತಿಯು ‘ಪಾಕಿಸ್ತಾನ ಜಿಂದಾಬಾದ್’, ಎಂದು ಬರೆದು ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರ ಮಾಡಿದ್ದಾಳೆ. ಸಕಲ್ ಹಿಂದೂ ಸಮಾಜವು ಈ ಬಗ್ಗೆ ಸಾಮಾಜಿಕ ಮಾಧ್ಯಮ ‘ಎಕ್ಸ್’ನಲ್ಲಿ  ಮಾಹಿತಿ ನೀಡಿದೆ.

ಸಕಲ್ ಹಿಂದೂ ಸಮಾಜವು ಈ ಯುವತಿಯ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದೆ. ಯುವತಿಯು ಸಾಮಾಜಿಕ ಮಾಧ್ಯಮದಲ್ಲಿ ‘ಪಾಕಿಸ್ತಾನ ಜಿಂದಾಬಾದ್’ ಘೋಷಣೆಗಳನ್ನು ನೀಡಿದ ನಂತರ ಅವಳ ಇನ್ಸ್ಟಾಗ್ರಾಮ್ ಖಾತೆಯನ್ನು ಅಳಿಸಲಾಗಿದೆ ಎಂದು ಸಕಲ್ ಹಿಂದೂ ಸಮಾಜ ಹೇಳಿಕೊಂಡಿದೆ. ಕೊಂಡ್ವಾ ಪೊಲೀಸ್ ಠಾಣೆಯಲ್ಲಿ ಯುವತಿಯ ವಿರುದ್ಧ ಪ್ರಕರಣ ನೊಂದಾಯಿಸಿದ್ದು, ಆಕೆಯನ್ನು ಬಂಧಿಸಲಾಗಿದೆ. ‘ಸಿಂಹಗಡ್ ಇನ್ಸ್ಟಿಟ್ಯೂಟ್’ ಆಕೆಯನ್ನು ಕಾಲೇಜಿನಿಂದ ತೆಗೆದು ಹಾಕಿದೆ ಎಂದು ತಿಳಿದುಬಂದಿದೆ.

ಸಂಪಾದಕೀಯ ನಿಲುವು

ಇಂತಹ ಪಾಕಿಸ್ತಾನಿ ಪ್ರೇಮಿಗಳ ಮೇಲೆ ನ್ಯಾಯಾಲಯವು ಕಾನೂನು ಪ್ರಕ್ರಿಯೆಯ ಮೂಲಕ ಜೈಲಿಗೆ ಹಾಕಿ ಶಿಕ್ಷೆ ಅನುಭವಿಸಿ ಮುಗಿದ ನಂತರ ಪಾಕಿಸ್ತಾನಕ್ಕೆ ಕಳುಹಿಸಬೇಕು!