
ಕರ್ಣಾವತಿ – ಗುಜರಾತ್ ಪೊಲೀಸರು ‘ಆಪರೇಷನ್ ಡಿಪೋರ್ಟ್ ಬಾಂಗ್ಲಾದೇಶಿ’ ಅಡಿಯಲ್ಲಿ 300ಕ್ಕೂ ಹೆಚ್ಚು ಬಾಂಗ್ಲಾದೇಶಿ ಪ್ರಜೆಗಳನ್ನು ಭಾರತದಿಂದ ಹೊರಹಾಕಿದ್ದಾರೆ. ಪಹಲ್ಗಾಮ್‌ನಲ್ಲಿ ನಡೆದ ಜಿಹಾದಿ ಭಯೋತ್ಪಾದಕ ದಾಳಿಯ ನಂತರ ರಾಜ್ಯಾದ್ಯಂತ ವಿಶೇಷ ಶೋಧ ಕಾರ್ಯಾಚರಣೆ ನಡೆಸಿ ಈ ಬಾಂಗ್ಲಾದೇಶಿ ಪ್ರಜೆಗಳನ್ನು ಬಂಧಿಸಲಾಗಿತ್ತು. ನಂತರ ತನಿಖೆ ಮತ್ತು ಕಾನೂನು ಪ್ರಕ್ರಿಯೆಗಳ ನಂತರ ಅವರನ್ನು ಹಂತ-ಹಂತವಾಗಿ ವಾಪಸ್ ಕಳುಹಿಸಲಾಯಿತು.
1. ಕರ್ಣಾವತಿ ಮತ್ತು ಸೂರತ್ ನಗರಗಳು ಸೇರಿದಂತೆ ರಾಜ್ಯದ ವಿವಿಧ ನಗರಗಳಿಂದ ಈ ಬಾಂಗ್ಲಾದೇಶಿ ಪ್ರಜೆಗಳನ್ನು ಬಂಧಿಸಲಾಗಿತ್ತು. ಅವರನ್ನು ವಿಶೇಷ ವಿಮಾನದ ಮೂಲಕ ಅಗರ್ತಲಾ (ತ್ರಿಪುರ)ಕ್ಕೆ ಕಳುಹಿಸಲಾಯಿತು.
2. ಮುಂದಿನ ಕ್ರಮಕ್ಕಾಗಿ ಅವರನ್ನು ರಸ್ತೆಯ ಮೂಲಕ ಕರೆದೊಯ್ಯಲಾಯಿತು. ಪಹಲ್ಗಾಮ್ ದಾಳಿಯ ನಂತರ ಏಪ್ರಿಲ್ 27 ರಂದು ಪೊಲೀಸರು ರಾಜ್ಯಾದ್ಯಂತ ಅಕ್ರಮ ಬಾಂಗ್ಲಾದೇಶಿ ಪ್ರಜೆಗಳನ್ನು ಗುರುತಿಸಿ ಬಂಧಿಸುವ ಕಾರ್ಯಾಚರಣೆಯನ್ನು ಪ್ರಾರಂಭಿಸಿದರು.
3. ಕರ್ಣಾವತಿಯಲ್ಲಿ 800 ಮತ್ತು ಸೂರತ್‌ನಲ್ಲಿ 134 ಶಂಕಿತ ಬಾಂಗ್ಲಾದೇಶಿ ಅಕ್ರಮ ನುಸುಳುಕೋರರನ್ನು ಸೆರೆ ಹಿಡಿಯಲಾಯಿತು.
ವಾಪಸ್ ಹೋಗಲು ನುಸುಳುಕೋರರಿಗೆ 10 ದಿನಗಳ ಗಡುವು
ಅಕ್ರಮವಾಗಿ ವಾಸಿಸುತ್ತಿರುವ ನುಸುಳುಕೋರರನ್ನು ಬಂಧಿಸಿದ ನಂತರ ಅವರನ್ನು ವಾಪಸ್ ಕಳುಹಿಸುವ ಪ್ರಕ್ರಿಯೆ ಪ್ರಾರಂಭಿಸಲು ಸಾಕಷ್ಟು ಸಮಯ ಬೇಕಾಗುತ್ತದೆ; ಆದರೆ ಈ ಬಾರಿ ಪೊಲೀಸರು ಸೆರೆ ಹಿಡಿದ ನುಸುಳುಕೋರರನ್ನು ತಕ್ಷಣವೇ ವಾಪಸ್ ಕಳುಹಿಸಲು ಮೊದಲೇ ನಿರ್ಧರಿಸಿದ್ದರು. ‘ಆಪರೇಷನ್ ಡಿಪೋರ್ಟ್’ ಪ್ರಾರಂಭಿಸಿ ಕಾರ್ಯಾಚರಣೆಯನ್ನು ಪೂರ್ಣಗೊಳಿಸಲು ಪೊಲೀಸರು 10 ದಿನಗಳ ಗಡುವನ್ನು ನಿಗದಿಪಡಿಸಿದ್ದರು.
ಸಂಪಾದಕೀಯ ನಿಲುವುಪ್ರತಿ ರಾಜ್ಯದ ಪೊಲೀಸರು ಇಂತಹ ಕ್ರಮ ಕೈಗೊಂಡರೆ ಬಾಂಗ್ಲಾದೇಶಿ ಅಕ್ರಮ ನುಸುಳುವಿಕೆಯ ಸಮಸ್ಯೆ ಕೊನೆಗೊಳ್ಳಲು ಹೆಚ್ಚು ಸಮಯ ಬೇಕಾಗುವುದಿಲ್ಲ! |
Aamir Khan Gets Death Threat : ನಟ ಆಮೀರ್ ಖಾನ್ ಅವರಿಗೆ ‘ಲವ್ ಜಿಹಾದ್’ ಹೆಸರಿನಲ್ಲಿ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ನಿಂದ ಕೊಲೆ ಬೆದರಿಕೆ
ಪಂಢರಪುರ: ಶ್ರೀ ವಿಠ್ಠಲ-ರುಕ್ಮಿಣಿ ಮೂರ್ತಿಯ ಮೇಲೆ ರಾಸಾಯನಿಕ ಲೇಪನದ ತಡೆಯಾಜ್ಞೆ ತೆರವು!
ಹಿಂದೂ ಯುವತಿಯನ್ನು ಪ್ರೇಮ ಜಾಲದಲ್ಲಿ ಸೆಳೆಯಲು ಯತ್ನ, ಮಾನಸಿಕ ಕಿರುಕುಳ ನೀಡಿದ ಸುಫಿಯಾನ್ ಖಾನ್!
Vande Mataram : ‘ವಂದೇ ಮಾತರಂ’ಗೆ ಅವಮಾನ ಮಾಡಿದರೆ ಮೂರು ವರ್ಷಗಳವರೆಗೆ ಜೈಲು ಶಿಕ್ಷೆ !
Hospital Gives Wrong Blood : ರಾಜಸ್ಥಾನ: ಹೆರಿಗೆಯಾದ ಮಹಿಳೆಗೆ ‘ಒ-ಪಾಸಿಟಿವ್’ ಬದಲು ‘ಬಿ-ಪಾಸಿಟಿವ್’ ರಕ್ತ ನೀಡಿದ ಆಸ್ಪತ್ರೆ ಸಿಬ್ಬಂದಿ; ಮಹಿಳೆ ಸ್ಥಿತಿ ಗಂಭೀರ!
ಪ್ಲಾಸ್ಟಿಕ್ ನೋಟುಗಳನ್ನು ಚಲಾವಣೆಗೆ ತರುವ ವಿಚಾರದಲ್ಲಿದೆ ರಿಸರ್ವ್ ಬ್ಯಾಂಕ್