
ಡೆಹ್ರಾಡೂನ್ (ಉತ್ತರಾಖಂಡ) – ರಾಜ್ಯದ ಉತ್ತರಕಾಶಿಯಲ್ಲಿ ಹೆಲಿಕಾಪ್ಟರ್ ಪತನಗೊಂಡು ಐವರು ಪ್ರಯಾಣಿಕರು ಸಾವನ್ನಪ್ಪಿದ್ದು, ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಉತ್ತರಕಾಶಿಯಲ್ಲಿನ ಗಂಗನಿಯಲ್ಲಿರುವ ಭಾಗೀರಥಿ ನದಿಯ ಬಳಿ ಈ ಅಪಘಾತ ಸಂಭವಿಸಿದೆ. ಈ ಹೆಲಿಕಾಪ್ಟರ್ ಗಂಗೋತ್ರಿ ಧಾಮಕ್ಕೆ ಹೋಗುತ್ತಿತ್ತು. ಹೆಲಿಕಾಪ್ಟರ್‌ನಲ್ಲಿ 4 ಪುರುಷರು ಮತ್ತು 2 ಮಹಿಳೆಯರು ಇದ್ದರು ಎಂದು ಆಡಳಿತವು ಹೇಳಿದೆ. ಕ್ಯಾಪ್ಟನ್ ರಾಬಿನ್ ಸಿಂಗ್ ಅದರ ಪೈಲಟ್ ಇದ್ದರು. ಅಪಘಾತಕ್ಕೀಡಾದ ಹೆಲಿಕಾಪ್ಟರ್ ‘ಏರೋಟ್ರಾನ್ಸ್ ಸರ್ವಿಸ್’ ಎಂಬ ಖಾಸಗಿ ಸಂಸ್ಥೆಗೆ ಸೇರಿತ್ತು. ಇದರಲ್ಲಿನ ಪ್ರಯಾಣಿಕರು ಮಹಾರಾಷ್ಟ್ರ ಮತ್ತು ಆಂಧ್ರಪ್ರದೇಶದವರಿದ್ದರು.

ಕಳೆದ ಕೆಲವು ದಿನಗಳಿಂದ ಉತ್ತರಾಖಂಡದಲ್ಲಿ ಹವಾಮಾನ ಕೆಟ್ಟದಾಗಿದೆ. ಹಲವು ಜಿಲ್ಲೆಗಳಲ್ಲಿ ಬಿರುಗಾಳಿ ಮತ್ತು ಮಳೆಯಾಗುವ ಬಗ್ಗೆ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಚಾರ್‌ಧಾಮ ಯಾತ್ರೆ ಮಾರ್ಗದಲ್ಲಿ ಹಲವೆಡೆ ಲಘು ಮಳೆಯಾಗುತ್ತಿದ್ದು, ಕೆಲವು ಸ್ಥಳಗಳಲ್ಲಿ ಗುಡುಗು ಸಹಿತ ಆಲಿಕಲ್ಲು ಮಳೆಯು ಬಿದ್ದಿದೆ.
Hospital Gives Wrong Blood : ರಾಜಸ್ಥಾನ: ಹೆರಿಗೆಯಾದ ಮಹಿಳೆಗೆ ‘ಒ-ಪಾಸಿಟಿವ್’ ಬದಲು ‘ಬಿ-ಪಾಸಿಟಿವ್’ ರಕ್ತ ನೀಡಿದ ಆಸ್ಪತ್ರೆ ಸಿಬ್ಬಂದಿ; ಮಹಿಳೆ ಸ್ಥಿತಿ ಗಂಭೀರ!
ಪ್ಲಾಸ್ಟಿಕ್ ನೋಟುಗಳನ್ನು ಚಲಾವಣೆಗೆ ತರುವ ವಿಚಾರದಲ್ಲಿದೆ ರಿಸರ್ವ್ ಬ್ಯಾಂಕ್
ದೇಶದ ಮೊದಲ ಖಾಸಗಿ ಸಂಸ್ಥೆಯಿಂದ ಉಪಗ್ರಹಗಳ ಯಶಸ್ವಿ ಉಡಾವಣೆ
ಗೂಗಲ್ ನ ‘ಜೆಮಿನಿ’ ಎಐ ಜಾಲತಾಣವು ‘ಜಯ ಶ್ರೀರಾಮ್’ಗೆ ಪ್ರತಿಕ್ರಿಯೆ ನೀಡುತ್ತದೆ, ಹೀಗಿರುವಾಗ ‘ಸಿರಿ’ಗೆ ಏಕೆ ನೀಡಲು ಸಾಧ್ಯವಿಲ್ಲ ? – ಹಿಂದುತ್ವನಿಷ್ಠರ ಪ್ರಶ್ನೆ
FIR Against Kunal Kamra : ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಹಾಸ್ಯ ಕಲಾವಿದ ಕುಣಾಲ ಕಮ್ರಾ ವಿರುದ್ಧ ದೂರು ದಾಖಲು!
Fake Currency Racket : ಜಾಲದಿಂದ ನಕಲಿ ಭಾರತೀಯ ಕರೆನ್ಸಿ ನೋಟುಗಳ ಮುದ್ರಣ ಪತ್ತೆ!