ವ್ಯಾಯಾಮದಲ್ಲಿ ಆಸಕ್ತಿ ಮೂಡಲು ಆನಂದದಾಯಕ ವ್ಯಾಯಾಮದ ಪ್ರಕಾರಗಳನ್ನು ಆಯ್ಕೆ ಮಾಡಿ !
ಕೆಲವರಿಗೆ ಕೆಲವು ವ್ಯಾಯಾಮದ ಪ್ರಕಾರಗಳು ದೇಹಕ್ಕೆ ಉಪಯುಕ್ತವೆನಿಸುತ್ತದೆ; ಆದ್ದರಿಂದ ಅವರು ಅವುಗಳನ್ನು ಮಾಡುತ್ತಾರೆ; ಆದರೆ ಅವರಿಗೆ ಅದರಲ್ಲಿ ಆನಂದ ಸಿಗದ ಕಾರಣ, ಈ ಪ್ರಕಾರಗಳನ್ನು ನಿಯಮಿತವಾಗಿ ಮಾಡುವ ಅವರ ಉತ್ಸಾಹ ಉಳಿಯುವುದಿಲ್ಲ. ವ್ಯಾಯಾಮದ ಬಗ್ಗೆ ತನ್ನಲ್ಲಿ ಆಸಕ್ತಿ ಮೂಡಿಸುವಾಗ, ‘ದೇಹ ಮತ್ತು ಮನಸ್ಸಿಗೆ ಆನಂದ ಸಿಕ್ಕಾಗ, ನಿರಂತರತೆ ತಾನಾಗಿಯೇ ಬರುತ್ತದೆ’, ಎಂಬ ಅಂಶವನ್ನು ನೆನಪಿಡಿ. ಅನೇಕರಿಗೆ ವ್ಯಾಯಾಮ ಮಾಡುವುದು ಬೇಸರವೆನಿಸುತ್ತದೆ. ಆದ್ದರಿಂದ, ಆರಂಭದಲ್ಲಿ ಅದು ಆನಂದದಾಯಕವಾಗಿರಲು ಮತ್ತು ವ್ಯಾಯಾಮದಲ್ಲಿ ಆಸಕ್ತಿ ಮೂಡಿಸಲು, ನಿಮಗೆ ಆನಂದ ನೀಡುವ ಮತ್ತು ನಿರಂತರವಾಗಿ ಮಾಡಲು ಸಾಧ್ಯವಾಗುವಂತಹ ವ್ಯಾಯಾಮ ಪ್ರಕಾರವನ್ನು ಆಯ್ಕೆ ಮಾಡುವುದು ಆವಶ್ಯಕವಾಗಿದೆ. ಉದಾಹರಣೆಗೆ, ತೆರೆದ ಗಾಳಿಯಲ್ಲಿ ನಡೆಯುವುದು, ಓಡುವುದು, ಸೈಕ್ಲಿಂಗ್, ಈಜುವುದು, ಆಡುವುದು ಮತ್ತು ಯೋಗಾಸನಗಳನ್ನು ಮಾಡು ವುದು, ಇವೆಲ್ಲವೂ ದೇಹವನ್ನು ತಾಜಾವಾಗಿರಿಸುತ್ತವೆ ಮತ್ತು ಮನಸ್ಸಿಗೆ ಉತ್ಸಾಹವನ್ನು ನೀಡುತ್ತವೆ.
ಕೆಲವರಿಗೆ ನೃತ್ಯ ಮಾಡಲು ಇಷ್ಟವಾಗುತ್ತದೆ, ಇನ್ನು ಕೆಲವರಿಗೆ ಗೆಳೆಯ-ಗೆಳತಿಯರೊಂದಿಗೆ ಆಡವಾಡುವುದರಲ್ಲಿ ಆನಂದ ಸಿಗುತ್ತದೆ. ಇಂತಹ ದೈಹಿಕ ಚಟುವಟಿಕೆಗಳಲ್ಲಿ ಭಾಗವಹಿಸು ವುದರಿಂದ ಅದರಲ್ಲಿ ತಾನಾಗಿಯೇ ಆಸಕ್ತಿ ಹುಟ್ಟುವುದು ಮತ್ತು ಅದರಿಂದ ದೊರೆಯುವ ಆನಂದದಿಂದ ನಿಯಮಿತವಾಗಿ ವ್ಯಾಯಾಮ ಮಾಡಲು ಪ್ರೋತ್ಸಾಹ ಸಿಗುತ್ತದೆ. ‘ಬೇಸರ ಬರುವುದು’, ಇದು ನೈಸರ್ಗಿಕವಾಗಿದ್ದರೂ, ‘ವ್ಯಾಯಾಮದಲ್ಲಿ ವೈವಿಧ್ಯತೆ ತರುವುದು, ಸಣ್ಣ ಧ್ಯೇಯವನ್ನಿಡುವುದು ಮತ್ತು ಇಷ್ಟವಾದ ಪ್ರಕಾರ ಗಳನ್ನು ಹುಡುಕುವುದು’, ಈ ಉಪಾಯಗಳಿಂದ ಬೇಸರ ದೂರವಾಗುವುದು. ಮುಖ್ಯವಾಗಿ ‘ವ್ಯಾಯಾಮದ ಆನಂದ ಪಡೆಯುವುದು’ ದೈಹಿಕ ಮತ್ತು ಮಾನಸಿಕ ಆರೋಗ್ಯ ಕ್ಕಾಗಿ ಲಾಭದಾಯಕವಾಗಿದೆ. ಒಮ್ಮೆ ವ್ಯಾಯಾಮದ ಆಸಕ್ತಿ ಮೂಡಿದರೆ ಅದು ದೈನಂದಿನ ಜೀವನದ ಅವಿಭಾಜ್ಯ ಅಂಗವಾಗುವುದು !’
– ಕು. ವೈದೇಹಿ ರಾಜೇಂದ್ರ ಶಿಂದೆ, ಭೌತಿಕೋಪಚಾರ (ಫಿಜಿಯೋಥೆರಪಿ) ಅಧ್ಯಯನಕಾರರು, ಫೋಂಡಾ, ಗೋವಾ.