
‘ಸಾಧನೆಯಲ್ಲಿ ಯಾವುದೇ ಅಡಚಣೆ ಅಥವಾ ಯಾವುದೇ ತೊಂದರೆಯನ್ನು ದೂರಗೊಳಿಸಲು ಸಾಧಕರು ಖಾಲಿ ಕಾಗದದಲ್ಲಿ ಶ್ರೀಕೃಷ್ಣನ ನಾಮಜಪದ ಮಂಡಲ ಹಾಕುತ್ತಾರೆ ಹಾಗೂ ಅದರಲ್ಲಿ ಅಡಚಣೆ ಅಥವಾ ತೊಂದರೆಯ ವಿವರಣೆಯನ್ನು ಬರೆದು ಅದು ದೂರವಾಗಬೇಕೆಂದು ಪ್ರಾರ್ಥನೆಯನ್ನು ಬರೆಯುತ್ತಾರೆ. ಅದೇ ರೀತಿ ಸಾಧಕರು ಯಾವುದೇ ಸಂಭಾವ್ಯ ತೊಂದರೆಯನ್ನು ಶ್ರೀಕೃಷ್ಣನ ನಾಮಜಪದ ಮಂಡಲದಲ್ಲಿ ಬರೆದು ‘ಆ ತೊಂದರೆಯಾಗಬಾರದು ಹಾಗೂ ತನ್ನ ಸುತ್ತಲೂ ಶ್ರೀಕೃಷ್ಣನ ನಾಮಜಪದ ರಕ್ಷಣಾಕವಚ ನಿರ್ಮಾಣವಾಗಲಿ’, ಎಂದು ಪ್ರಾರ್ಥನೆಯನ್ನು ಬರೆಯುತ್ತಾರೆ. ಈ ರೀತಿ ಮಾಡಿದ ಉಪಾಯದಿಂದ ತಕ್ಷಣ ಪರಿಣಾಮವಾಗಿರುವುದು ಕಾಣಿಸುತ್ತದೆ ಹಾಗೂ ತೊಂದರೆಯ ತೀವ್ರತೆ ಸುಮಾರು ಶೇ. ೫೦ ರಷ್ಟು ಕಡಿಮೆಯಾಗಿರುವುದು ಅರಿವಾಗುತ್ತದೆ.
ಇದರ ಒಂದು ಸಣ್ಣ ಉದಾಹರಣೆಯೆಂದರೆ, ‘ಒಮ್ಮೆ ೮ – ೧೦ ಸಾಧಕರು ರೈಲಿನಲ್ಲಿ ಬರುತ್ತಿದ್ದರು. ಮಳೆಗಾಲದ ಸಮಯ ವಾಗಿತ್ತು. ಅವರ ರೈಲು ರತ್ನಾಗಿರಿ ಮತ್ತು ಚಿಪಳೂಣದ ನಡುವೆ ೨-೩ ಗಂಟೆ ನಿಂತಿತ್ತು. ಅದರ ಕಾರಣ ತಿಳಿಯುತ್ತಿರಲಿಲ್ಲ. ನಾನು ಅವರಿಗೆ ನಾಮಜಪ ಮಂಡಲದ ಉಪಾಯವನ್ನು ಸೂಚಿಸಿದೆ. ಅವರು ಹಾಗೆಯೆ ಮಾಡಿದಾಗ ಕೇವಲ ೨-೩ ನಿಮಿಷಗಳಲ್ಲಿಯೆ ಅವರ ರೈಲು ಹೊರಟಿತು.
‘ಸಾಧಕರು ನಾಮಜಪದ ಮಂಡಲ ಹಾಕಿದರೆ ಅವರಿಗೆ ಇಷ್ಟು ಸುಲಭದ ಉಪಾಯದಿಂದ ಅಷ್ಟು ಲಾಭ ಹೇಗಾಗುತ್ತದೆ ?’,
ಎಂದು ವಿಚಾರ ಮಾಡಿದಾಗ ಅರಿವಾದ ಅಂಶವೆಂದರೆ, ‘ಹೆಚ್ಚಿನ ಸಾಧಕರು ಕಳೆದ ೧೫ ರಿಂದ ೨೦ ವರ್ಷಗಳಿಂದ ಪರಾತ್ಪರ ಗುರು ಡಾ. ಆಠವಲೆಯವರ ಮಾರ್ಗದರ್ಶನದಲ್ಲಿ ಗುರುಕೃಪಾಯೋಗಾನುಸಾರ ಸಾಧನೆ ಮಾಡುತ್ತಿದ್ದಾರೆ. ಅವರು ಪರಾತ್ಪರ ಗುರು ಡಾ. ಆಠವಲೆಯವರು ಹೇಳಿದಂತೆ ಪ್ರಸ್ತುತ ಕಾಲಕ್ಕೆ
ಅನುಕೂಲಕರ ಹಾಗೂ ಈಶ್ವರನಿಗೆ ಅಪೇಕ್ಷಿತವಿರುವ ಸಮಾಜ ಸಾತ್ತ್ವಿಕವಾಗುವ ಸಮಷ್ಟಿ ಸಾಧನೆ ಮಾಡುತ್ತಿದ್ದಾರೆ. ಅವರ ಇಷ್ಟು
ವರ್ಷಗಳ ತಪಶ್ಚರ್ಯವೆ ಆಗಿರುವುದರಿಂದ ಅವರ ವಾಣಿಯಲ್ಲಿ ಹಾಗೂ ಲೇಖನದಲ್ಲಿ ಚೈತನ್ಯ ನಿರ್ಮಾಣವಾಗಿದೆ. ಆದ್ದರಿಂದ ಅವರು ಬರೆದಿರುವ ದೇವರ ನಾಮಜಪದಿಂದ ಆ ದೇವತೆಯ ಅಸ್ತಿತ್ವ ನಿರ್ಮಾಣವಾಗಿರುವುದರಿಂದ ಆ ನಾಮಜಪ ಫಲದಾಯಕ
ವಾಗುತ್ತದೆ ಹಾಗೂ ಸಾಧಕರಿಗೆ ಆ ನಾಮಜಪದ ಲಾಭವಾಗುತ್ತದೆ.
ಸಾಧಕರು ನಾಮಜಪ ಮಾಡಿದಾಗ ಕೂಡ ಇದೇ ಅನುಭೂತಿ ಯನ್ನು ಅನುಭವಿಸುತ್ತಾರೆ. ಆದ್ದರಿಂದ ಅವರು ಮಾಡುತ್ತಿರುವ ಪಂಚತತ್ತ್ವಗಳ ನಾಮಜಪ, ಉಚ್ಚ ದೇವತೆಗಳ ನಾಮಜಪ ಹಾಗೂ
‘ಶೂನ್ಯ, ಮಹಾಶೂನ್ಯ, ನಿರ್ಗುಣ ಹಾಗೂ ಓಂ’, ಈ ನಿರ್ಗುಣ ಸ್ತರದ ನಾಮಜಪಗಳು ಅವರಿಗೆ ಸಿದ್ಧವಾದಂತೆಯೆ ಇವೆ.
ಪರಾತ್ಪರ ಗುರು ಡಾ. ಆಠವಲೆಯವರು ಸಾಧಕರಿಂದ ದೇವತೆಗಳ ಕೃಪಾಶೀರ್ವಾದ ಗಳಿಸುವ ಸಾಧನೆಯನ್ನು ಮಾಡಿಸಿ ಕೊಂಡಿರುವುದಕ್ಕಾಗಿ ಅವರ ಚರಣಗಳಿಗೆ ಎಷ್ಟೇ ಕೃತಜ್ಞತೆಗಳನ್ನು ಸಲ್ಲಿಸಿದರೂ ಕಡಿಮೆಯೆ ಇದೆ !’ – ಸದ್ಗುರು ಡಾ. ಮುಕುಲ ಗಾಡಗೀಳ, ಸನಾತನ ಆಶ್ರಮ, ರಾಮನಾಥಿ ಗೋವಾ.
ದೈವಿ ಯುವ ಸಾಧಕಿಯರ ಪ್ರಬುದ್ಧ ವಿಚಾರಗಳಿಗೆ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ನೀಡಿದ ಅಮೂಲ್ಯ ಮಾರ್ಗದರ್ಶನ !
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ದ ಮಾಧ್ಯಮದಿಂದ ಕಲಾವಿದರಿಗೆ ಕಲೆಯ ಕಡೆಗೆ ಸಾಧನೆ ಎಂದು ನೋಡಲು ನೀಡಿದ ಮಾರ್ಗದರ್ಶನ !
ಸಾಧಕರಲ್ಲಿ ಆಂತರಿಕ ಬದಲಾವಣೆಯನ್ನು ತರುವ ಪೂ. ರಮಾನಂದ ಗೌಡ !
‘ತಮ್ಮ ಶಾರೀರಿಕ ಸ್ಥಿತಿಯನ್ನು ಪೂರ್ಣ ಸ್ವೀಕರಿಸುವುದು’, ಭಗವತ್ಪ್ರಾಪ್ತಿಯ ಮೊದಲ ಮೆಟ್ಟಿಲಾಗಿದೆ !
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಹೆಚ್ಚಿದ ನಿದ್ರೆ, ಅಂದರೆ ದೇವರು ಅವರ ನಿರ್ವಿಚಾರ ಸ್ಥಿತಿಯನ್ನು ಹೆಚ್ಚಿಸಲು ಮಾಡಿದ ಉಪಾಯಯೋಜನೆಯಾಗಿದೆ !
ಸಾಧನೆಯಿಂದ ಸಾಧಕರಲ್ಲಿ ಚೈತನ್ಯ ಮತ್ತು ದೈವೀ ಗುಣಗಳು ಹೆಚ್ಚಳವಾಗುವುದು ಹಾಗೂ ಸಮಾಜದ ವ್ಯಕ್ತಿಗಳು ಸಾಧಕರ ಕಡೆಗೆ ಆಕರ್ಷಿತರಾಗುವುದು