ರಷ್ಯಾದಲ್ಲಿನ ಪಾಕಿಸ್ತಾನಿ ರಾಯಭಾರಿಯಿಂದ ಬೆದರಿಕೆ

ಮಾಸ್ಕೋ (ರಷ್ಯಾ) – ಒಂದು ವೇಳೆ ಭಾರತವು ಪಾಕಿಸ್ತಾನದ ಮೇಲೆ ದಾಳಿ ಮಾಡಿದರೆ ಅಥವಾ ಪಾಕಿಸ್ತಾನದ ನೀರಿನ ಸರಬರಾಜನ್ನು ಸ್ಥಗಿತಗೊಳಿಸಿದರೆ, ಪಾಕಿಸ್ತಾನ ಪರಮಾಣು ಬಾಂಬ್ ಸಹಿತ ಸಂಪೂರ್ಣ ಸೈನಿಕ ಶಸ್ತ್ರಾಗಾರವನ್ನು ಬಳಸಲಾಗುವುದು ಎಂದು ರಷ್ಯಾದಲ್ಲಿನ ಪಾಕಿಸ್ತಾನದ ರಾಯಭಾರಿ ಮುಹಮ್ಮದ್ ಖಾಲಿದ್ ಜಮಾಲಿ ಬೆದರಿಕೆ ಹಾಕಿದ್ದಾರೆ. ಅವರು ರಷ್ಯಾದ ಒಂದು ಸುದ್ದಿವಾಹಿನಿಗೆ ಸಂದರ್ಶನ ನೀಡುವಾಗ ಮಾತನಾಡುತ್ತಿದ್ದರು.
ಪಾಕಿಸ್ತಾನದಿಂದ ಸತತ ೧೦ನೇ ದಿನ ಗಡಿಯಲ್ಲಿ ಗುಂಡಿನ ದಾಳಿ
ಪಾಕಿಸ್ತಾನವು ಕದನ ವಿರಾಮ ಒಪ್ಪಂದವನ್ನು ಉಲ್ಲಂಘಿಸಿ ಸತತ ೧೦ನೇ ದಿನ ನಿಯಂತ್ರಣ ರೇಖೆಯಲ್ಲಿ ಗುಂಡಿನ ದಾಳಿ ನಡೆಸಿದೆ. ಪಾಕಿಸ್ತಾನಿ ಸೈನ್ಯವು ಕುಪ್ವಾರ, ಬಾರಾಮುಲ್ಲಾ, ಪೂಂಚ್, ರಾಜೌರಿ, ಮೆಂಢರ್, ನೌಶೇರಾ, ಸುಂದರಬನಿ, ಉರಿ ಮತ್ತು ಅಖನೂರ್ ಈ ಭಾಗಗಳಲ್ಲಿ ಗುಂಡಿನ ದಾಳಿ ನಡೆಸಿದೆ.
Pakistan's envoy to Russia says, "We'll nuke India!" ☢️ Seriously?!
India & Pakistan haven't even had a war, yet every Pak leader talks about dropping the A-bomb.
Sounds like a desperate (and laughable!) attempt to mask their fear.🤔#IndiaPakistanWarpic.twitter.com/RENz44QMah
— Sanatan Prabhat (@SanatanPrabhat) May 4, 2025
ಸಂಪಾದಕೀಯ ನಿಲುವುಭಾರತ ಮತ್ತು ಪಾಕಿಸ್ತಾನ ನಡುವೆ ಇನ್ನೂ ಯುದ್ಧ ನಡೆದಿಲ್ಲ; ಆದರೆ ಪಾಕಿಸ್ತಾನದ ಪ್ರತಿಯೊಬ್ಬ ನಾಯಕನೂ ಭಾರತದ ಮೇಲೆ ಪರಮಾಣು ಬಾಂಬ್ ಹಾಕುವ ಬಗ್ಗೆ ಮಾತನಾಡುತ್ತಿದ್ದಾರೆ. ಇದರಿಂದ ಅವರಿಗೆ ಕಾಡುತ್ತಿರುವ ಭಯವನ್ನು ದೂರ ಮಾಡಲು ಅವರು ಹಾಸ್ಯಾಸ್ಪದ ಪ್ರಯತ್ನ ಮಾಡುತ್ತಿದ್ದಾರೆ ಎಂಬುದೇ ಗಮನಕ್ಕೆ ಬರುತ್ತದೆ! |