Kerala Rape Life Imprisonment : ಕೇರಳದಲ್ಲಿ ಕಿವುಡ ಮತ್ತು ಮೂಕ ಹುಡುಗಿಯ ಮೇಲೆ ಅತ್ಯಾಚಾರ ನಡೆಸಿದ ವ್ಯಕ್ತಿಗೆ ಜೀವಾವಧಿ ಶಿಕ್ಷೆ

ಇಡುಕ್ಕಿ (ಕೇರಳ) – ಇಲ್ಲಿ 4 ವರ್ಷಗಳ ಹಿಂದೆ ಕಿವುಡ ಮತ್ತು ಮೂಕ ಅಪ್ರಾಪ್ತ ಹುಡುಗಿಯ ಮೇಲೆ ಅತ್ಯಾಚಾರ ನಡೆಸಿದ ಪ್ರಕರಣದಲ್ಲಿ, ಇಲ್ಲಿನ ನ್ಯಾಯಾಲಯವು 32 ವರ್ಷದ ಅಪರಾಧಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ. ಇದರೊಂದಿಗೆ 3 ಲಕ್ಷದ 11 ಸಾವಿರ ರೂಪಾಯಿಗಳ ದಂಡವನ್ನು ವಿಧಿಸಲಾಗಿದ್ದು, ಈ ಮೊತ್ತವನ್ನು ಸಂತ್ರಸ್ತ ಬಾಲಕಿಗೆ ನೀಡಲಾಗುವುದು. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರವು ಸಂತ್ರಸ್ತ ಬಾಲಕಿಗೆ ಸಾಕಷ್ಟು ಪರಿಹಾರ ನೀಡಲು ನಿರ್ದೇಶನ ನೀಡಿದೆ. ಅತ್ಯಾಚಾರ ಘಟನೆ ಆಗಸ್ಟ್ 4, 2021 ರಂದು ನಡೆದಿತ್ತು.

ಸಂಪಾದಕೀಯ ನಿಲುವು

ಇಂತಹವರನ್ನು ಜೀವಮಾನವಿಡೀ ಸಾಕುವುದಕ್ಕಿಂತ ಅವರಿಗೆ ಗಲ್ಲು ಶಿಕ್ಷೆ ವಿಧಿಸುವ ಆವಶ್ಯಕತೆಯಿದೆ