ಯೋಗಗುರು ಪದ್ಮಶ್ರೀ ಶಿವಾನಂದ ಬಾಬಾ ಅವರು 128 ನೇ ವಯಸ್ಸಿನಲ್ಲಿ ನಿಧನ

ವಾರಣಾಸಿ (ಉತ್ತರ ಪ್ರದೇಶ) – ಇಲ್ಲಿನ ಯೋಗಗುರು ಪದ್ಮಶ್ರೀ ಶಿವಾನಂದ ಬಾಬಾ ಅವರು ಮೇ 3 ರಂದು ರಾತ್ರಿ ನಿಧನರಾದರು, ಅವರಿಗೆ 128 ವರ್ಷ ವಯಸ್ಸಾಗಿತ್ತು. ಬನಾರಸ ಹಿಂದೂ ವಿಶ್ವವಿದ್ಯಾಲಯದ ಆಸ್ಪತ್ರೆಯಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಅವರ ಪಾರ್ಥಿವ ಶರೀರವನ್ನು ದುರ್ಗಾಕುಂಡ ಆಶ್ರಮಕ್ಕೆ ತರಲಾಯಿತು. ಮೇ 4 ರಂದು ಇಲ್ಲಿನ ಹರಿಶ್ಚಂದ್ರ ಘಾಟ್ ನಲ್ಲಿ ಅವರ ಅಂತ್ಯಕ್ರಿಯೆ ನೆರವೇರಿತು. ದುರ್ಗಾಕುಂಡ್ ನ ಕಬೀರ್ ನಗರದಲ್ಲಿ ಸ್ವಾಮಿ ಶಿವಾನಂದರ ಆಶ್ರಮವಿದೆ. ಈ ವಯಸ್ಸಿನಲ್ಲಿಯೂ ಅವರು ನಿಯಮಿತವಾಗಿ ಯೋಗಾಭ್ಯಾಸ ಮಾಡುತ್ತಿದ್ದರು. ತಮ್ಮ ಉತ್ತಮ ಆರೋಗ್ಯಕ್ಕೆ ಶಿಸ್ತುಬದ್ಧ ದಿನಚರಿ, ಯೋಗ, ಪ್ರಾಣಾಯಾಮ ಮತ್ತು ಮನೆಮದ್ದುಗಳೇ ಕಾರಣ ಎಂದು ಅವರು ಹೇಳುತ್ತಿದ್ದರು.