American Hindu Demand : ಪಹಲ್ಗಾಮ್ ದಾಳಿಗೆ ಪಾಕಿಸ್ತಾನವನ್ನು ಹೊಣೆಗಾರರನ್ನಾಗಿ ಮಾಡಿ! – ಅಮೆರಿಕದ ಹಿಂದೂ ಸಂಘಟನೆಗಳ ಆಗ್ರಹ

ವಾಷಿಂಗ್ಟನ್ – ಭಾರತದ ಪಹಲ್ಗಾಮ್‌ನಲ್ಲಿ ಪಾಕಿಸ್ತಾನ ಪ್ರೇರಿತ ಇಸ್ಲಾಮಿ ಭಯೋತ್ಪಾದಕರು ನಡೆಸಿದ ದಾಳಿಗೆ ಪಾಕಿಸ್ತಾನವನ್ನು ಹೊಣೆಗಾರರನ್ನಾಗಿ ಮಾಡಬೇಕು ಎಂದು ಅಮೆರಿಕದ ೧೩ ಹಿಂದೂ ಸಂಘಟನೆಗಳನ್ನು ಒಳಗೊಂಡ ಜಂಟಿಯಾಗಿ ಹಿಂದೂ ಗುಂಪುಗಳು ಇತ್ತೀಚೆಗೆ ಆಗ್ರಹಿಸಿವೆ. ಪಹಲ್ಗಾಮ್ ದಾಳಿಯನ್ನು ವಿರೋಧಿಸಿ ಹಿಂದೂ ಸಂಘಟನೆಗಳು ಅಮೆರಿಕದ ವಿವಿಧ ನಗರಗಳಲ್ಲಿ ಶಾಂತಿಯುತ ಪ್ರತಿಭಟನೆಗಳನ್ನು ನಡೆಸಿದವು. ಪಹಲ್ಗಾಮ್‌ನಲ್ಲಿ ಹಿಂದೂಗಳ ಹತ್ಯಾಕಾಂಡವು ಕಾಶ್ಮೀರದ ಹಿಂದೂಗಳ ಮೇಲಿನ ದಾಳಿಯ ದೀರ್ಘ ಇತಿಹಾಸದಲ್ಲಿನ ಗುರಿಯಾಗಿಸಲಾದ ಧಾರ್ಮಿಕ ಹಿಂಸಾಚಾರದ ಇತ್ತೀಚಿನ ಹೇಯ ಕೃತ್ಯವಾಗಿದೆ. ಈ ಹಿಂದೆ ೧೯೯೦ ರಲ್ಲಿ ಸುಮಾರು ೪ ಲಕ್ಷ ಕಾಶ್ಮೀರಿ ಹಿಂದೂಗಳ ನರಮೇಧ, ೨೦೦೦ ರಲ್ಲಿ ನಡೆದ ಅಮರನಾಥ ಹತ್ಯಾಕಾಂಡ (೩೨ ಸಾವು) ಮತ್ತು ೨೦೦೨ ರಲ್ಲಿ ನಡೆದ ಕಾಸಿಮ್‌ನಗರ ಹತ್ಯಾಕಾಂಡ (೨೯ ಸಾವು) ಗುರಿಯಾಗಿಸಲಾದ ಧಾರ್ಮಿಕ ಹಿಂಸಾಚಾರದ ಘಟನೆಗಳಾಗಿವೆ.

ಹಿಂದೂಗಳು ಕೈಯಲ್ಲಿ ಮೇಣದಬತ್ತಿಗಳನ್ನು ಹಿಡಿದು ಪ್ರತಿಭಟನೆ ನಡೆಸಿದರು. ಈ ಸಂದರ್ಭದಲ್ಲಿ ಪ್ರತಿಭಟನಾಕಾರರು ‘ಪಹಲ್ಗಾಮ್‌ಗೆ ನ್ಯಾಯ’, ‘ಪಾಕಿಸ್ತಾನ ಪ್ರೇರಿತ ಇಸ್ಲಾಮಿ ಭಯೋತ್ಪಾದನೆಯನ್ನು ನಿಲ್ಲಿಸಿ’ ಮತ್ತು ‘ಹಿಂದೂಗಳ ಹತ್ಯೆಯನ್ನು ನಿಲ್ಲಿಸಿ’ ಎಂಬ ಫಲಕಗಳನ್ನು ಹಿಡಿದಿದ್ದರು.