
ಅಮೃತಸರ (ಪಂಜಾಬ್) – ಪಾಕಿಸ್ತಾನಕ್ಕಾಗಿ ಬೇಹುಗಾರಿಕೆ ನಡೆಸುತ್ತಿದ್ದ ಪಲಕ ಶೇರ ಮಸಿಹ ಮತ್ತು ಸೂರಜ ಮಸಿಹ ಎಂಬ ಇಬ್ಬರನ್ನು ಪಂಜಾಬ ಪೊಲೀಸರು ಬಂಧಿಸಿದ್ದಾರೆ. ಈ ಇಬ್ಬರೂ ಭಾರತೀಯ ಸೇನೆಯ ಮಾಹಿತಿಯನ್ನು ಪಾಕಿಸ್ತಾನಕ್ಕೆ ಕಳುಹಿಸುತ್ತಿದ್ದರು. ಅವರಿಗೆ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐ.ಎಸ್.ಐ. ಜೊತೆ ಸಂಬಂಧವಿದ್ದು, ಇದಕ್ಕಾಗಿ ಹರಪ್ರೀತ್ ಸಿಂಗ್ ಅಲಿಯಾಸ್ ಪಿಟ್ಟು ಅಲಿಯಾಸ್ ಹ್ಯಾಪಿ ನೇತೃತ್ವವಹಿಸಿದ್ದ. ಪಿಟ್ಟು ಸದ್ಯ ಅಮೃತಸರದ ಕೇಂದ್ರ ಕಾರಾಗೃಹದಲ್ಲಿದ್ದಾನೆ. ಈ ಇಬ್ಬರೂ ಸೇನಾ ಶಿಬಿರಗಳು ಮತ್ತು ವಾಯುನೆಲೆಗಳ ಛಾಯಾಚಿತ್ರಗಳನ್ನು ಪಾಕಿಸ್ತಾನಕ್ಕೆ ಕಳುಹಿಸಿದ್ದಾರೆ.
🚨 Palak Sher Masih and Suraj Masih arrested by Punjab Police for spying for Pakistan! 🇵🇰
Government must ensure a swift trial and the harshest punishment! 🇮🇳#IndianArmy #IndiaPakistanWar #PahalgamTerroristAttack #Amritsar pic.twitter.com/pt9w0S6HFK
— Sanatan Prabhat (@SanatanPrabhat) May 4, 2025
ಸಂಪಾದಕೀಯ ನಿಲುವುಇಂತಹವರ ವಿರುದ್ಧ ತ್ವರಿತ ವಿಚಾರಣೆ ನಡೆಸಿ ಗಲ್ಲು ಶಿಕ್ಷೆ ವಿಧಿಸಲು ಸರಕಾರ ಪ್ರಯತ್ನಿಸಬೇಕು! |