Assam CM Orders Strict Action : ‘ಪಾಕಿಸ್ತಾನ ಜಿಂದಾಬಾದ’ ಎಂದು ಹೇಳುವವರ ಕಾಲುಗಳನ್ನು ಮುರಿಯಿರಿ!

ಆಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಸರಮಾ ಅವರಿಂದ ಪೊಲೀಸರಿಗೆ ಆದೇಶ

ಧುಬಡಿ (ಆಸ್ಸಾಂ) – ಪಾಕಿಸ್ತಾನಿ ಭಯೋತ್ಪಾದಕರು ಬಂದು ಮುಗ್ಧ ಜನರನ್ನು ಕೊಂದರು; ಆದರೆ ನಮ್ಮಲ್ಲಿ ಕೆಲವರು ‘ಪಾಕಿಸ್ತಾನ ಜಿಂದಾಬಾದ್’ ಎಂದು ಹೇಳುತ್ತಿದ್ದಾರೆ. ನಾವು ಅವರಲ್ಲಿ ಅನೇಕರನ್ನು ಬಂಧಿಸಿದ್ದೇವೆ. ಯಾರಾದರೂ ‘ಪಾಕಿಸ್ತಾನ ಜಿಂದಾಬಾದ್’ ಎಂದು ಹೇಳಿದರೆ, ನಾವು ಅವರ ಕಾಲುಗಳನ್ನು ಮುರಿಯುತ್ತೇವೆ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಸರಮಾ ಹೇಳಿದ್ದಾರೆ. ಅವರು ಇಲ್ಲಿನ ಸಭೆಯಲ್ಲಿ ಮಾತನಾಡುತ್ತಿದ್ದರು.

ಮುಖ್ಯಮಂತ್ರಿ ಸರಮಾ ಅವರು ಮಾತು ಮುಂದುವರೆಸುತ್ತಾ, ‘ಪಾಕಿಸ್ತಾನ ಜಿಂದಾಬಾದ್’ ಎಂದು ಹೇಳುವವರ ಮುಖಗಳನ್ನು ನೋಡಬೇಡಿ, ಕಾನೂನಿನ ಪ್ರಕಾರ ಅವರನ್ನು ಬಂಧಿಸಿ ಮತ್ತು ಅವರ ಕಾಲುಗಳನ್ನು ಮುರಿಯಿರಿ ಎಂದು ಪೊಲೀಸರಿಗೆ ಸೂಚನೆ ನೀಡಿದ್ದೇನೆ. ನಾವು ನಮ್ಮ ಆಸ್ಸಾಂ ಮತ್ತು ಭಾರತವನ್ನು ಬಲಪಡಿಸಬೇಕಾಗಿದೆ. ಭಾರತದ ಅನ್ನ ತಿಂದು ಪಾಕಿಸ್ತಾನವನ್ನು ಹೊಗಳುವ ಇಂತಹ ಜನರ ಅಗತ್ಯ ನಮಗಿಲ್ಲ.”, ಎಂದು ಹೇಳಿದರು.

ಸಂಪಾದಕೀಯ ನಿಲುವು

ಇಂತಹ ದೇಶದ್ರೋಹಿಗಳಿಗೆ ಗಲ್ಲು ಶಿಕ್ಷೆ ವಿಧಿಸುವ ಕಾನೂನು ಜಾರಿಗೆ ತರಬೇಕು ಮತ್ತು ಅದನ್ನು ಕೆಲವೇ ದಿನಗಳಲ್ಲಿ ಕಾರ್ಯಗತಗೊಳಿಸಬೇಕು!