ನವದೆಹಲಿ – ಭಾರತವು ಪಾಕಿಸ್ತಾನದೊಂದಿಗೆ ನಡೆಸುತ್ತಿದ್ದ ಆಮದು ಮತ್ತು ರಫ್ತುಗಳನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಿದೆ. ಕೇಂದ್ರ ವಾಣಿಜ್ಯ ಸಚಿವಾಲಯ ಈ ನಿರ್ಧಾರವನ್ನು ತೆಗೆದುಕೊಂಡಿದೆ. ಅದರ ಪ್ರಕಾರ, ಮುಂದಿನ ಆದೇಶ ಬರುವವರೆಗೆ ಪಾಕಿಸ್ತಾನದ ಯಾವುದೇ ವಸ್ತುಗಳು ಭಾರತಕ್ಕೆ ಬರುವುದಿಲ್ಲ. ಪಾಕಿಸ್ತಾನದಲ್ಲಿ ತಯಾರಾದ ಅಥವಾ ಪಾಕಿಸ್ತಾನಕ್ಕೆ ಸಂಬಂಧಿಸಿದ ಯಾವುದೇ ವಸ್ತುವು ಭಾರತಕ್ಕೆ ಬರುವುದಿಲ್ಲ. ಆಮದು ಅಗತ್ಯವಿದ್ದರೆ, ಅದಕ್ಕಾಗಿ ಭಾರತ ಸರಕಾರದ ವಿಶೇಷ ಅನುಮತಿ ಪಡೆಯುವುದು ಕಡ್ಡಾಯ ಎಂದು ವಿದೇಶಾಂಗ ವ್ಯಾಪಾರ ಮಹಾನಿರ್ದೇಶನಾಲಯ ಸ್ಪಷ್ಟಪಡಿಸಿದೆ.
ಭಾರತ ಮತ್ತು ಪಾಕಿಸ್ತಾನದ ನಡುವಿನ ವ್ಯಾಪಾರ ಸಂಬಂಧಗಳು ಸೀಮಿತವಾಗಿವೆ; ಆದರೆ ಎರಡೂ ದೇಶಗಳು ಪರಸ್ಪರ ಕೆಲವು ವಸ್ತುಗಳನ್ನು ಆಮದು-ರಫ್ತು ಮಾಡುತ್ತವೆ. ಪಾಕಿಸ್ತಾನವು ಭಾರತಕ್ಕೆ ಒಣ ಹಣ್ಣುಗಳು, ಕಲ್ಲಂಗಡಿ, ಸಿಮೆಂಟ್, ಸೈಂಧವ ಲವಣವನ್ನು ರಫ್ತು ಮಾಡುತ್ತದೆ ಮತ್ತು ಭಾರತದಿಂದ ಕಲ್ಲು, ಸುಣ್ಣಕಲ್ಲು, ಕನ್ನಡಕಕ್ಕೆ ಬೇಕಾದ ಆಪ್ಟಿಕಲ್ ವಸ್ತುಗಳು, ಹತ್ತಿ, ಉಕ್ಕು, ಸಾವಯವ ರಾಸಾಯನಿಕಗಳು, ಲೋಹ ಸಂಯುಕ್ತಗಳು ಮತ್ತು ಚರ್ಮದ ವಸ್ತುಗಳನ್ನು ಆಮದು ಮಾಡಿಕೊಳ್ಳುತ್ತದೆ.”