ಚರ್ಚ್‌ ನಿಂದ ವಿವಾಹಿತ ಸದಸ್ಯರಿಗೆ ಆದೇಶ; ಧರ್ಮ ಉಳಿಯಲು ಹೆಚ್ಚು ಮಕ್ಕಳನ್ನು ಹೆರಬೇಕು!

ಐಜ್ವಾಲ್ (ಮಿಜೋರಾಂ) – ಮಿಜೋರಾಂನ ಎರಡನೇ ಅತಿ ದೊಡ್ಡ ಚರ್ಚ್ ಸಂಪ್ರದಾಯವಾದ ‘ಬ್ಯಾಪ್ಟಿಸ್ಟ್ ಚರ್ಚ್ ಆಫ್ ಮಿಜೋರಾಂ’ (ಬಿಸಿಎಮ್.) ಕ್ರೈಸ್ತರ ಕ್ಷೀಣಿಸುತ್ತಿರುವ ಜನಸಂಖ್ಯೆಯ ಹಿನ್ನೆಲೆಯಲ್ಲಿ ‘ಬೇಬಿ ಬೂಮ್’ ಅಂದರೆ ಹೆಚ್ಚು ಮಕ್ಕಳನ್ನು ಹೆರುವಂತೆ ಕರೆ ನೀಡಿದೆ. ಕ್ರೈಸ್ತ ಪಂಥದ ರಕ್ಷಣೆಗಾಗಿ ಇತ್ತೀಚೆಗೆ ನಡೆದ 129 ನೇ ಸಭೆಯಲ್ಲಿ ಚರ್ಚ್‌ನ ವಿವಾಹಿತ ಸದಸ್ಯರಿಗೆ ಈ ಕರೆ ನೀಡಲಾಗಿದೆ. ಮಿಜೋ ಕ್ರೈಸ್ತ ಸಮುದಾಯದ ಅಸ್ತಿತ್ವ ಮತ್ತು ಗುರುತನ್ನು ಕಾಪಾಡಲು ‘ಬಿಸಿಎಮ್.’ ಜನರು ಈ ಸಮಸ್ಯೆಯ ಬಗ್ಗೆ ಜಾಗೃತರಾಗುವಂತೆ ಮತ್ತು ಹೆಚ್ಚು ಮಕ್ಕಳನ್ನು ಹೆರಲು ಪ್ರೇರೇಪಿಸುವ ನಿರ್ಧಾರವನ್ನು ತೆಗೆದುಕೊಂಡಿದೆ.

೧. ಮಿಜೋರಾಂನ ಒಟ್ಟು ಜನಸಂಖ್ಯೆ 12 ಲಕ್ಷಕ್ಕಿಂತಲೂ ಹೆಚ್ಚಿದೆ; ಆದರೆ ಅಲ್ಲಿನ ಜನನ ಪ್ರಮಾಣದಲ್ಲಿ ಇಳಿಕೆ ಕಂಡುಬಂದಿದೆ. ಮಿಜೋ ಜನಸಂಖ್ಯೆಯು ಇದೇ ಪ್ರಮಾಣದಲ್ಲಿ ಕಡಿಮೆಯಾಗುತ್ತಿದ್ದರೆ, ನಮ್ಮ ಸಮಾಜ, ಧರ್ಮ ಮತ್ತು ಚರ್ಚ್‌ನ ಮೇಲೆ ನಕಾರಾತ್ಮಕ ಪರಿಣಾಮ ಬೀರುವುದೆಂದು ಚರ್ಚ್ ಚಿಂತಿಸುತ್ತಿದೆ.

೨. ಕ್ರೈಸ್ತ ಯುವಕರು ಮಾದಕ ವ್ಯಸನದಿಂದ ದೂರವಿರುವನಂತೆ ಕೂಡ ಚರ್ಚ್ ಕರೆ ನೀಡಿದೆ.

ಸಂಪಾದಕೀಯ ನಿಲುವು

ಯಾವುದಾದರೂ ಹಿಂದುತ್ವವಾದಿ ನಾಯಕರು ಒಂದು ವೇಳೆ ಹಿಂದೂಗಳಿಗೆ ಈ ರೀತಿ ಕರೆ ನೀಡಿದ್ದರೆ, ಜಾತ್ಯಾತೀತ ಗುಂಪುಗಳು, ಪಾಶ್ಚಿಮಾತ್ಯ ಮಾಧ್ಯಮಗಳೆಲ್ಲವೂ ಸೇರಿ ಅವರನ್ನು ಟೀಕಿಸುತ್ತಿದ್ದರು ಮತ್ತು ಅವರ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿಗಳನ್ನು ಸಲ್ಲಿಸುತ್ತಿದ್ದರು. ಆದರೆ ಈ ಮಿಜೋರಾಂ ಘಟನೆ ಬಗ್ಗೆ ಎಲ್ಲರೂ ಮೌನವಾಗಿದ್ದಾರೆ ಎಂಬುದನ್ನು ಗಮನಿಸಿ!