‘ED’ Arrests Mahesh Langa : ‘ಇಡಿ’ದಿಂದ ‘ದಿ ಹಿಂದೂ’ ಪತ್ರಿಕೆಯ ಪತ್ರಕರ್ತ ಮಹೇಶ ಲಾಂಗಾ ಅವರ ಬಂಧನ

ಪತ್ರಿಕೆಯಲ್ಲಿ ಪ್ರಚಾರದ ಆಮಿಷವೊಡ್ಡಿ 20 ಲಕ್ಷ ರೂಪಾಯಿ ಸುಲಿಗೆ ಮಾಡಿರುವ ಆರೋಪ

‘ದಿ ಹಿಂದೂ’ ಪತ್ರಿಕೆಯ ಪತ್ರಕರ್ತ ಮಹೇಶ ಲಾಂಗಾ

ಕರ್ಣಾವತಿ (ಗುಜರಾತ) – ಆರ್ಥಿಕ ವಂಚನೆಗೆ ಸಂಬಂಧಿಸಿದ (ಮನಿ ಲಾಂಡ್ರಿಂಗಗೆ ಸಂಬಂಧಿಸಿದ) ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯವು (ಇಡಿ) ಫೆಬ್ರವರಿ 25 ರಂದು ಗುಜರಾತ್‌ನ ‘ದಿ ಹಿಂದೂ’ ಪತ್ರಿಕೆಯ ಪತ್ರಕರ್ತ ಮಹೇಶ ಲಾಂಗಾನನ್ನು ಬಂಧಿಸಿದೆ. ‘ಇಡಿ’ ಪ್ರಕಾರ ಮಹೇಶ ಲಾಂಗಾ ಅನೇಕ ಆರ್ಥಿಕ ವಂಚನೆಗೆ ಸಂಬಂಧಿಸಿದ ಪ್ರಕರಣಗಳಲ್ಲಿ ಭಾಗಿಯಾಗಿದ್ದ. ಅವರ ಆರ್ಥಿಕ ವ್ಯವಹಾರಗಳಲ್ಲಿ ಸುಲಿಗೆ, ಹಣದ ಬದಲಾವಣೆ ಮತ್ತು ವಿವಿಧ ವ್ಯಕ್ತಿಗಳ ಮೇಲೆ ಮಾಧ್ಯಮ ಪ್ರಭಾವದ ಬಳಕೆ ಸೇರಿದೆ. ಈ ಪತ್ರಕರ್ತ ‘ಜಿಎಸ್ಟಿ ಇನ್ಪುಟ್ ಟ್ಯಾಕ್ಸ್ ಕ್ರೆಡಿಟ್ ಹಗರಣ’ದಲ್ಲಿಯೂ ಭಾಗಿಯಾಗಿದ್ದಾನೆ, ಎಂದು ಇಡಿ ಹೇಳಿದೆ. ನ್ಯಾಯಾಲಯ ಲಾಂಗಾನನ್ನು ವಿಚಾರಣೆಗಾಗಿ 4 ದಿನಗಳ ‘ಇಡಿ’ ಕಸ್ಟಡಿಗೆ ನೀಡಿದೆ.

1. ಜನವರಿ 23 ರಂದು ಕರ್ಣಾವತಿಯ ಸ್ಯಾಟಲೈಟ್ ಪೊಲೀಸ್ ಠಾಣೆಯಲ್ಲಿ ಇಂಗ್ಲಿಷ್ ಪತ್ರಿಕೆ ‘ದಿ ಹಿಂದೂ’ ಪತ್ರಕರ್ತ ಮಹೇಶ ಲಾಂಗಾ ವಿರುದ್ಧ ಪ್ರಕರಣ ದಾಖಲಾಗಿತ್ತು. ಈ ದೂರು ‘ಪ್ರಾಪರ್ಟಿ ಡೀಲರ್’ (ಭೂಮಿ ಖರೀದಿ-ಮಾರಾಟ ವ್ಯವಹಾರ ಮಾಡುವ) ಜನಕ ಠಾಕೋರ ಅವರು ದಾಖಲಿಸಿದ್ದರು. ಅದರಲ್ಲಿ ಅವರು ಲಾಂಗಾ 40 ಲಕ್ಷ ರೂಪಾಯಿ ಸುಲಿಗೆ ಮಾಡಿದ್ದಾರೆ,’ ಎಂದು ಆರೋಪಿಸಿದ್ದರು.

2. ಈ ದೂರಿನ ಪ್ರಕಾರ ಲಾಂಗಾ ಅವರು, ಠಾಕೋರ ಅವರಿಗೆ ‘ದಿ ಹಿಂದೂ’ ನಲ್ಲಿ ಅವರ ಹೆಸರನ್ನು ಪ್ರಕಟಿಸಿದರೆ ಅವರ ವ್ಯವಹಾರಕ್ಕೆ ಬಹಳ ಲಾಭವಾಗುತ್ತದೆ’, ಎಂದು ಹೇಳಿದ್ದರು. ಜನವರಿ 2024 ರಲ್ಲಿ ಲಾಂಗಾ ಅವರು ಠಾಕೋರ ಅವರಿಂದ 20 ಲಕ್ಷ ರೂಪಾಯಿ ಪಡೆದು ಲೇಖನದಲ್ಲಿ ಅವರ ಹೆಸರನ್ನು ಸೇರಿಸಿದ್ದರು. ನಂತರ ಅವರು ಮತ್ತೆ 20 ಲಕ್ಷ ರೂಪಾಯಿ ಕೇಳಿದರು.

3. ಪತ್ರಕರ್ತ ಮಹೇಶ ಲಾಂಗಾ ಅವರನ್ನು ಅಕ್ಟೋಬರ 8, 2024 ರಂದು ‘ಜಿಎಸ್.ಟಿ’ ವಂಚನೆ ಪ್ರಕರಣದಲ್ಲಿ ಬಂಧಿಸಲಾಗಿತ್ತು.

ಸಂಪಾದಕೀಯ ನಿಲುವು

  • ಈ ಆರೋಪಗಳಲ್ಲಿ ಸತ್ಯಾಂಶವಿದ್ದರೆ ಪತ್ರಿಕೋದ್ಯಮದ ಘನತೆ ಎಷ್ಟು ಕುಸಿದಿದೆ, ಎಂಬುದಕ್ಕೆ ಇದು ಮತ್ತೊಂದು ಉದಾಹರಣೆ ಎನ್ನಬಹುದು!
  • ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸುವ ಇಂತಹ ಪತ್ರಕರ್ತರಿಗೆ ಜೀವಾವಧಿ ಕಠಿಣ ಶಿಕ್ಷೆಯನ್ನೇ ವಿಧಿಸಬೇಕು !