Advocate Vishnu Jain : ಪ್ರಶಸ್ತಿ ಪ್ರದಾನ ಸಮಾರಂಭಕ್ಕಾಗಿ ವಕೀಲ ವಿಷ್ಣು ಶಂಕರ್ ಜೈನ್ ಅವರು ಪುಣೆಗೆ ಆಗಮನ !

ಪುಣೆಯ ‘ಸ್ವಾತಂತ್ರ್ಯವೀರ ಸಾವರ್ಕರ್ ಪ್ರಶಸ್ತಿ ಪ್ರದಾನ ಸಮಾರಂಭ 2025’

ಪುಣೆ ವಿಮಾನ ನಿಲ್ದಾಣದಲ್ಲಿ ವಕೀಲ ವಿಷ್ಣು ಶಂಕರ್ ಜೈನ್ ಅವರಿಗೆ ಆರತಿ ಮಾಡುತ್ತಿರುವ ಸನಾತನದ ಸಾಧಕಿ ಸೌ. ವಿನೋದಿನಿ ಭೋಳೆ

ಪುಣೆ, ಫೆಬ್ರವರಿ 26 (ವಾರ್ತಾ.) – ನಿಗಡಿಯ ‘ಸ್ವಾತಂತ್ರ್ಯವೀರ ಸಾವರ್ಕರ್ ಪ್ರಶಸ್ತಿ ಪ್ರದಾನ ಸಮಾರಂಭ 2025’ ಕ್ಕಾಗಿ ಸುಪ್ರೀಂ ಕೋರ್ಟ್‌ನ ವಕೀಲ ವಿಷ್ಣು ಶಂಕರ್ ಜೈನ್ ಅವರು ಫೆಬ್ರವರಿ 26 ರಂದು ಬೆಳಿಗ್ಗೆ 7.30 ಕ್ಕೆ ಪುಣೆ ವಿಮಾನ ನಿಲ್ದಾಣಕ್ಕೆ ಆಗಮಿಸಿದರು. ಈ ಸಂದರ್ಭದಲ್ಲಿ ಸನಾತನ ಸಂಸ್ಥೆಯ ವತಿಯಿಂದ ಸೌ. ವಿನೋದಿನಿ ಭೋಳೆ ಅವರು ಅವರಿಗೆ ಆರತಿ ಮಾಡಿದರು. ಈ ಸಂದರ್ಭದಲ್ಲಿ ಹಿಂದುತ್ವನಿಷ್ಠ ಶ್ರೀ. ಭೂಷಣ ಭೋಳೆ ಮತ್ತು ‘ಸನಾತನ ಪ್ರಭಾತ’ದ ವಾಚಕರು, ಗೋರಕ್ಷಕರು, ಗೋಶಾಲೆ ಚಾಲಕರು ಮತ್ತು ಆಸಾರಾಂ ಬಾಪು ಸಂಪ್ರದಾಯದ ಸಾಧಕ ಶ್ರೀ. ಹೇಮಂತ್ ಉಪರೆ ಉಪಸ್ಥಿತರಿದ್ದರು.


*ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಬಗ್ಗೆ ಗೌರವೋದ್ಘಾರ!*

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ

*ರಾಮನಾಥಿ, ಗೋವಾದ ಸನಾತನ ಆಶ್ರಮ ಮತ್ತು ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಭೇಟಿಯ ಬಗ್ಗೆ ಕೇಳಿದಾಗ, ಅವರು ಸನಾತನ ಆಶ್ರಮದಲ್ಲಿ ಪರತ್ಪರ ಗುರುದೇವ ಅವರನ್ನು ಭೇಟಿಯಾದ ನಂತರವೇ ನನ್ನ ಕಾರ್ಯಕ್ಕೆ ಶಕ್ತಿ ಸಿಕ್ಕಿತು. ಅಲ್ಲಿಯವರೆಗೆ ನಾನು ಯಾರನ್ನೂ ನನ್ನ ಗುರು ಎಂದು ಪರಿಗಣಿಸಿರಲಿಲ್ಲ. ಪರತ್ಪರ ಗುರುಗಳು ಭೇಟಿಯಾದಾಗಿನಿಂದ ಅವರೇ ನನ್ನ ಆಧ್ಯಾತ್ಮಿಕ ಗುರುಗಳು ಮತ್ತು ಅವರೆ ಎಲ್ಲವೂ ಆಗಿದ್ದಾರೆ ಎಂದು ಹೇಳಿದರು. ಇದನ್ನು ಹೇಳುವಾಗ, ಅವರ ಕಣ್ಣುಗಳಲ್ಲಿ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಬಗ್ಗೆ ಅತ್ಯುನ್ನತ ಭಾವ ಕಾಣುತ್ತಿತ್ತು.*