Supreme Court Statement : ಬಾಂಗ್ಲಾ ಹಿಂದೂ ರಕ್ಷಣೆಗೆ ಆದೇಶ ಅಸಾಧ್ಯ: ಸುಪ್ರೀಂ ಕೋರ್ಟ್

ಬಾಂಗ್ಲಾದೇಶದಲ್ಲಿರುವ ಹಿಂದೂಗಳನ್ನು ರಕ್ಷಿಸುವಂತೆ ಕೋರಿ ಸಲ್ಲಿಸಲಾದ ಅರ್ಜಿ ತಿರಸ್ಕಾರ !

ನವದೆಹಲಿ – ಬಾಂಗ್ಲಾದೇಶದಲ್ಲಿ ಹಿಂದೂಗಳು ಮತ್ತು ಇತರ ಅಲ್ಪಸಂಖ್ಯಾತರಿಗೆ ರಕ್ಷಣೆ ನೀಡುವ ಬೇಡಿಕೆಯು ಭಾರತದ ವಿದೇಶಾಂಗ ನೀತಿಗೆ ಸಂಬಂಧಿಸಿದೆ ಮತ್ತು ಭಾರತದ ನ್ಯಾಯಾಂಗ ವ್ಯವಸ್ಥೆಯ ಬೇರೆ ಯಾವುದೇ ದೇಶದ ಆಂತರಿಕ ವ್ಯವಹಾರಗಳಲ್ಲಿ ಹಸ್ತಕ್ಷೇಪ ಮಾಡಲು ಸಾಧ್ಯವಿಲ್ಲ ಎಂದು ಹೇಳುತ್ತಾ, ಈ ಸಂಬಂಧ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸರ್ವೋಚ್ಚ ನ್ಯಾಯಾಲಯ ವಜಾಗೊಳಿಸಿತು.

ಪಂಜಾಬ್‌ನ ಲುಧಿಯಾನದ ಉದ್ಯಮಿ ರಾಜೇಶ್ ಧಾಂಡಾ ಈ ಅರ್ಜಿಯನ್ನು ಸಲ್ಲಿಸಿದ್ದರು. ಅದರಲ್ಲಿ, ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತರ (ಹಿಂದೂಗಳು, ಸಿಖ್ಖರು, ಜೈನರು ಮತ್ತು ಇತರರು) ಸ್ಥಿತಿ ತುಂಬಾ ಕೆಟ್ಟದಾಗಿದೆ. ಬಾಂಗ್ಲಾದೇಶದಲ್ಲಿ ಪ್ರಜಾಪ್ರಭುತ್ವ ಸರಕಾರದ ಪತನದ ನಂತರ, ಧಾರ್ಮಿಕ ಕಟ್ಟರವಾದಿಗಳು ಅಲ್ಲಿನ ಅಲ್ಪಸಂಖ್ಯಾತರ ಮೇಲೆ ದಾಳಿ ಮಾಡುತ್ತಿದ್ದಾರೆ. ಅವರ ವಿರುದ್ಧದ ಸಾಮೂಹಿಕ ಹತ್ಯೆ, ಅಪಹರಣಗಳು, ಆಸ್ತಿ ಕಬಳಿಕೆ ಇತ್ಯಾದಿ ಅಪರಾಧ ಘಟನೆಗಳು ವೇಗವಾಗಿ ಹೆಚ್ಚುತ್ತಿವೆ. ಬಾಂಗ್ಲಾದೇಶದಲ್ಲಿ ಇತ್ತೀಚೆಗೆ ಹಿಂದೂಗಳ ಮೇಲೆ ನಡೆದ ದಾಳಿಗಳನ್ನು ಗಮನದಲ್ಲಿಟ್ಟುಕೊಂಡು, ಪೌರತ್ವ ತಿದ್ದುಪಡಿ ಕಾಯ್ದೆ, 2019 ರ ಅಡಿಯಲ್ಲಿ ನಿರಾಶ್ರಿತರಿಗೆ ನಿಗದಿಪಡಿಸಲಾಗಿದ್ದ ಡಿಸೆಂಬರ್ 31, 2014 ರವರೆಗಿನ ಅಂತಿಮ ಗಡುವನ್ನು (ಈ ದಿನಾಂಕದ ವರೆಗೆ ಭಾರತಕ್ಕೆ ಬಂದಿರುವವರು) ವಿಸ್ತರಿಸಬೇಕು, ಇದರಿಂದಾಗಿ ಹೊಸ ಸಂತ್ರಸ್ಥರಿಗೂ ಭಾರತೀಯ ಪೌರತ್ವ ಸಿಗಬಹುದು, ಎಂದು ಉಲ್ಲೇಖಿಸಲಾಗಿದೆ.

“ಬಾಂಗ್ಲಾದೇಶದಲ್ಲಿ ಧಾರ್ಮಿಕ ಮತ್ತು ರಾಜ್ಯ ಪ್ರಾಯೋಜಿತ ಕಿರುಕುಳವನ್ನು ಎದುರಿಸುತ್ತಿರುವ ಹಿಂದೂಗಳಿಗೆ ಸಹಾಯ ಮಾಡಲು ಭಾರತೀಯ ಹೈಕಮಿಷನ್ ಸಕ್ರಿಯಗೊಳಿಸುವಂತೆ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಮತ್ತು ಗೃಹ ವ್ಯವಹಾರಗಳ ಸಚಿವಾಲಯಕ್ಕೆ ನಿರ್ದೇಶನಗಳನ್ನು ನೀಡುವಂತೆ ಅರ್ಜಿಯಲ್ಲಿ ಕೋರಲಾಗಿತ್ತು.”

ಸಂಪಾದಕೀಯ ನಿಲುವು

ವಾಸ್ತವವಾಗಿ, ಭಾರತದಲ್ಲಿರುವ ಹಿಂದೂಗಳು ಈ ರೀತಿ ನ್ಯಾಯಾಲಯಕ್ಕೆ ಹೋಗುವಂತಾಗಬಾರದು. ಕೇಂದ್ರ ಸರಕಾರವೇ ಬಾಂಗ್ಲಾದೇಶದಲ್ಲಿರುವ ಹಿಂದೂಗಳನ್ನು ರಕ್ಷಿಸಲು ಬಾಂಗ್ಲಾದೇಶದ ಮೇಲೆ ಒತ್ತಡ ಹೇರಬೇಕು ಎಂದು ಪ್ರಪಂಚದಾದ್ಯಂತವಿರುವ ಹಿಂದೂಗಳು ಭಾವಿಸುತ್ತಾರೆ!