ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯ: ಭಾರತದ ಕಳವಳ, ದೆಹಲಿಯಲ್ಲಿ ಸಭೆಗೆ ಅಜಿತ್ ದೋವಲ್ ಉಪಸ್ಥಿತಿ

ನವದೆಹಲಿ- ಇಲ್ಲಿ ಫೆಬ್ರವರಿ 24 ರಂದು ‘ಫೌಂಡೇಶನ್ ಎಗೇನ್ಸ್ಟ್ ಕಂಟಿನ್ಯೂಯಿಂಗ್ ಟೆರರಿಸಂ’ (FACT) ಈ ಸಂಸ್ಥೆಯು ಒಂದು ಪ್ರದರ್ಶನವನ್ನು ಆಯೋಜಿಸಿತ್ತು. ಹಾಗೆಯೇ, ‘ವಿವೇಕಾನಂದ ಇಂಟರ್ನ್ಯಾಶನಲ್ ಫೌಂಡೇಶನ್’ ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯದ ಘಟನೆಗಳ ಕುರಿತು ವಿಚಾರ ಸಂಕಿರಣವನ್ನು ಆಯೋಜಿಸಿತ್ತು. ಇದರಲ್ಲಿ ಅನೇಕ ತಜ್ಞರು, ರಾಜತಾಂತ್ರಿಕ ಅಧಿಕಾರಿಗಳು ಮತ್ತು ಪತ್ರಕರ್ತರು ಭಾಗವಹಿಸಿದ್ದರು. ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಕೂಡ ಇದರಲ್ಲಿ ಭಾಗವಹಿಸಿದ್ದರು. ಈ ಕಾರ್ಯಕ್ರಮದಲ್ಲಿ ಅವರ ಉಪಸ್ಥಿತಿಯು ಬಾಂಗ್ಲಾದೇಶಕ್ಕೆ ಪರೋಕ್ಷ ಎಚ್ಚರಿಕೆ ಎಂದು ಹೇಳಲಾಗುತ್ತಿದೆ. ಅವರು ‘ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತರ ಮೇಲೆ ಆಗುತ್ತಿರುವ ಎಂದಿಗೂ ಮುಗಿಯದ ದೌರ್ಜನ್ಯ’ ವಿಷಯದ ಕುರಿತು ನಡೆದ ಚರ್ಚೆಯಲ್ಲಿ ಭಾಗವಹಿಸಿದ್ದರು. ಚರ್ಚೆಯಲ್ಲಿ ಅವರು ಏನು ಹೇಳಿದರು ಎಂಬುದು ತಿಳಿದಿಲ್ಲ.

ಕೋಲಕಾತಾದಲ್ಲಿ ಅಜಿತ್ ದೋವಲ್ ರಹಸ್ಯ ಸಭೆ

ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಕಳೆದ ವಾರದಲ್ಲಿ ಕೋಲಕಾತಾಗೆ ದಿಢೀರ್ ಭೇಟಿ ನೀಡಿದ್ದರು. ಈ ಭೇಟಿ ಅತ್ಯಂತ ಗೌಪ್ಯವಾಗಿತ್ತು. ಬಂಗಾಳ ಮತ್ತು ಬಾಂಗ್ಲಾದೇಶದ ನಡುವೆ ಹೆಚ್ಚುತ್ತಿರುವ ಅಪಾಯವೇ ಈ ಭೇಟಿಗೆ ಕಾರಣ ಎಂದು ಹೇಳಲಾಗುತ್ತಿದೆ. ಬಂಗಾಳ ನಕ್ಸಲೀಯರಿಗೆ ಮತ್ತು ಜಿಹಾದಿ ಭಯೋತ್ಪಾದಕರಿಗೆ ಸುರಕ್ಷಿತ ಆಶ್ರಯತಾಣವಾಗುತ್ತಿದೆ. ದೋವಲ್ ಗುಪ್ತಚರ ಅಧಿಕಾರಿಗಳೊಂದಿಗೆ ಹಲವು ಸಭೆಗಳನ್ನು ನಡೆಸಿದರು. ಪೂರ್ವ ಮತ್ತು ಈಶಾನ್ಯ ಭಾರತ ರಾಜ್ಯಗಳ ಎಲ್ಲಾ ಗುಪ್ತಚರ ಅಧಿಕಾರಿಗಳು ಈ ಸಭೆಗಳಲ್ಲಿ ಭಾಗವಹಿಸಿದ್ದರು. ಇದರಲ್ಲಿ ಬಾಂಗ್ಲಾದೇಶದಲ್ಲಿ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐ.ಎಸ್.ಐ.ನ (‘ಇಂಟರ್ ಸರ್ವೀಸಸ್ ಇಂಟೆಲಿಜೆನ್ಸ್’ ನ) ಹೆಚ್ಚುತ್ತಿರುವ ಚಟುವಟಿಕೆಗಳ ಬಗ್ಗೆ ಅದು ಕಳವಳ ವ್ಯಕ್ತಪಡಿಸಿದೆ. ಗುಪ್ತಚರ ಸಂಸ್ಥೆಗಳಿಗೆ ಎಚ್ಚರಿಕೆಯಿಂದ ಇರುವಂತೆ ನಿರ್ದೇಶನ ನೀಡಲಾಗಿದೆ. ವಿಶೇಷವಾಗಿ ಬೀರ್ ಭೂಮ, ಮಾಲ್ದಾ, ಮುರ್ಶಿದಾಬಾದ್ ಮತ್ತು ದಕ್ಷಿಣ 24 ಪರಗಣ ಜಿಲ್ಲೆಗಳಲ್ಲಿ ಕಣ್ಗಾವಲು ಇರಿಸಲು ಹೇಳಲಾಗಿದೆ. ಈ ಜಿಲ್ಲೆಗಳಲ್ಲಿ ಅನೇಕ ಮಾನ್ಯತೆ ಇಲ್ಲದ ಮದರಸಾಗಳಿವೆ. ಈ ಮದರಸಾಗಳು ಭಯೋತ್ಪಾದಕರಿಗೆ ಸಹಾಯ ಮಾಡಬಹುದು ಎನ್ನಲಾಗಿದೆ..